ETV Bharat / international

ತಾಲಿಬಾನ್​ ಭದ್ರತಾ ಪಡೆಗಳಿಂದ ಇಬ್ಬರು ಐಎಸ್​ ಉಗ್ರರ ಬೇಟೆ - ತಿಂಗಳಲ್ಲಿ ಇದು 2ನೇ ಕಾರ್ಯಾಚರಣೆ

ಆಫ್ಘಾನಿಸ್ತಾನದಲ್ಲಿ ಉಗ್ರರ ಹತ್ಯೆ- ತಾಲಿಬಾನ್​ ಭದ್ರತಾ ಪಡೆಯಿಂದ ಉಗ್ರರ ಹತ್ಯೆ- ಇಸ್ಲಾಮಿಕ್​ ಸ್ಟೇಟ್ಸ್​ ಉಗ್ರ ಸಂಘಟನೆ- ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ತಾಲಿಬಾನ್​

ಇಬ್ಬರು ಐಎಸ್​ ಉಗ್ರರ ಹತ್ಯೆ
ಇಬ್ಬರು ಐಎಸ್​ ಉಗ್ರರ ಹತ್ಯೆ
author img

By

Published : Feb 27, 2023, 2:03 PM IST

ಕಾಬೂಲ್​: ತಾಲಿಬಾನ್​ನ ಪ್ರಮುಖ ಪ್ರತಿಸ್ಪರ್ಧಿಯಾದ ಇಸ್ಲಾಮಿಕ್​ ಸ್ಟೇಟ್ಸ್​(ಐಎಸ್​) ಸಂಘಟನೆಯು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸಿದೆ. ಇದೇ ವೇಳೆ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ತಾಲಿಬಾನ್​ ಸರ್ಕಾರ ತಿಳಿಸಿದೆ. ರಾಜಧಾನಿ ಕಾಬೂಲ್‌ನಲ್ಲಿ ಉಗ್ರ ಕೃತ್ಯಕ್ಕೆ ಮುಂದಾಗಿದ್ದ ಐಎಸ್​ ಸಂಘಟನೆಯ ಉಗ್ರರನ್ನು ತಾಲಿಬಾನ್ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿವೆ. ಇದೇ ವೇಳೆ ಶಸ್ತ್ರಾಸ್ತ್ರ, ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಬೂಲ್​ನಲ್ಲಿ ದಾಳಿಗೆ ಯೋಜನೆ ರೂಪಿಸಿದ್ದ ಐಸಿಸ್​.. ರಾಜಧಾನಿ ಕಾಬೂಲ್​ನಲ್ಲಿ ದಾಳಿಗಳನ್ನು ನಡೆಸಲು ಐಎಸ್​ ಯೋಜನೆ ರೂಪಿಸಿತ್ತು. ಇದರ ವಿರುದ್ಧ ಕಾರ್ಯಾಚರಣೆ ನಡೆಸಿದ ತಾಲಿಬಾನ್​ ಸರ್ಕಾರ, ಉಗ್ರರು ನೆಲೆಸಿದ್ದ ವಸತಿ ಪ್ರದೇಶದ ಮೇಲೆ ದಾಳಿ ನಡೆಸಿದೆ. ಖೇರ್ ಖಾನಾ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರನ್ನು ತಾಲಿಬಾನ್​ ಭದ್ರತಾ ಪಡೆಗಳು ಪತ್ತೆ ಮಾಡಿ ದಾಳಿ ನಡೆಸಿದೆ.

ದಾಳಿಯಲ್ಲಿ ಇಬ್ಬರು ಐಎಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಒಬ್ಬನನ್ನು ಜೀವಂತವಾಗಿ ಬಂಧಿಸಲಾಗಿದೆ. ಅಲ್ಲದೇ, ಸ್ಥಳದಲ್ಲಿ ಮದ್ದುಗುಂಡುಗಳು ಮತ್ತು ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ತಾಲಿಬಾನ್ ಪಡೆಗಳ ಯಾವುದೇ ಭದ್ರತಾ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಘಟನೆಗೆ ಐಎಸ್‌ನಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ತಿಂಗಳಲ್ಲಿ ಇದು 2ನೇ ಕಾರ್ಯಾಚರಣೆ: ಇನ್ನು ಈ ತಿಂಗಳಲ್ಲಿ ನಡೆದ 2ನೇ ಕಾರ್ಯಾಚರಣೆ ಇದಾಗಿದೆ. ಇದಕ್ಕೂ ಮೊದಲು ನಡೆದ ದಾಳಿಯಲ್ಲಿ ತಾಲಿಬಾನ್ ಗುಪ್ತಚರ ಪಡೆಗಳು ಕಾಬೂಲ್‌ನ ಪೂರ್ವ ಭಾಗದ ಕಾರ್ತಿ ನಾವ್ ಪ್ರದೇಶದಲ್ಲಿ ಮೂವರು ಐಎಸ್ ಉಗ್ರರನ್ನು ಹೊಡೆದು ಹಾಕಿ, ಒಬ್ಬನನ್ನು ಬಂಧಿಸಲಾಗಿತ್ತು. ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಸಂಘಟಿತ ದಾಳಿಗಳ ಹಿಂದೆ ಐಎಸ್ ಕೈವಾಡವಿದೆ ಎಂದು ತಾಲಿಬಾನ್ ಗುರುತಿಸಿದೆ.

20 ವರ್ಷಗಳ ಸತತ ಯುದ್ಧದ ನಂತರ ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ಬಳಿಕ ತಾಲಿಬಾನ್ 2021 ರ ಆಗಸ್ಟ್​ನಲ್ಲಿ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ನಡೆಸುತ್ತಿದೆ.

ಏನಿದು ಐಎಸ್​ ಸಂಘಟನೆ: ಅಫ್ಘಾನಿಸ್ತಾನದ ಖೊರಾಸಾನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಹೆಸರಿನಲ್ಲಿ ಉಗ್ರ ಕೃತ್ಯ ನಡೆಸುತ್ತಿರುವ ಸಂಘಟನೆಯು ತಾಲಿಬಾನ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಈ ಉಗ್ರಗಾಮಿ ಗುಂಪು ಅಫ್ಘಾನಿಸ್ತಾನದಲ್ಲಿ ತನ್ನ ದಾಳಿಯನ್ನು ಹೆಚ್ಚಿಸಿದೆ. ಇದರಲ್ಲಿ ತಾಲಿಬಾನ್ ಭದ್ರತಾ ಪಡೆಗಳ ಗಸ್ತು ಮತ್ತು ಶಿಯಾ ಅಲ್ಪಸಂಖ್ಯಾತರ ಮೇಲೆಯೇ ಹೆಚ್ಚಾಗಿ ಇದು ದಾಳಿ ನಡೆಸುತ್ತಿದೆ.

ಓದಿ: ಕೊಳದ ಮಧ್ಯೆ ಪಲ್ಟಿಯಾದ ಬೋಟ್​.. ನಾಲ್ಕು ಜನ ನಾಪತ್ತೆ, ಇಬ್ಬರ ದೇಹ ಪತ್ತೆ.. ಈಜಿ ದಡ ಸೇರಿದ ನಾಲ್ವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.