ETV Bharat / international

ನ್ಯೂಜೆರ್ಸಿಯ ಶಾಲೆಯಲ್ಲಿ ಓದಿದ್ದ 100 ಜನರಿಗೆ ಮೆದುಳು ಕ್ಯಾನ್ಸರ್! - 100 ಅಧಿಕ ಹಿಂದಿನ ವಿದ್ಯಾರ್ಥಿಗಳಿಗೆ ಮೆದುಳು ಕ್ಯಾನ್ಸರ್​

ನ್ಯೂಜೆರ್ಸಿಯಲ್ಲಿನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿದ್ದ 100ಕ್ಕೂ ಅಧಿಕ ಹಿಂದಿನ ವಿದ್ಯಾರ್ಥಿಗಳಲ್ಲಿ ಭಯಾನಕ ಮೆದುಳು ಕ್ಯಾನ್ಸರ್​ ರೋಗ ಪತ್ತೆಯಾಗಿದೆ. ಅವರೆಲ್ಲರೂ ಒಂದೇ ತೆರನಾದ ಕ್ಯಾನ್ಸರ್​ಗೆ ತುತ್ತಾಗಿದ್ದು ಅಚ್ಚರಿ ಮೂಡಿಸಿದೆ.

rare-brain-cancer
ಮೆದುಳು ಕ್ಯಾನ್ಸರ್
author img

By

Published : Apr 15, 2022, 3:30 PM IST

ನ್ಯೂಜೆರ್ಸಿ(ಅಮೆರಿಕಾ): ಅಮೆರಿಕದ ನ್ಯೂಜೆರ್ಸಿಯಲ್ಲಿನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿ ಹೊರಹೋದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಅಪರೂಪದ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದೆ. ಅಚ್ಚರಿಯ ಸಂಗತಿ ಎಂದರೆ, ಇವರೆಲ್ಲರೂ ಈ ಶಾಲೆಯಲ್ಲಿ ವ್ಯಾಸಂಗ ಅಥವಾ ಇಲ್ಲಿ ಕೆಲಸ ಮಾಡಿದ ಹಲವಾರು ವರ್ಷಗಳ ತರುವಾಯ ರೋಗ ಪತ್ತೆಯಾಗಿದೆ.

ಇಷ್ಟು ಪ್ರಮಾಣದ ಜನರಿಗೆ ವಿಚಿತ್ರ ಎಂಬಂತೆ ವಕ್ಕರಿಸಿದ ಕ್ಯಾನ್ಸರ್​ ಮೂಲದ ಬಗ್ಗೆ ಪತ್ತೆ ಮಾಡಲು ಅಲ್ಲಿನ ಆಡಳಿತ ತನಿಖೆಗೆ ಸೂಚಿಸಿದೆ. ನ್ಯೂಜೆರ್ಸಿಯಲ್ಲಿನ ಕೊಲೊನಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಅಥವಾ ಕೆಲಸ ಮಾಡಿದ ಬಹುಪಾಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಅಪರೂಪದ ಕಾಯಿಲೆಯಾದ ಮೆದುಳಿನಲ್ಲಿ ಗಡ್ಡೆ ಉಂಟು ಮಾಡುವ 'ಗ್ಲಿಯೊಬ್ಲಾಸ್ಟೊಮಾ' ಸೋಂಕು ಕಾಣಿಸಿಕೊಂಡಿದೆ.

ಒಂದೇ ಕುಟುಂಬ ಮೂವರಿಗೆ ಸೋಂಕು: ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅಲ್​ ಲುಪಿಯಾನೊ ಎಂಬಾತ 20 ವರ್ಷಗಳ ಹಿಂದೆ ಬ್ರೈನ್​ ಟ್ಯೂಮರ್​ ರೋಗದಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡ ಬಳಿಕ ಈ ವಿಚಿತ್ರ ಘಟನೆ ಬೆಳಕಿಗೆ ಬಂದು, ಸಂಚಲನ ಉಂಟುಮಾಡಿದೆ. ಅಲ್ ಲುಪಿಯಾನೋ ಅವರು ತಮ್ಮ ಸಹೋದರಿಯೂ ಇದೇ ಕಾಯಿಲೆಗೆ ಮರಣ ಹೊಂದಿದ್ದಾರೆ. ಅಲ್ಲದೇ, ಅವರ ಪತ್ನಿಯೂ ಕೂಡ 'ಗ್ಲಿಯೊಬ್ಲಾಸ್ಟೊಮಾ'ದಿಂದ ಬಳಲಿ ಕಳೆದ ತಿಂಗಳು ತೀರಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

ಲಕ್ಷ ಜನರಲ್ಲಿ ಮೂವರಿಗೆ ಬರುತ್ತೆ: ಅಪರೂಪದ ಕಾಯಿಲೆಯ ಬಗ್ಗೆ ಅಮೆರಿಕನ್ ಅಸೋಸಿಯೇಷನ್ ​​​​ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಹೇಳುವಂತೆ, ಗ್ಲಿಯೊಬ್ಲಾಸ್ಟೊಮಾವು ಸಾಮಾನ್ಯವಾಗಿ 1 ಲಕ್ಷ ಜನರಲ್ಲಿ ಶೇ.3.21 ರಷ್ಟು ಜನರಿಗೆ ಮಾತ್ರ ಕಾಣಿಸಿಕೊಳ್ಳುವ ಅಪರೂಪದ ಕಾಯಿಲೆಯಾಗಿದೆ. ಆದರೆ, 1975 ಮತ್ತು 2000 ರ ನಡುವೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ 102 ಜನರು ಒಂದೇ ರೀತಿಯ ಮೆದುಳಿನ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಆಶ್ಚರ್ಯ ಉಂಟುಮಾಡಿದೆ ಎಂದು ಹೇಳಿದೆ.

50 ವರ್ಷದ ವಯಸ್ಸಿನ ಮತ್ತು ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದವರು 'ನಾನು ಈ ರಹಸ್ಯವನ್ನು ತಿಳಿದುಕೊಳ್ಳದೇ ಬಿಡುವುದಿಲ್ಲ' ಎಂದು ಹೇಳಿದ್ದಾರೆ. ಸಂಚಲನ ಸೃಷ್ಟಿಸಿದ ಈ ರೋಗ ಪತ್ತೆಗೆ ವುಡ್‌ಬ್ರಿಡ್ಜ್ ಅಧಿಕಾರಿಗಳು ಅದರ ಮೂಲ ಕಾರಣ ಪತ್ತೆ ಹಚ್ಚಲು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ-ಅಮೆರಿಕ ಸಹಭಾಗಿತ್ವ ಅಗತ್ಯ : ಬ್ಲಿಂಕೆನ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.