ETV Bharat / international

Pakistan financial crisis: ಪಾಕಿಸ್ತಾನಕ್ಕೆ ಐಎಂಎಫ್ ನೆರವಿನ ಸಾಧ್ಯತೆ ಕ್ಷೀಣ- ಮೂಡೀಸ್ ಅಂದಾಜು - ಪಾಕಿಸ್ತಾನವು ಡೀಫಾಲ್ಟ್ ರಾಷ್ಟ್ರ

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಮತ್ತಷ್ಟು ಹಣಕಾಸು ನೆರವು ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕ ಸಂಸ್ಥೆ ಮೂಡೀಸ್ ಹೇಳಿದೆ.

Pakistan financial crisis: ಪಾಕಿಸ್ತಾನಕ್ಕೆ ಐಎಂಎಫ್ ನೆರವಿನ ಸಾಧ್ಯತೆ ಕ್ಷೀಣ: ಮೂಡೀಸ್ ಅಂದಾಜು
Chances of Pakistan securing IMF bailout are 'dimming': Moody's
author img

By

Published : Jun 14, 2023, 5:51 PM IST

ಕರಾಚಿ (ಪಾಕಿಸ್ತಾನ) : ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯ 6.7 ಶತಕೋಟಿ ಡಾಲರ್ ಹಣಕಾಸು ನೆರವಿನ ಯೋಜನೆಯನ್ನು (bailout programme) ಪುನರಾರಂಭಿಸಲು ಪಾಕಿಸ್ತಾನವು ವಿಫಲಗೊಳ್ಳುವ ಅಪಾಯ ಹೆಚ್ಚಾಗಿದೆ ಎಂದು ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ. ಇದರಿಂದ ಪಾಕಿಸ್ತಾನವು ವಿದೇಶಿ ಸಾಲ ಮರುಪಾವತಿ ಮಾಡಲಾಗದ ದೇಶವಾಗುವ ಸಾಧ್ಯತೆಗಳಿವೆ.

"ಜೂನ್ ಅಂತ್ಯಕ್ಕೆ ಮುಕ್ತಾಯಗೊಳ್ಳುವ ಐಎಂಎಫ್ ಯೋಜನೆಯನ್ನು ಪೂರ್ಣಗೊಳಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿರುವ ಅಪಾಯಗಳು ಹೆಚ್ಚುತ್ತಿವೆ. ಐಎಂಎಫ್ ಹಣಕಾಸು ಸಹಾಯ ಸಿಗದಿದ್ದರೆ ಅತಿ ಕನಿಷ್ಠ ವಿದೇಶಿ ವಿನಿಮಯ ಮೀಸಲು ಹೊಂದಿರುವ ಪಾಕಿಸ್ತಾನವು ಡೀಫಾಲ್ಟ್ ರಾಷ್ಟ್ರವಾಗಬಹುದು." ಎಂದು ಸಿಂಗಾಪುರದ ಮೂಡೀಸ್ ರೇಟಿಂಗ್ ಕಂಪನಿಯ ವಿಶ್ಲೇಷಕ ಗ್ರೇಸ್ ಲಿಮ್ ಹೇಳಿದ್ದಾರೆ.

ಪಾಕಿಸ್ತಾನವು ತನ್ನ ಐಎಂಎಫ್ ನೆರವಿನ ಯೋಜನೆಯನ್ನು ಪುನರುಜ್ಜೀವನಗೊಳಿಸಲು ಅಂತಿಮ ಪ್ರಯತ್ನ ಮಾಡುತ್ತಿದೆ. ಆದರೆ 2 ಶತಕೋಟಿ ಡಾಲರ್ ಮೌಲ್ಯದ ಹಣಕಾಸು ಅಂತರ ಮತ್ತು ವಿನಿಮಯ ದರದ ನೀತಿಯು ಇದಕ್ಕೆ ದೊಡ್ಡ ಅಡಚಣೆಯಾಗಿದೆ. ಶತಕೋಟಿ ಸಾಲದ ಬಾಧ್ಯತೆಗಳನ್ನು ಪೂರೈಸಲು ಸರ್ಕಾರ ವಾಗ್ದಾನ ಮಾಡಿದ್ದರೂ, ಕಳೆದ ವರ್ಷದಿಂದ ಸಂಕಷ್ಟದಲ್ಲಿರುವ ರಾಷ್ಟ್ರದ ಡಾಲರ್ ಬಾಂಡ್‌ಗಳ ವಹಿವಾಟಿನ ಬಗ್ಗೆ ಹೂಡಿಕೆದಾರರು ಸಂದೇಹ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜುಲೈನಲ್ಲಿ ಪ್ರಾರಂಭವಾಗುವ 2023-24 ರ ಆರ್ಥಿಕ ವರ್ಷಕ್ಕೆ ಪಾಕಿಸ್ತಾನವು ಸುಮಾರು 23 ಬಿಲಿಯನ್ ಡಾಲರ್ ಬಾಹ್ಯ ಸಾಲಗಳನ್ನು ಮರುಪಾವತಿ ಮಾಡಬೇಕಿದೆ. ಈ ಮೊತ್ತವು ಅದರ ವಿದೇಶಿ ವಿನಿಮಯ ಮೀಸಲುಗಿಂತ ಸರಿಸುಮಾರು ಐದು ಪಟ್ಟು ಹೆಚ್ಚಾಗಿದೆ. ವಿದೇಶಿ ಸಾಲದ ಪೈಕಿ ಹೆಚ್ಚಿನ ಮೊತ್ತವನ್ನು ರಿಯಾಯಿತಿ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಮೂಲಗಳಿಂದ ತೆಗೆದುಕೊಳ್ಳಲಾಗಿದೆ.

ಅಧಿಕಾರಿಗಳು ಸಾಲ ಮರುರಚನೆಯ ಮಾತುಕತೆಗಳನ್ನು ಬಯಸುತ್ತಿದ್ದಾರೆ ಎಂಬುದನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) ಗವರ್ನರ್ ಜಮೀಲ್ ಅಹ್ಮದ್ ಸೋಮವಾರ ನಿರಾಕರಿಸಿದ್ದಾರೆ. ಜೂನ್‌ನಲ್ಲಿ ದೇಶವು 900 ಮಿಲಿಯನ್ ಡಾಲರ್ ಸಾರ್ವಭೌಮ ಸಾಲವನ್ನು ಪಾವತಿಸುವ ಕಾರಣದಿಂದ ಮತ್ತು 2.3 ಶತಕೋಟಿ ಡಾಲರ್ ಸಾಲಗಳ ಮರುಪಾವತಿಯನ್ನು ಮುಂದೆ ಹಾಕುವ ನಿರೀಕ್ಷೆಯಿದೆ.

ಡಾಲರ್ ಎದುರು ದಾಖಲೆಯ ಕುಸಿತದ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವ ಪಾಕಿಸ್ತಾನ ರೂಪಾಯಿ ಮತ್ತಷ್ಟು ಕುಸಿತಕ್ಕೆ ಒಳಗಾಗಬಹುದು. ವಿನಿಮಯ ದರದ ಬಗ್ಗೆ ಐಎಂಎಫ್​​ನ ಹೇಳಿಕೆಗಳು ಇಂಟರ್‌ಬ್ಯಾಂಕ್ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಅಂತರವನ್ನು ಉಲ್ಲೇಖಿಸಬಹುದು ಎಂದು ಲಿಮ್ ತಿಳಿಸಿದರು.

ಜನವರಿಯಲ್ಲಿ ಅಧಿಕಾರಿಗಳು ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ ನಂತರ ಪಾಕ್ ಕರೆನ್ಸಿಯು ಈ ವರ್ಷ ಶೇಕಡಾ 20 ಕ್ಕಿಂತ ಹೆಚ್ಚು ಮೌಲ್ಯ ಕಳೆದುಕೊಂಡಿದೆ. ಇದು ಜಾಗತಿಕವಾಗಿ ಅತ್ಯಂತ ಕಳಪೆ ಕರೆನ್ಸಿಗಳಲ್ಲಿ ಒಂದಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಸಹ ಎದುರಾಗಿದೆ. ಇದರಿಂದ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ ವಿಪರೀತವಾಗುತ್ತಿದೆ.

ಇದನ್ನೂ ಓದಿ : Covid-19 deaths: ಕೋವಿಡ್​ ಲಸಿಕೆಗಳ ಅಸಮಾನ ಹಂಚಿಕೆಯಿಂದ ಶೇ 50ರಷ್ಟು ಸಾವು- ಅಧ್ಯಯನ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.