ETV Bharat / international

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪರಿಷ್ಕರಣೆ

ಪಾಕಿಸ್ತಾನದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.

Election Commission of Pakistan revises schedule for general election 2024

author img

By ANI

Published : Dec 22, 2023, 2:30 PM IST

ಇಸ್ಲಾಮಾಬಾದ್: ಮುಂದಿನ ವರ್ಷ ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕವನ್ನು ಎರಡು ದಿನಗಳವರೆಗೆ ವಿಸ್ತರಿಸುವ ಮೂಲಕ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಶುಕ್ರವಾರ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ. ಡಿಸೆಂಬರ್ 24 ರೊಳಗೆ ನಾಮಪತ್ರಗಳನ್ನು ಸಲ್ಲಿಸಬಹುದು ಎಂದು ಉನ್ನತ ಚುನಾವಣಾ ಆಯೋಗ ಘೋಷಿಸಿದೆ. ಡಿ.24ರಂದು ನಾಮಪತ್ರ ಸಲ್ಲಿಕೆ ಬಳಿಕ ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿ ಬಿಡುಗಡೆ ಮಾಡಲಾಗುವುದು.

ಡಿಸೆಂಬರ್ 25 ರಿಂದ 30 ರವರೆಗೆ ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಪರಿಶೀಲಿಸಲಿದ್ದಾರೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಫೆಬ್ರವರಿ 8, 2024 ರಂದು ನಡೆಯಲಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷವು ನಿನ್ನೆ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ನಾಮಪತ್ರ ಸಲ್ಲಿಸುವ ಗಡುವನ್ನು ಎರಡು ದಿನಗಳವರೆಗೆ ವಿಸ್ತರಿಸುವಂತೆ ಒತ್ತಾಯಿಸಿತ್ತು. ಎಂಕ್ಯೂಎಂ ಪಾಕಿಸ್ತಾನ್ ಮತ್ತು ಜಮಿಯತ್ ಉಲೇಮಾ-ಇ-ಇಸ್ಲಾಂ ಪಕ್ಷಗಳು ಕೂಡ ನಾಮಪತ್ರ ಸಲ್ಲಿಕೆಯ ಗಡುವು ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದವು.

ಚುನಾವಣಾ ಆಯೋಗವು ಈ ಹಿಂದೆ ಹೊರಡಿಸಿದ ಚುನಾವಣಾ ವೇಳಾಪಟ್ಟಿ ಪ್ರಕಾರ, ಅಭ್ಯರ್ಥಿಗಳು ಡಿಸೆಂಬರ್ 20 ರಿಂದ 22ರ ಮಧ್ಯೆ ಆಯಾ ರಿಟರ್ನಿಂಗ್ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕಾಗಿತ್ತು.

ಈ ಹಿಂದೆ, ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅಂದಿನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೂರು ದಿನಗಳ ಮೊದಲೇ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದರು. ಪಾಕಿಸ್ತಾನದ ಸಂವಿಧಾನಕ್ಕೆ ಅನುಗುಣವಾಗಿ 90 ದಿನಗಳ ನಂತರ ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಹಿಂದಿನ ಸರ್ಕಾರವು ಅಸೆಂಬ್ಲಿಯನ್ನು ಅಕಾಲಿಕವಾಗಿ ವಿಸರ್ಜಿಸಿತ್ತು.

ಆದಾಗ್ಯೂ, 2023 ರ ಡಿಜಿಟಲ್ ಜನಗಣತಿಯ ಫಲಿತಾಂಶಗಳನ್ನು ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್ಸ್ (ಸಿಸಿಐ) ಅನುಮೋದಿಸಿದ ನಂತರ ಕ್ಷೇತ್ರಗಳ ಹೊಸ ಡಿಲಿಮಿಟೇಶನ್ ಮೇಲೆ ಕೆಲಸ ಮಾಡಬೇಕಾಗಿರುವುದರಿಂದ 90 ದಿನಗಳ ಗಡುವನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಇಸಿಪಿ ಹೇಳಿದ್ದರಿಂದ 90 ದಿನಗಳ ಒಳಗೆ ಚುನಾವಣೆಗಳು ನಡೆಯಲಿಲ್ಲ. ಇಸಿಪಿ ನಿರ್ಧಾರದ ನಂತರ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮತ್ತು ಇತರ ಪಕ್ಷಗಳು ಸಮಯಾವಧಿಯಲ್ಲಿ ಚುನಾವಣೆ ನಡೆಸುವಂತೆ ಕೋರಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಫೆಬ್ರವರಿ 8 ರಂದು ಚುನಾವಣೆ ನಿಗದಿ ಪಡಿಸಿ ಘೋಷಿಸಲಾಯಿತು.

ಇದನ್ನೂ ಓದಿ : 'ಇಸ್ರೇಲಿಗರ ಬಗ್ಗೆ ನಿಷ್ಕಾಳಜಿ' ರೆಡ್ ಕ್ರಾಸ್ ವಿರುದ್ಧ ಕಾನೂನು ಮೊಕದ್ದಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.