ಒಸ್ಲೋ (ನಾರ್ವೆ): ನಾರ್ವೇಜಿಯನ್ ನೊಬೆಲ್ ಸಮಿತಿಯು ಇಂದು 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ಪ್ರಕಟಿಸಿತು. ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಸಮಾನ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವಿರತ ಹೋರಾಟಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ನರ್ಗಿಸ್ ಮೊಹಮ್ಮದಿ ಸದ್ಯ ಇರಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
-
BREAKING NEWS
— The Nobel Prize (@NobelPrize) October 6, 2023 " class="align-text-top noRightClick twitterSection" data="
The Norwegian Nobel Committee has decided to award the 2023 #NobelPeacePrize to Narges Mohammadi for her fight against the oppression of women in Iran and her fight to promote human rights and freedom for all.#NobelPrize pic.twitter.com/2fyzoYkHyf
">BREAKING NEWS
— The Nobel Prize (@NobelPrize) October 6, 2023
The Norwegian Nobel Committee has decided to award the 2023 #NobelPeacePrize to Narges Mohammadi for her fight against the oppression of women in Iran and her fight to promote human rights and freedom for all.#NobelPrize pic.twitter.com/2fyzoYkHyfBREAKING NEWS
— The Nobel Prize (@NobelPrize) October 6, 2023
The Norwegian Nobel Committee has decided to award the 2023 #NobelPeacePrize to Narges Mohammadi for her fight against the oppression of women in Iran and her fight to promote human rights and freedom for all.#NobelPrize pic.twitter.com/2fyzoYkHyf
"ಈ ವರ್ಷದ ಶಾಂತಿ ನೊಬೆಲ್ ಪ್ರಶಸ್ತಿಯು ಇರಾನ್ ಆಡಳಿತವು ಮಹಿಳೆಯರನ್ನು ಗುರಿಯಾಗಿಸಿ ನಡೆಸಿದ ತಾರತಮ್ಯ, ದಬ್ಬಾಳಿಕೆ ನೀತಿಗಳ ವಿರುದ್ಧ ಹೋರಾಡಿದ ಅಪಾರ ಜನಸಮೂಹವನ್ನು ಗುರುತಿಸುತ್ತದೆ" ಎಂದು ನೊಬೆಲ್ ಸಮಿತಿ ಹೇಳಿದೆ.
1901ರಿಂದ ನೊಬೆಲ್ ಶಾಂತಿ ಪ್ರಶಸ್ತಿಯನ್ನು 110 ವ್ಯಕ್ತಿಗಳು ಮತ್ತು 30 ಸಂಸ್ಥೆಗಳಿಗೆ ನೀಡಿ ಗೌರವಿಸಲಾಗಿದೆ. ಈ ಹಿಂದಿನ ವಿಜೇತರಲ್ಲಿ ಮಲಾಲಾ ಯೂಸುಫ್‌ಜಾಯ್ ಮತ್ತು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಸೇರಿದ್ದಾರೆ. ಕೆಲವು ಸಂಸ್ಥೆಗಳಿಗೆ ಹಲವು ಬಾರಿ ಈ ಪ್ರಶಸ್ತಿ ನೀಡಲಾಗಿದೆ. ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಗೆ ಮೂರು ಬಾರಿ ಶಾಂತಿ ನೊಬೆಲ್ ಗೌರವ ದೊರೆತಿದೆ. ಅದರಂತೆ ನಿರಾಶ್ರಿತರ ರಕ್ಷಣೆಗಾಗಿ ವಿಶ್ವಸಂಸ್ಥೆ ಹೈಕಮಿಷನರ್ ಕಚೇರಿಗೆ ಎರಡು ನೊಬೆಲ್ ನೀಡಲಾಗಿದೆ.
ಇರಾನ್‌ನಲ್ಲಿ 22 ವರ್ಷದ ಯುವತಿಯ ಸಾವಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಭಾರಿ ಪ್ರತಿಭಟನೆ ನಡೆದಿತ್ತು. ನರ್ಗೀಸ್ ಮೊಹಮ್ಮದಿ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಈ ಕಾರಣಕ್ಕಾಗಿ ನರ್ಗೀಸ್ ಮೊಹಮ್ಮದಿ ಅವರನ್ನು ಅಲ್ಲಿನ ಸರ್ಕಾರ ಜೈಲಿಗೆ ಹಾಕಿದೆ. ಇದೀಗ ನೊಬೆಲ್ ಕಮಿಟಿ ಮಹತ್ವದ ನಿರ್ಧಾರ ಕೈಗೊಂಡಿದ್ದು ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಿದೆ.
ನೊಬೆಲ್ ಪ್ರಶಸ್ತಿಯ ಇತಿಹಾಸ: 1901 ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಸಂಶೋಧಕ ಆಲ್ಫ್ರೆಡ್ ನೊಬೆಲ್ ಆಶಯಕ್ಕೆ ಅನುಗುಣವಾಗಿ ಜಗತ್ತಿನ ಪ್ರಗತಿಗೆ ಕಾರಣವಾದ ಕಾರ್ಯಕ್ಕೆ ಈ ಪ್ರಶಸ್ತಿ ಸಲ್ಲುತ್ತಿದೆ. ಈ ವರ್ಷ ಬಹುಮಾನ ವಿಜೇತರನ್ನು ಅಕ್ಟೋಬರ್ 2ರ ಸೋಮವಾರದಿಂದ ಅಕ್ಟೋಬರ್ 9ರ ತನಕ ಪ್ರತಿದಿನ ಪ್ರಕಟಿಸಲಾಗುತ್ತಿದೆ. ಪ್ರತಿಷ್ಟಿತ ಪ್ರಶಸ್ತಿ ಗೆಲ್ಲುವವರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೌನ್ ಸಿಗಲಿದೆ. ಅಂದರೆ ಸುಮಾರು 8 ಕೋಟಿ ರೂಪಾಯಿ. ವೈದ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ವಿಭಾಗದ ನಂತರ ಇದೀಗ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ನಾರ್ವೆಯ ಪ್ರಸಿದ್ಧ ಲೇಖಕ, ನಾಟಕಕಾರ ಜಾನ್ ಫಾಸ್ಸೆಗೆ ಸಾಹಿತ್ಯ ನೊಬೆಲ್ ಗರಿ