ETV Bharat / international

ಬಹಿರಂಗವಾಗಿ ಕಾಣಿಸಿಕೊಂಡ ಸಲ್ಮಾನ್ ರಶ್ದಿ: ಹೋರಾಟ ನಿಲ್ಲದು ಎಂದ ಬೂಕರ್ ವಿಜೇತ - ಹೋರಾಟ ನಿಲ್ಲದು ಎಂದ ಬೂಕರ್ ವಿಜೇತ

ಚಾಕು ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಸದ್ಯ ಚೇತರಿಸಿಕೊಂಡಿರುವ ಲೇಖಕ ಸಲ್ಮಾನ್ ರಶ್ದಿ ಮತ್ತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

Salman Rushdie makes 1st public appearance since stabbing incident

author img

By

Published : May 19, 2023, 12:18 PM IST

ನ್ಯೂಯಾರ್ಕ್ (ಅಮೆರಿಕ) : ಮಾರಣಾಂತಿಕ ಹಲ್ಲೆಗೊಳಗಾಗಿ ಬದುಕುಳಿದ 9 ತಿಂಗಳ ನಂತರ ಬೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ನ್ಯೂಯಾರ್ಕ್ ನಗರದಲ್ಲಿ ನಡೆದ PEN ಅಮೆರಿಕ ವಾರ್ಷಿಕ ಗಾಲಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಗುರುವಾರ ರಾತ್ರಿ ಮ್ಯಾನ್‌ಹ್ಯಾಟನ್‌ನಲ್ಲಿರುವ ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ 2023 ರ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕಾಣಿಸಿಕೊಂಡಿದ್ದು ಬಹುತೇಕರಿಗೆ ಆಶ್ಚರ್ಯ ಮೂಡಿಸಿತು. ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. PEN ಅಮೇರಿಕಾ ಸಂಘಟನೆಯು ಭಾರತ ಮೂಲದ ಲೇಖಕ ರಶ್ದಿ ಅವರಿಗೆ PEN ಶತಮಾನೋತ್ಸವದ ಧೈರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

"ಒಂಬತ್ತು ತಿಂಗಳ ಹಿಂದೆ ಚೂರಿಯಿಂದ ಮಾಡಲಾದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ದಿ ಅವರು ವೈಯಕ್ತಿಕವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು" ಎಂದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿರುವ PEN ಅಮೇರಿಕಾ ಹೇಳಿದೆ. ಇದು ಅಮೆರಿಕ ಮತ್ತು ವಿಶ್ವಾದ್ಯಂತ ಸಾಹಿತ್ಯದ ಪ್ರಗತಿಯ ಮೂಲಕ ಮುಕ್ತ ಅಭಿವ್ಯಕ್ತಿ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.

75 ವರ್ಷದ ರಶ್ದಿ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ ನೆರೆದ ಸಾಹಿತ್ಯಾಭಿಮಾನಿಗಳು ಶಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಧನ್ಯವಾದಗಳು. ನಾನು ಮತ್ತೆ ಹೀಗೆ ಕಾಣಿಸಿಕೊಳ್ಳದೆ ಇರಬಹುದಿತ್ತು. ಆದೂ ಸಹ ಒಂದು ಆಯ್ಕೆಯಾಗಿತ್ತು. ಆದರೂ ನಿಮ್ಮ ಮುಂದೆ ಬಂದಿದ್ದೇನೆ. ಇಂಥದೊಂದು ಸಂದರ್ಭ ಎದುರಾಗಿರುವುದಕ್ಕೆ ನಾನು ಖುಷಿಯಾಗಿದ್ದೇನೆ. ಮತ್ತೆ ಬಹಿರಂಗವಾಗಿ ಕಾಣಿಸಿಕೊಳ್ಳಲು ಇದಕ್ಕಿಂತ ಉತ್ತಮವಾದ ಸಂದರ್ಭ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ. ಪುಸ್ತಕಗಳ ಜಗತ್ತಿನಲ್ಲಿರುವುದು ಹಾಗೂ ಸೆನ್ಸರ್​ಶಿಪ್​ ವಿರುದ್ಧ ಮತ್ತು ಮಾನವ ಹಕ್ಕುಗಳ ಪರವಾಗಿ ಹೋರಾಡುವ ಸಂದರ್ಭ ಇದಾಗಿದೆ ಎಂದು ಹೇಳಿದರು.

ಆಗಸ್ಟ್ 12, 2022 ರಂದು ನ್ಯೂಯಾರ್ಕ್ ರಾಜ್ಯದ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆಯ ಮೇಲೆ ಪದೇ ಪದೇ ಚೂರಿಯಿಂದ ನನ್ನನ್ನು ಇರಿದ ಸಂದರ್ಭದಲ್ಲಿ ತಕ್ಷಣ ನನ್ನ ನೆರವಿಗೆ ಧಾವಿಸಿ, ಆಕ್ರಮಣಕಾರನನ್ನು ಹಿಮ್ಮೆಟ್ಟಿಸಿದ ಧೀರ ಜನತೆಯ ಪರವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವೆ ಎಂದು ಅವರು ತಿಳಿಸಿದರು. "ಇಂಥ ಜನರು ಇಲ್ಲದಿದ್ದರೆ ನಾನು ಇಂದು ಇಲ್ಲಿ ನಿಲ್ಲುತ್ತಿರಲಿಲ್ಲ. ಅವತ್ತು ನಾನು ಆಕ್ರಮಣಕ್ಕೆ ಒಳಗಾಗಿದ್ದೆ, ಆದರೆ ನನ್ನನ್ನು ರಕ್ಷಿಸಿದವರು ಹೀರೋಗಳು. ಅಂದು ಅವರು ಮಾತ್ರ ಧೈರ್ಯ ತೋರಿದರು. ನನ್ನ ಜೀವನ ಅವರಿಗೆ ಋಣಿಯಾಗಿದೆ" ಎಂದು ರಶ್ದಿ ಭಾವುಕರಾಗಿ ನುಡಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ರಶ್ದಿ ಹೇಳಿದ್ದು ಹೀಗೆ: ಭಯೋತ್ಪಾದನೆಯು ನಮ್ಮನ್ನು ಭಯಭೀತಗೊಳಿಸಬಾರದು. ಹಿಂಸೆಯು ನಮ್ಮನ್ನು ತಡೆಯಬಾರದು ... ಹೋರಾಟವು ಮುಂದುವರಿಯುತ್ತದೆ."

24 ವರ್ಷದ ಹಾಡಿ ಮಾಟರ್ ಎಂಬಾತ ರಶ್ದಿಯವರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದ. 9 ತಿಂಗಳ ಹಿಂದೆ ನಡೆದ ಹಲ್ಲೆಯಲ್ಲಿ ಅವರು ಒಂದು ಕಣ್ಣು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಪೋರ್ಬ್ಸ್​ ಟಾಪ್​-10 ಸಿರಿವಂತರ ಪಟ್ಟಿಯಿಂದ ಅಂಬಾನಿ, ಅದಾನಿ ಹೊರಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.