ETV Bharat / international

ವಿಶ್ವದ 4ನೇ ಅತಿದೊಡ್ಡ ಸಾಲಗಾರ ರಾಷ್ಟ್ರ ಪಾಕಿಸ್ತಾನ - ಪಾಕಿಸ್ತಾನ ವಿಶ್ವದ ಅತಿದೊಡ್ಡ ಸಾಲಗಾರ ರಾಷ್ಟ್ರ

ಐಎಂಎಫ್​​ನಿಂದ ಮತ್ತೊಂದು ಹಂತದ ಸಾಲ ಪಡೆಯಲಿರುವ ಪಾಕಿಸ್ತಾನ ಕೆಲವೇ ತಿಂಗಳಲ್ಲಿ ಐಎಂಎಫ್​ನಿಂದ ಸಾಲ ಪಡೆದ ವಿಶ್ವದ ನಾಲ್ಕನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಲಿದೆ.

ವಿಶ್ವದ 4ನೇ ಅತಿದೊಡ್ಡ ಸಾಲಗಾರ ರಾಷ್ಟ್ರ ಪಾಕಿಸ್ತಾನ

author img

By

Published : Jul 3, 2023, 2:10 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಬರುವ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್​) ನಾಲ್ಕನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಲಿದೆ. ಮುಂದಿನ 9 ತಿಂಗಳ ಅವಧಿಯಲ್ಲಿ ಐಎಂಎಫ್​ ಪಾಕಿಸ್ತಾನಕ್ಕೆ 3 ಶತಕೋಟಿ ಡಾಲರ್ ಸಾಲ ಮಂಜೂರು ಮಾಡಲಿದ್ದು, ಇದರ ನಂತರ ಪಾಕಿಸ್ತಾನ ವಿಶ್ವದ ಅತಿದೊಡ್ಡ ಸಾಲಗಾರ ರಾಷ್ಟ್ರಗಳಲ್ಲೊಂದಾಗಲಿದೆ.

1947ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು, ಜಾಗತಿಕ ಸಾಲದಾತರ ಡೇಟಾ ಪ್ರಕಾರ ಮಾರ್ಚ್ 31, 2023ರಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಅತಿ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಮುಂದಿನ 9 ತಿಂಗಳ ಅವಧಿಯಲ್ಲಿ ಮತ್ತೆ 3 ಶತಕೋಟಿ ಸಾಲ ಪಡೆಯುವ ಮೂಲಕ ಪಾಕಿಸ್ತಾನವು ಸಾಲಗಾರರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.

ಮತ್ತೆ 3 ಶತಕೋಟಿ ಡಾಲರ್ ಸಾಲ ನೀಡುವ ಒಪ್ಪಂದಕ್ಕೆ ಐಎಂಎಫ್​ ಬೋರ್ಡ್​ನ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಈ ಸಾಲ 8 ತಿಂಗಳ ವಿಳಂಬದ ನಂತರ ಪಾಕಿಸ್ತಾನಕ್ಕೆ ಸಿಗುತ್ತಿದೆ. ಐಎಂಎಫ್​ನಿಂದ ಸಾಲ ಪಡೆದ ದೇಶಗಳ ವಿಷಯ ನೋಡುವುದಾದರೆ, ಅರ್ಜೆಂಟೀನಾ 46 ಶತಕೋಟಿ ಡಾಲರ ಸಾಲದೊಂದಿಗೆ ಮೊದಲ ಸ್ಥಾನದಲ್ಲಿದೆ, ಈಜಿಪ್ಟ್ 18 ಶತಕೋಟಿ ಡಾಲರ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ, 12.2 ಶತಕೋಟಿ ಡಾಲರ್​ನೊಂದಿಗೆ ಉಕ್ರೇನ್ ಮೂರನೇ ಸ್ಥಾನದಲ್ಲಿದೆ, 8.2 ಶತಕೋಟಿ ಡಾಲರ್​ನೊಂದಿಗೆ ಈಕ್ವೆಡಾರ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 7.4 ಶತಕೋಟಿ ಡಾಲರ್​ಗಳೊಂದಿಗೆ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಈಗ ಐಎಂಎಫ್​ನಿಂದ ಒಟ್ಟು 10.4 ಶತಕೋಟಿ ಮೌಲ್ಯದ ಸಾಲ ಪಡೆಯುವ ಮೂಲಕ ಪಾಕಿಸ್ತಾನವು ಈಕ್ವೆಡಾರ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಐಎಂಎಫ್​ ಸಾಲಗಾರನಾಗಲಿದೆ.

ಉಕ್ರೇನ್‌ನಲ್ಲಿನ ಯುದ್ಧ ಮತ್ತು ದೇಶೀಯ ಆರ್ಥಿಕ ಬಿಕ್ಕಟ್ಟಿನ ಕಾರಣಗಳಿಂದ ಪಾಕಿಸ್ತಾನ ತೀವ್ರ ನಗದು ಕೊರತೆ ಎದುರಿಸುತ್ತಿದೆ ಹಾಗೂ ವಿದೇಶಿ ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಐಎಂಎಫ್​ನಿಂದ ಸಾಲ ಪಡೆದ ಒಟ್ಟು 93 ದೇಶಗಳು ಸಾಲ ಬಾಕಿ ಪಾವತಿಸಬೇಕಿದೆ. ಆದರೆ ಪಾಕಿಸ್ತಾನ ಸೇರಿದಂತೆ ಐಎಂಎಫ್​ನ ಅಗ್ರ 10 ಸಾಲಗಾರ ರಾಷ್ಟ್ರಗಳು ಐಎಂಎಫ್​ಗೆ ಬರಬೇಕಿರುವ ಒಟ್ಟು 155 ಶತಕೋಟಿ ಡಾಲರ್​ ಸಾಲ ಬಾಕಿಯ ಪೈಕಿ ಶೇಕಡಾ 71.7 ರಷ್ಟು ಸಿಂಹ ಪಾಲು ಹೊಂದಿವೆ.

ವರದಿಯ ಪ್ರಕಾರ, ಏಷ್ಯಾದ ಪ್ರದೇಶದಲ್ಲಿ ಅತಿದೊಡ್ಡ ಐಎಂಎಫ್​​ ಸಾಲಗಾರನೆಂಬ "ಬಿರುದು" ಈಗ ಪಾಕಿಸ್ತಾನದ ಪಾಲಾಗಿದೆ. ಶ್ರೀಲಂಕಾ, ನೇಪಾಳ, ಉಜ್ಬೇಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ಅರ್ಮೇನಿಯಾ (ಪಶ್ಚಿಮ ಏಷ್ಯಾ) ಮತ್ತು ಮಂಗೋಲಿಯಾ ಸೇರಿದಂತೆ ಐಎಂಎಫ್​ನಿಂದ ಸಾಲ ಪಡೆದ ಇತರ ಏಷ್ಯಾದ ದೇಶಗಳು ಸಾಲ ಪಡೆಯುವ ವಿಷಯದಲ್ಲಿ ಪಾಕಿಸ್ತಾನಕ್ಕಿಂತ ಬಹಳ ಹಿಂದೆ ಇವೆ. ಪಾಕಿಸ್ತಾನದ ಆರ್ಥಿಕತೆಯು ಕಳೆದ ಕೆಲ ವರ್ಷಗಳಿಂದ ಪತನದ ಹಾದಿಯಲ್ಲಿದೆ. ಅನಿಯಂತ್ರಿತ ಹಣದುಬ್ಬರ ಬಡವರ ಜೀವನವನ್ನು ನರಕವಾಗಿಸಿದೆ. ಕಳೆದ ವರ್ಷದ ವಿನಾಶಕಾರಿ ಪ್ರವಾಹ ಮತ್ತು ಉಕ್ರೇನ್‌ನಲ್ಲಿನ ಯುದ್ಧದ ನಂತರ ಪಾಕಿಸ್ತಾನ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ.

ಇದನ್ನೂ ಓದಿ : ಮೇಕೆದಾಟು ವಿಷಯದಲ್ಲಿ ಕರ್ನಾಟಕವನ್ನು ಏಕೆ ಖಂಡಿಸಿಲ್ಲ? ಸಿಎಂ ಸ್ಟಾಲಿನ್​ಗೆ ಅಣ್ಣಾಮಲೈ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.