ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು. ನನ್ನ ದೇಶದ ಜನರು ಯಾರ ಮುಂದೆಯೂ ತಲೆಬಾಗಲು ನಾನು ಬಿಡಲ್ಲ. ಪಾಕಿಸ್ತಾನದಲ್ಲಿ ಸದ್ಯ ಹೇಳಲಾರದ ಸ್ಥಿತಿ ನಿರ್ಮಾಣಗೊಂಡಿದೆ. ನನ್ನ ಮನದ ಮಾತು ಪಾಕಿಸ್ತಾನದ ಜನತೆ ಮುಂದಿಡುವ ಉದ್ದೇಶದಿಂದ ಭಾಷಣ ಮಾಡುತ್ತಿದ್ದೇನೆ. ಇಲ್ಲಿನ ಜನರ ಸೇವೆ ಮಾಡುವ ಕಾರಣಕ್ಕಾಗಿ ನಾನು ರಾಜಕಾರಣಕ್ಕೆ ಬಂದಿದ್ದು, ಅನೇಕ ರೀತಿಯ ಏರಿಳಿತ ಕಂಡಿದ್ದೇನೆ ಎಂದರು.
ಇತರೆ ರಾಷ್ಟ್ರಗಳ ಎದುರು ನಾವು ಇರುವೆಗಳಂತೆ ಸಾಗುತ್ತಿದ್ದೇವೆ. ನಮ್ಮ ವಿದೇಶಾಂಗ ನೀತಿ ಸ್ವಾತಂತ್ರ್ಯ ಬಯಸುತ್ತಿದ್ದು, ಭಾರತವನ್ನ ನಾವು ಯಾವುದೇ ವಿಷಯದಲ್ಲೂ ವಿರೋಧ ಮಾಡಿಲ್ಲ. 9/11 ದಾಳಿಯಲ್ಲಿ ಪಾಕಿಸ್ತಾನದ ನಾಗರಿಕರು ಭಾಗಿಯಾಗಿರಲಿಲ್ಲ ಎಂದಿರುವ ಇಮ್ರಾನ್ ಖಾನ್, ಹಳೆ ಜಿಹಾದಿ ಸಂಘಟನೆಗಳು ಪಾಕ್ ವಿರುದ್ಧ ಒಂದಾಗಿ ಈ ಕೆಲಸ ಮಾಡ್ತಿವೆ. ಕಾಶ್ಮೀರ್ ವಿಚಾರದಲ್ಲಿ ನನಗೆ ಭಾರತದೊಂದಿಗೆ ಯಾವುದೇ ರೀತಿಯ ಭಿನ್ನಾಬಿಪ್ರಾಯವಿಲ್ಲ ಎಂದಿರುವ ಅವರು, ಆರ್ಟಿಕಲ್ 370 ರದ್ದುಗೊಳಿಸುವ ಮುನ್ನ ಅದರ ವಿರುದ್ಧ ನಾನು ಮಾತನಾಡಿಲ್ಲ ಎಂದಿದ್ದಾರೆ. ಪ್ರಧಾನಿ ಹುದ್ದೆಗೆ ನಾನು ರಾಜೀನಾಮೆ ನೀಡಲ್ಲ. ಪಾಕಿಸ್ತಾನದಲ್ಲಿ ಉಂಟಾಗಿರುವ ಅಸ್ಥಿರತೆಗೆ ಅಮೆರಿಕ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
#WATCH | Islamabad: In his address to the nation, Pakistan Prime Minister Imran Khan claims that a foreign nation sent a message to them (Pakistan) that Imran Khan needs to be removed else Pakistan will suffer consequences. pic.twitter.com/aTGUh9HqSe
— ANI (@ANI) March 31, 2022 " class="align-text-top noRightClick twitterSection" data="
">#WATCH | Islamabad: In his address to the nation, Pakistan Prime Minister Imran Khan claims that a foreign nation sent a message to them (Pakistan) that Imran Khan needs to be removed else Pakistan will suffer consequences. pic.twitter.com/aTGUh9HqSe
— ANI (@ANI) March 31, 2022#WATCH | Islamabad: In his address to the nation, Pakistan Prime Minister Imran Khan claims that a foreign nation sent a message to them (Pakistan) that Imran Khan needs to be removed else Pakistan will suffer consequences. pic.twitter.com/aTGUh9HqSe
— ANI (@ANI) March 31, 2022
ದೇವರು ನನಗೆ ಎಲ್ಲವನ್ನೂ ಕೊಟ್ಟಿರುವುದು ನನ್ನ ಅದೃಷ್ಟವಾಗಿದೆ. ಕೀರ್ತಿ, ಸಂಪತ್ತು ಎಲ್ಲವೂ ನನ್ನ ಬಳಿ ಇದೆ. ನನಗೆ ಏನೂ ಅಗತ್ಯವಿಲ್ಲ ಎಂದಿರುವ ಇಮ್ರಾನ್ ಖಾನ್, ಪಾಕಿಸ್ತಾನ ನನಗಿಂತಲೂ ಕೇವಲ 5 ವರ್ಷ ಹಳೆಯದು. ಸ್ವಾತಂತ್ರ್ಯದ ನಂತರ ಹುಟ್ಟಿರುವ ದೇಶದ 1ನೇ ತಲೆಮಾರಿನವನು ನಾನು ಎಂದು ಹೇಳಿದರು. ಮೈತ್ರಿ ಪಕ್ಷ ಹಾಗೂ ವಿರೋಧ ಪಕ್ಷದಿಂದ ಇಮ್ರಾನ್ ಖಾನ್ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿರುವ ಕಾರಣ, ಸರ್ಕಾರದ ಮೈತ್ರಿ ಪಕ್ಷಗಳು ಬೆಂಬಲವನ್ನು ವಾಪಸ್ ಪಡೆದುಕೊಂಡಿವೆ.
-
When I played cricket for 20 years, the world and those who played cricket with me saw that I play till the last ball. I've never accepted defeat in life. Nobody should think that I will sit at home. I'll come back stronger, whatever may the result be: Pakistan PM Imran Khan pic.twitter.com/xfbrGiT8iO
— ANI (@ANI) March 31, 2022 " class="align-text-top noRightClick twitterSection" data="
">When I played cricket for 20 years, the world and those who played cricket with me saw that I play till the last ball. I've never accepted defeat in life. Nobody should think that I will sit at home. I'll come back stronger, whatever may the result be: Pakistan PM Imran Khan pic.twitter.com/xfbrGiT8iO
— ANI (@ANI) March 31, 2022When I played cricket for 20 years, the world and those who played cricket with me saw that I play till the last ball. I've never accepted defeat in life. Nobody should think that I will sit at home. I'll come back stronger, whatever may the result be: Pakistan PM Imran Khan pic.twitter.com/xfbrGiT8iO
— ANI (@ANI) March 31, 2022
ಭಾರತದ ಪ್ರಧಾನಿ ನರೇಂದ್ರ ಮೋದಿ ಅನೇಕ ಸಲ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಗುಟ್ಟಾಗಿ ಅನೇಕ ಸಲ ನೇಪಾಳದಲ್ಲಿ ಭೇಟಿಯಾಗಿದ್ದಾರೆಂಬ ಆರೋಪ ಮಾಡಿರುವ ಇಮ್ರಾನ್ ಖಾನ್, ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ಪಾಕ್ ವಿರುದ್ಧ ಪಿತೂರಿ ನಡೆಸಿವೆ ಎಂದರು. ರಾಜೀನಾಮೆ ನೀಡುವಂತೆ ಅನೇಕರು ನನಗೆ ಸೂಚನೆ ನೀಡಿದ್ದಾರೆ. ನಾನೇಕೆ ರಾಜೀನಾಮೆ ನೀಡಬೇಕು. ದೇಶಕ್ಕಾಗಿ 20 ವರ್ಷಗಳ ಕಾಲ ಕ್ರಿಕೆಟ್ ಆಡಿರುವೆ. ಕೊನೆಯ ಎಸೆತದವರೆಗೂ ಹೋರಾಟ ಮುಂದುವರೆಸುತ್ತೇನೆ. ಮತ್ತಷ್ಟು ಬಲಿಷ್ಠನಾಗಿ ನಿಮ್ಮ ಮುಂದೆ ಬರಲಿದ್ದೇನೆ ಎಂದರು.