ಇಸ್ಲಾಮಾಬಾದ್ (ಪಾಕಿಸ್ತಾನ): ಸರ್ಕಾರ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ ಆರೋಪ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಲಾಹೋರ್ನಲ್ಲಿ ಅವರನ್ನು ಶನಿವಾರ ಬಂಧಿಸಲಾಗಿದೆ.
ತಾವು ಅಧಿಕಾರದಲ್ಲಿದ್ದ ದುಬಾರಿ ಉಡುಗೊರೆಗಳ ಮಾರಾಟ ಮಾಡಿ ಭ್ರಷ್ಟಾಚಾರ ಎಸಗಿದ ಆರೋಪವನ್ನು ಇಮ್ರಾನ್ ಖಾನ್ ಎದುರಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ತೋಷಖಾನಾ ಪ್ರಕರಣ ಎಂದೇ ಖ್ಯಾತಿ ಪಡೆದಿದೆ. ರಾಷ್ಟ್ರೀಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದ ಇದೇ ಪ್ರಕರಣದಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ ಖಾನ್ ಅವರನ್ನು ಅನರ್ಹಗೊಳಿಸಿತ್ತು.
ಇಸ್ಲಾಮಾಬಾದ್ ಮೂಲದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಹುಮಾಯಾನ್ ದಿಲಾವರ್, ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾದ ಇಮ್ರಾನ್ ಖಾನ್ ವಿರುದ್ಧದ ಆಸ್ತಿಗಳ ಕುರಿತು ತಪ್ಪು ಘೋಷಣೆಯ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ. ಈ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
-
VIDEO | Former Pakistan PM Imran Khan being taken to jail after he was arrested from his Lahore's Zaman Park residence.
— Press Trust of India (@PTI_News) August 5, 2023 " class="align-text-top noRightClick twitterSection" data="
A court in Pakistan sentenced him to three years in prison in Toshakhana corruption case in which he is accused of profiting from selling expensive state… pic.twitter.com/iq9NDskeeX
">VIDEO | Former Pakistan PM Imran Khan being taken to jail after he was arrested from his Lahore's Zaman Park residence.
— Press Trust of India (@PTI_News) August 5, 2023
A court in Pakistan sentenced him to three years in prison in Toshakhana corruption case in which he is accused of profiting from selling expensive state… pic.twitter.com/iq9NDskeeXVIDEO | Former Pakistan PM Imran Khan being taken to jail after he was arrested from his Lahore's Zaman Park residence.
— Press Trust of India (@PTI_News) August 5, 2023
A court in Pakistan sentenced him to three years in prison in Toshakhana corruption case in which he is accused of profiting from selling expensive state… pic.twitter.com/iq9NDskeeX
ಈ ನ್ಯಾಯಾಲಯ ತೀರ್ಪಿನ ನಂತರ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಪೊಲೀಸರು ಹಾಗೂ ಪಂಜಾಬ್ ಪೊಲೀಸರು ಜಂಟಿಯಾಗಿ ಲಾಹೋರ್ನಲ್ಲಿರುವ ನಿವಾಸದಲ್ಲಿ ಬಂಧಿಸಿದ್ದಾರೆ. 'ಇಮ್ರಾನ್ ಖಾನ್ ಕೋಟ್ ಲಖ್ಪತ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ' ಎಂದು ಪಕ್ಷವು ಟ್ವೀಟ್ ಮಾಡಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಶೇಷ ಸಹಾಯಕ ಅತ್ತಾವುಲ್ಲಾ ತರಾರ್ ಖಾನ್ ಇಮ್ರಾನ್ ಬಂಧನ ವಿಷಯವನ್ನು ಖಚಿತ ಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ತರಾರ್ ಖಾನ್, ಇಮ್ರಾನ್ ಖಾನ್ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇರಿಸಬೇಕೆ ಅಥವಾ ಬೇರೆಡೆ ಇರಿಸಬೇಕೆ ಎಂದು ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ತೋಷಖಾನವು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿರುವ ಒಂದು ಇಲಾಖೆಯಾಗಿದೆ. ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸುತ್ತದೆ. ಇಮ್ರಾನ್ ಖಾನ್ ಅವರು ಬೆಲೆಬಾಳುವ ವಾಚ್ ಸೇರಿದಂತೆ ಕೆಲ ಉಡುಗೊರೆಗಳನ್ನು ತಮ್ಮ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ: Pakistan: ಪಾಕಿಸ್ತಾನ ಚುನಾವಣೆ- ಛಿದ್ರವಾದ ಇಮ್ರಾನ್ ಪಕ್ಷ, ಆಡಳಿತಾರೂಢ ಮೈತ್ರಿಕೂಟದ ಹಾದಿ ಸುಗಮ