ETV Bharat / international

ನೀರಿನ ಬಿಕ್ಕಟ್ಟು.. ಪಾಕಿಸ್ತಾನ ಅಸುರಕ್ಷಿತ ದೇಶ: ಯುಎನ್​ ವರದಿ

author img

By

Published : Mar 25, 2023, 1:03 PM IST

ಯುನೈಟೆಡ್ ನೇಷನ್ಸ್ ಇನ್ಸ್ಟಿಟ್ಯೂಟ್ ಫಾರ್ ವಾಟರ್, ಎನ್ವಿರಾನ್ಮೆಂಟ್ ಮತ್ತು ಹೆಲ್ತ್ 'ಪಾಕಿಸ್ತಾನ ಮತ್ತು ಇತರ 22 ದೇಶಗಳನ್ನು ನಿರ್ಣಾಯಕವಾಗಿ ಕಡಿಮೆ ಮಟ್ಟದ ನೀರಿನ ಸುರಕ್ಷತೆ ಹೊಂದಿರುವ ದೇಶಗಳೆಂದು ಹೆಸರಿಸಿದೆ' ಎಂದು ಪಾಕಿಸ್ತಾನ ಮೂಲದ ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.

representative image
ಪ್ರಾತಿನಿಧಿಕ ಚಿತ್ರ

ಇಸ್ಲಾಮಾಬಾದ್ (ಪಾಕಿಸ್ತಾನ): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಕಹಿ ಸುದ್ದಿ ಬಂದಿದೆ. ಯುನೈಟೆಡ್ ನೇಷನ್ಸ್ ಇನ್ಸ್ಟಿಟ್ಯೂಟ್ ಫಾರ್ ವಾಟರ್, ಎನ್ವಿರಾನ್ಮೆಂಟ್ ಮತ್ತು ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಪಾಕಿಸ್ತಾನ ಮತ್ತು ಇತರ 22 ದೇಶಗಳನ್ನು ನೀರಿನ ಅಸುರಕ್ಷಿತ ವಿಭಾಗದಲ್ಲಿ ಹೆಸರಿಸಲಾಗಿದೆ.

ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯವು ಗುರುವಾರ ಜಾಗತಿಕ ಜಲ ಭದ್ರತೆ(ಗ್ಲೋಬಲ್ ವಾಟರ್ ಸೆಕ್ಯುರಿಟಿ) 2023 ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದೆ. ಇದು ಮೂರು ವಿಭಿನ್ನ ಭೌಗೋಳಿಕ ಪ್ರದೇಶಗಳ ಒಟ್ಟು 33 ದೇಶಗಳು ಉನ್ನತ ಮಟ್ಟದ ನೀರಿನ ಸುರಕ್ಷತೆಯನ್ನು ಹೊಂದಿವೆ. ಆದರೆ ಉಳಿದಂತೆ ಎಲ್ಲಾ ಪ್ರದೇಶಗಳು ಕಡಿಮೆ ಮಟ್ಟದ ನೀರಿನ ಸುರಕ್ಷತೆಯನ್ನು ಹೊಂದಿರುವ ದೇಶಗಳನ್ನು ಒಳಗೊಂಡಿದೆ ಎಂದು ಹೇಳಿದೆ.

ವರದಿಯಲ್ಲಿ ಏನಿದೆ?: ವಿಶ್ವಸಂಸ್ಥೆಯ ಜಲ ತಜ್ಞರು ವಿಶ್ವದ ನೀರಿನ ಸಂಪನ್ಮೂಲಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಪ್ರದೇಶವನ್ನು ಜಾಗತಿಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹೊಂದಿಲ್ಲ ಎಂದು ತಿಳಿಸಿದೆ. ಶೇ.70ಕ್ಕಿಂತ ಹೆಚ್ಚು, ಅಥವಾ 5.5 ಶತಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನ ಸೌಲಭ್ಯ ಹೊಂದಿಲ್ಲ. ಆಫ್ರಿಕಾ ಜನಸಂಖ್ಯೆಯ ಕೇವಲ 15 ಪ್ರತಿಶತವನ್ನು ಮಾತ್ರ ಹೊಂದಿದೆ ಎಂದು ವಿವರಿಸಿದೆ.

ನಾಲ್ವರಲ್ಲಿ ಮೂರು ಜನ ಜಲ-ಅಸುರಕ್ಷಿತ ದೇಶಗಳಲ್ಲಿ ವಾಸ: ನಾಲ್ಕು ಜನರಲ್ಲಿ ಮೂವರು ಪ್ರಸ್ತುತ ಜಲ-ಅಸುರಕ್ಷಿತ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ನೀರು-ಸಂಬಂಧಿತ ವಿಪತ್ತುಗಳಿಂದ ಹೆಚ್ಚು ಜನರು ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ ಸೇವೆಗಳ ಕೊರತೆಯಿಂದ ಸಾಯುತ್ತಿದ್ದಾರೆ. ಪಾಕಿಸ್ತಾನ ಮೂಲದ ಇಂಗ್ಲಿಷ್ ದೈನಿಕವೊಂದರ ಪ್ರಕಾರ "ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಪ್ರಸ್ತುತ ಜಲ-ಅಸುರಕ್ಷಿತ ದೇಶಗಳಾದ ಸೊಲೊಮನ್ ದ್ವೀಪಗಳು, ಎರಿಟ್ರಿಯಾ, ಸುಡಾನ್, ಇಥಿಯೋಪಿಯಾ, ವನವಾಟು, ಅಫ್ಘಾನಿಸ್ತಾನ್, ಜಿಬೌಟಿ, ಹೈಟಿ, ಪಪುವಾ ನ್ಯೂ ಗಿನಿಯಾ, ಸೊಮಾಲಿಯಾ, ಲೈಬೀರಿಯಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಲಿಬಿಯಾ, ಮಡಗಾಸ್ಕರ್, ದಕ್ಷಿಣ ಸುಡಾನ್, ಮೈಕ್ರೋನೇಷಿಯಾ, ನೈಜರ್, ಸಿಯೆರಾ ಲಿಯೋನ್, ಯೆಮೆನ್, ಚಾಡ್, ಕೊಮೊರೊಸ್ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದಾರೆ" ಎಂದು ತಜ್ಞರು ಹೇಳಿದ್ದಾರೆ. ಇದು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ನೀರಿನ ಭದ್ರತೆಯು ಅಭಿವೃದ್ಧಿಗೆ ಮೂಲವಾಗಿದೆ.

ಜಲ ಸುರಕ್ಷಿತ ದೇಶಗಳಿವು: ವರದಿಯ ಪ್ರಕಾರ, ಯುರೋಪಿಯನ್ ರಾಷ್ಟ್ರಗಳಾದ "ಸ್ವೀಡನ್, ಡೆನ್ಮಾರ್ಕ್, ಲಕ್ಸೆಂಬರ್ಗ್, ಆಸ್ಟ್ರಿಯಾ, ನಾರ್ವೆ, ಸ್ವಿಟ್ಜರ್ಲೆಂಡ್, ಫಿನ್ಲ್ಯಾಂಡ್ ಮತ್ತು ಐಸ್ಲ್ಯಾಂಡ್, ಐರ್ಲೆಂಡ್, ಫ್ರಾನ್ಸ್, ಲಿಥುವೇನಿಯಾ, ಗ್ರೀಸ್, ಜರ್ಮನಿ, ಯುಕೆ, ಎಸ್ಟೋನಿಯಾ, ಇಟಲಿ ಸೇರಿದಂತೆ ಇತರ ಯುರೋಪಿಯನ್ ದೇಶಗಳು" ಹೆಚ್ಚು ಜಲ ಸುರಕ್ಷಿತ ದೇಶವಾಗಿದೆ. ಏಷ್ಯಾ ಪೆಸಿಫಿಕ್‌ನಲ್ಲಿ ಜಲ ಸುರಕ್ಷಿತ ರಾಷ್ಟ್ರಗಳೆಂದರೆ ನ್ಯೂಜಿಲೆಂಡ್, ಸೈಪ್ರಸ್, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಕುವೈತ್ ಮತ್ತು ಮಲೇಷ್ಯಾ ಸೇರಿವೆ. ಕೆನಡಾ ಮತ್ತು ಯುಎಸ್‌ಎ ಮಾತ್ರ ಅಮೆರಿಕದಲ್ಲಿ ಜಲ ಸುರಕ್ಷಿತ ಗುಂಪಿನಲ್ಲಿ ಸ್ಥಾನ ಪಡೆದಿವೆ.

"ಆಫ್ರಿಕಾ, ಏಷ್ಯಾ-ಪೆಸಿಫಿಕ್ ಮತ್ತು ಅಮೆರಿಕದಲ್ಲಿ ಹೇರಳವಾದ ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿರುವ ಅನೇಕ ದೇಶಗಳು ಪ್ರವಾಹಗಳು ಅಥವಾ ಅನಾವೃಷ್ಟಿಗಳಿಂದ ತತ್ತರಿಸಿವೆ. ವರದಿಯಲ್ಲಿ ಕೆಲವು ಆತಂಕಕಾರಿ ಅಂಕಿಅಂಶಗಳನ್ನು ಬಹಿರಂಗ ಪಡಿಸಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ (SDG) ಸಂಖ್ಯೆ ಆರು ಎಂದು ಕರೆಯಲ್ಪಡುವ 'ಶುದ್ಧ ನೀರು ಮತ್ತು ಎಲ್ಲರಿಗೂ ನೈರ್ಮಲ್ಯ' ಸಾಧಿಸುವುದರಿಂದ ಜಗತ್ತು ದೂರವಿದೆ ಎಂದು ಪ್ರತಿಪಾದಿಸಿದೆ.

10 ಪ್ರದೇಶಗಳಲ್ಲಿ ಪರಿಶೀಲನೆ: ಯುನ್​ ವರದಿಯು "ಜಗತ್ತಿನಾದ್ಯಂತ ನೀರಿನ ಭದ್ರತೆಯ ಸ್ಥಿತಿಯ ಬಗ್ಗೆ ಹೆಚ್ಚು ವಾಸ್ತವಿಕ ತಿಳುವಳಿಕೆಯನ್ನು ನೀಡಲು 10 ಪ್ರದೇಶಗಳಲ್ಲಿ ನೀರಿನ ಭದ್ರತೆಯನ್ನು ಪರಿಶೀಲಿಸಿದೆ. ಅಧ್ಯಯನವು ಕುಡಿಯುವ ನೀರು, ನೈರ್ಮಲ್ಯ, ಉತ್ತಮ ಆರೋಗ್ಯ, ನೀರಿನ ಗುಣಮಟ್ಟ, ನೀರಿನ ಲಭ್ಯತೆ, ನೀರಿನ ಮೌಲ್ಯ, ಮಾನವ ಸುರಕ್ಷತೆ, ಆರ್ಥಿಕ ಸುರಕ್ಷತೆ ಮತ್ತು ಜಲ ಸಂಪನ್ಮೂಲಗಳ ಸ್ಥಿರತೆ ಒಳಗೊಂಡಿತ್ತು. ವರದಿಯು ಗಂಭೀರವಾಗಿದೆ. ವಿಶ್ವದ ಜನಸಂಖ್ಯೆಯ 78 ಪ್ರತಿಶತ (6.1 ಶತಕೋಟಿ ಜನರು) ಪ್ರಸ್ತುತ ನೀರಿನ ಕೊರತೆಯಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.

ವರದಿಯ ಪ್ರಕಾರ, "ಆಫ್ರಿಕಾದಲ್ಲಿ ನೈರ್ಮಲ್ಯದ ಕೊರತೆಯು ಪ್ರದೇಶದ ಕಳಪೆ ನೀರಿನ ಭದ್ರತೆಗೆ ಕಾರಣವಾಗಿದೆ. 54 ಆಫ್ರಿಕನ್ ದೇಶಗಳಲ್ಲಿ 33 ಕಡಿಮೆ ಅಭಿವೃದ್ಧಿ ಹೊಂದಿದ ಮತ್ತು ಆರು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳು (SIDS), ಜನಸಂಖ್ಯೆಯ ಸುಮಾರು 31 ಪ್ರತಿಶತದಷ್ಟು (411 ದಶಲಕ್ಷಕ್ಕೂ ಹೆಚ್ಚು) ಮೂಲಭೂತ ನೀರಿನ ಪೂರೈಕೆಯ ಕೊರತೆಯಿದೆ" ಎಂದು ಹೇಳಲಾಗಿದೆ. ಕೇವಲ 201 ಮಿಲಿಯನ್ ಜನರು ಸುರಕ್ಷಿತವಾಗಿ ನಿರ್ವಹಿಸಿದ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ್ದಾರೆ.

ಆತಂಕಕ್ಕೆ ಕಾರಣ: ಅಭಿವೃದ್ಧಿಗೆ ನೀರಿನ ಭದ್ರತೆ ಅತ್ಯವಶ್ಯಕವಾಗಿರುವ ಕಾರಣ ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೇರಳವಾದ ನೈಸರ್ಗಿಕ ನೀರಿನ ಲಭ್ಯತೆಯು ನೀರಿನ ಭದ್ರತೆಯನ್ನು ಒದಗಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್‌ ಪಟ್ನಾಯಕ್‌ ಜನಜಾಗೃತಿ ಮರಳು ಕಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.