ಸೇಂಟ್ಪಾಲ್ (ಯುಎಸ್): ಪಾಕಿಸ್ತಾನಿ ವೈದ್ಯ ಮತ್ತು ಮಾಜಿ ಮೇಯೊ ಕ್ಲಿನಿಕ್ ರಿಸರ್ಚ್ ಕೋ ಆರ್ಡಿನೇಟರ್ವೊಬ್ಬ ಐಸಿಸ್ ಭಯೋತ್ಪಾದಕರಿಗೆ ಬೆಂಬಲ ನೀಡಿ, ಮಿನ್ನೇಸೋಟದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಮುಂದಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮುಹಮ್ಮದ್ ಮಸೂದ್ ವಿದೇಶಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಲು ಪ್ರಯತ್ನಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಸೂದ್ 2020 ರ ಜನವರಿಯಲ್ಲಿ ಕೆಲಸದ ವೀಸಾದ ಮೇಲೆ ಅಮೆರಿಕಕ್ಕೆ ಆಗಮಿಸಿದ್ದಾನೆ. ಕೆಲಸದ ಜೊತೆ ಅಮೆರಿಕದಲ್ಲಿ ದಾಳಿ ನಡೆಸುವ ಬಯಕೆಯನ್ನು ಹೊಂದಿದ್ದ ಎನ್ನಲಾಗಿದೆ. ಜೊತೆಗೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ಸದಸ್ಯರು ಮತ್ತು ನಾಯಕರ ಪರ ಹಲವಾರು ಹೇಳಿಕೆಗಳನ್ನು ನೀಡಿದ್ದಾನೆ. ಐಸಿಸ್‌ಗಾಗಿ ಹೋರಾಡಲು ಸಿರಿಯಾಕ್ಕೆ ಪ್ರಯಾಣಿಸುವ ಬಯಕೆಯನ್ನು ಹೊಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಮಸೂದ್ ಮಿನ್ನೇಸೋಟದ ರೋಚೆಸ್ಟರ್‌ನಲ್ಲಿರುವ ವೈದ್ಯಕೀಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದ. ಆದರೆ, ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಕ್ಲಿನಿಕ್‌ನಲ್ಲಿ ಉದ್ಯೋಗಿಯಾಗಿರಲಿಲ್ಲ ಎಂದು ಮೇಯೊ ಕ್ಲಿನಿಕ್ ದೃಢಪಡಿಸಿದೆ.
ಇದನ್ನೂ ಓದಿ: IS ಉಗ್ರ ಸಂಘಟನೆ ಜೊತೆ ವಿದೇಶದಲ್ಲಿ 66 ಭಾರತ ಮೂಲದ ಉಗ್ರರು ಸಕ್ರಿಯ : ಅಮೆರಿಕ ವರದಿ