ಲಾಸ್ ಏಂಜಲಿಸ್ (ಯುಎಸ್ಎ): 2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ವಿಶ್ವವೇ ಕಾಯುತ್ತಿದ್ದ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಎಸ್.ಎಸ್.ರಾಜಮೌಳಿ ಅವರ ಆರ್ಆರ್ಆರ್ ತೆಲುಗು ಚಿತ್ರದ 'ನಾಟು ನಾಟು' ಅತ್ಯುತ್ತಮ ಮೂಲ ಗೀತೆ ಮತ್ತು ಕಾರ್ತಿಕಿ ಗೋನ್ಸ್‌ಸ್ಲೇವ್ಸ್ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಂದಿದೆ.
ಸಮಾರಂಭದಲ್ಲಿ ಮೊದಲ ಆಸ್ಕರ್ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರಕ್ಕಾಗಿ ಗಿಲ್ಲೆರ್ಮೊ ಡೆಲ್ ಟೊರೊ ಅವರ 'ಪಿನೋಚ್ಚಿಯೊ'ಗೆ ಪ್ರಶಸ್ತಿ ನೀಡಲಾಯಿತು. ಎವೆರಿವೇರ್ ಎವೆರಿವೇರ್ ಆಲ್ ಅಟ್ ಒನ್ಸ್ ಅತ್ಯುತ್ತಮ ಚಿತ್ರ, ಡೇನಿಯಲ್ಸ್‌ಗೆ ಅತ್ಯುತ್ತಮ ನಿರ್ದೇಶಕ ಮತ್ತು ಮಿಚೆಲ್ ಯೆಹ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ಗಾಗಿ ಕೆ ಹುಯ್ ಕ್ವಾನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಜೇಮೀ ಲೀ ಕರ್ಟಿಸ್ ಅವರು ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ನಲ್ಲಿನ ಅತ್ಯುತ್ತಮ ಪೋಷಕ ನಟಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ 'ಕೆ ಹುಯ್ ಕ್ವಾನ್': ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಮೊದಲ ಏಷ್ಯಾ ನಟ
ಬ್ರೆಂಡನ್ ಫ್ರೇಸರ್ ಅವರು 'ದಿ ವೇಲ್'ಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ, ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿಗಳನ್ನು ಗೆದ್ದಿದೆ. ಆಸ್ಕರ್‌ಗಳನ್ನು ಜಿಮ್ಮಿ ಕಿಮ್ಮೆಲ್ (3ನೇ ಬಾರಿಗೆ) ಆಯೋಜಿಸುತ್ತಿದ್ದಾರೆ. ಈ ವರ್ಷದ ವಿಜೇತರ ಪಟ್ಟಿ ಇಲ್ಲಿದೆ.
-
The complete list of 95th Oscars winners (updating LIVE). #Oscars95 https://t.co/869N2H4Jc1
— The Academy (@TheAcademy) March 13, 2023 " class="align-text-top noRightClick twitterSection" data="
">The complete list of 95th Oscars winners (updating LIVE). #Oscars95 https://t.co/869N2H4Jc1
— The Academy (@TheAcademy) March 13, 2023The complete list of 95th Oscars winners (updating LIVE). #Oscars95 https://t.co/869N2H4Jc1
— The Academy (@TheAcademy) March 13, 2023
ಅತ್ಯುತ್ತಮ ಚಿತ್ರ: ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ನಿರ್ದೇಶಕ: ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್- ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ನಟಿ: ಮಿಚೆಲ್ ಯೋಹ್- ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ನಟ: ಬ್ರೆಂಡನ್ ಫ್ರೇಸರ್-ದಿ ವೇಲ್
ಅತ್ಯುತ್ತಮ ಪೋಷಕ ನಟಿ: ಜೇಮೀ ಲೀ ಕರ್ಟಿಸ್- - ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್.
ಅತ್ಯುತ್ತಮ ಪೋಷಕ ನಟ: ಕೆ ಹುಯ್ ಕ್ವಾನ್- - ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ಮೂಲ ಗೀತೆ: ನಾಟು ನಾಟು- ಆರ್ಆರ್ಆರ್.
ಬೆಸ್ಟ್ ಒರಿಜಿನಲ್ ಸ್ಕೋರ್: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
ಅತ್ಯುತ್ತಮ ಮೂಲ ಚಿತ್ರಕಥೆ: - ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್.
ಅತ್ಯುತ್ತಮ ಅಳವಡಿಸಿದ ಚಿತ್ರಕಥೆ: ವುಮೆನ್ ಟಾಕಿಂಗ್.
ಅತ್ಯುತ್ತಮ ಸಾಕ್ಷ್ಯಚಿತ್ರ ಚಲನಚಿತ್ರ: ನವಲ್ನಿ
ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ದಿ ಎಲಿಫೆಂಟ್ ವಿಸ್ಪರರ್ಸ್.
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ.
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ಆನ್ ಐರಿಶ್ ಗುಡ್ ಬೈ.
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ).
ಅತ್ಯುತ್ತಮ ಸಿನಿಮಾಟೋಗ್ರಫಿ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
ಅತ್ಯುತ್ತಮ ಧ್ವನಿ: ಟಾಪ್ ಗನ್ - ಮೇವರಿಕ್.
ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್: ಅವತಾರ್-ದಿ ವೇ ಆಫ್ ವಾಟರ್.
ಅತ್ಯುತ್ತಮ ವಸ್ತ್ರ ವಿನ್ಯಾಸ: ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್.
ಅತ್ಯುತ್ತಮ ಕೇಶ ವಿನ್ಯಾಸ ಮತ್ತು ಮೇಕಪ್: ದಿ ವೇಲ್.
ದಿ ಎಲಿಫೆಂಟ್ ವಿಸ್ಪರರ್ಸ್ಗೆ ಪ್ರಶಸ್ತಿ: ಭಾರತ ಆಸ್ಕರ್ 2023ರಲ್ಲಿ ಇತಿಹಾಸವನ್ನು ನಿರ್ಮಿಸಿತು. ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರದಲ್ಲಿ ಮಾನವ ಮತ್ತು ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ ಎಂಬುದನ್ನು ತೋರಿಸಲಾಗಿದೆ. ಇದೊಂದು ಭಾವನಾತ್ಮಕ ಕಿರುಚಿತ್ರ. ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರ ಕಂಡಿದೆ. ಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶ ಸಾರಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಈ ಚಿತ್ರ ಭಾರತಕ್ಕೆ ಹೆಸರು ತಂದುಕೊಟ್ಟಿದೆ.
ಇದನ್ನೂ ಓದಿ: 'ದ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್ ಪ್ರಶಸ್ತಿ!
ಆಸ್ಕರ್ ಗೆದ್ದು ಬೀಗಿದ ನಾಟು ನಾಟು: ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡು ಬೆಸ್ಟ್ ಒರಿಜಿನಲ್ ಸಾಂಗ್' ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದೆ. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ.
ಇದನ್ನೂ ಓದಿ: RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಗರಿ!
ಅಮೆರಿಕದ ಲಾಸ್ ಏಂಜಲಿಸ್ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದರು. ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿ ಕಣದಲ್ಲಿದ್ದವು.
ಭಾರತದ ಆಸ್ಕರ್ ಸಾಧಕರು: ಆಸ್ಕರ್ ಕುರಿತು ಭಾರತದ ಇತಿಹಾಸ ನೋಡಿದಾಗ ಈವರೆಗೆ ಕೇವಲ 5 ಮಂದಿ ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. 1982ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರ ಪಡೆದ ಮೊದಲ ಭಾರತೀಯ ವ್ಯಕ್ತಿಯಾಗಿದ್ದರು. 1992ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್.ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋಗೆ ಪ್ರಶಸ್ತಿ ಹಂಚಿಕೊಂಡಿದ್ದರು. ಹಾಗೆಯೇ ಅತ್ಯುತ್ತಮ ಮೂಲ ಸಂಗೀತಕ್ಕೆ ಎ.ಆರ್.ರೆಹಮಾನ್ ಮತ್ತೊಮ್ಮೆ ಪ್ರಶಸ್ತಿ ಪಡೆದುಕೊಂಡಿದ್ದರು. ಅತ್ಯುತ್ತಮ ಧ್ವನಿ ಸಂಯೋಜನೆಗೆ ರಸೂಲ್ ಪೂಕುಟ್ಟಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದ್ದರು.