ETV Bharat / international

New York Air pollution: ನವದೆಹಲಿ ಮಾತ್ರವಲ್ಲ, ನ್ಯೂಯಾರ್ಕ್​ನಲ್ಲೂ ಕುಸಿದ ವಾಯು ಗುಣಮಟ್ಟ - ಈಟಿವಿ ಭಾರತ್​ ಕನ್ನಡ

ದೆಹಲಿ ವಾಯು ಗುಣಮಟ್ಟದಷ್ಟೇ ಕೆಟ್ಟ ವಾತಾವರಣ ಅಮೆರಿಕದ ವ್ಯಾವಹಾರಿಕ ರಾಜಧಾನಿ ನ್ಯೂಯಾರ್ಕ್​ನಲ್ಲೂ (New York) ಕಂಡುಬಂದಿದೆ.

New York witnessed worst air pollution
New York witnessed worst air pollution
author img

By

Published : Jun 8, 2023, 6:24 PM IST

ನ್ಯೂಯಾರ್ಕ್​​: ದೆಹಲಿಯ ವಾಯು ಗುಣಮಟ್ಟ ಕುಸಿತಗೊಂಡ ವಿಚಾರ ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಬಿತ್ತರವಾಗಿದೆ. ಚಳಿಗಾಲಾರಂಭದಲ್ಲಿ ಇಲ್ಲಿನ ಗಾಳಿ ಗುಣಮುಟ್ಟ ಸಂಪೂರ್ಣ ಕುಸಿಯುವುದು ವಿಶೇಷ ಕಾಳಜಿಯ ವಿಚಾರವಾಗಿತ್ತು. ಇದೀಗ ದೆಹಲಿ ವಾಯು ಗುಣಮಟ್ಟದಷ್ಟೇ ಕೆಟ್ಟ ವಾತಾವಾರಣ ಅಮೆರಿಕದ ವ್ಯಾವಹಾರಿಕ ರಾಜಧಾನಿ ನ್ಯೂಯಾರ್ಕ್​ನಲ್ಲೂ ದಾಖಲಾಗಿದ್ದು, ಪರಿಸ್ಥಿತಿ ವಿಭಿನ್ನವಾಗಿಲ್ಲ. ವಿಶ್ವದ ಅತ್ಯಂತ ಕಳಪೆ ವಾಯು ಗುಣಮಟ್ಟದಲ್ಲಿ ದೆಹಲಿ ಜೊತೆಗೆ ನ್ಯೂಯಾರ್ಕ್​ ಕೂಡ ಸ್ಥಾನ ಪಡೆದಿದೆ. ನ್ಯೂಯಾರ್ಕ್​ ಮೇಯರ್​ ಎರಿಡ್​ ಆ್ಯಂಡ್​ ಕೂಡ ಜನರಿಗೆ ಎಚ್ಚರಿಕೆ ನೀಡಿದ್ದು, ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಂಪೂರ್ಣ ಹೊಗೆ ಕವಿದ ವಾತಾವರಣ: ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಂಕಿ ಅಂಶ 218ಕ್ಕೆ ಮುಟ್ಟಿದೆ. ಇದಕ್ಕೆ ಕಾರಣ ಕೆನಡಾದ ಅರಣ್ಯ ಬೆಂಕಿಯ ಹೊಗೆ. ಇದೇ ವೇಳೆ ದೆಹಲಿಯ ಎಕ್ಯೂಐ 190ರ ಆಸುಪಾಸಿನಲ್ಲಿದೆ. ನಗರದ ವಾಯು ಗುಣಮಟ್ಟ ಕುಸಿದು ಸಂಪೂರ್ಣವಾಗಿ ಹೊಗೆಯಿಂದ ಆವರಿಸಿದ್ದು, ಮೋಡ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿದೆ. ಭಾರತದ ವಾಯ ಗುಣಮಟ್ಟವನ್ನು ಉಲ್ಲೇಖ ಮಾಡುವ ಮೂಲಕ ನ್ಯೂಯಾರ್ಕ್​ ಕೂಡ ಮೊದಲ ಬಾರಿಗೆ ಈ ರೀತಿ ಪರಿಸರಾತ್ಮಕ ಸಮಸ್ಯೆ ಅನುಭವಿಸುತ್ತಿದೆ ನ್ಯೂಯಾರ್ಕ್​ ಮಾಧ್ಯಮ ಮತ್ತು ಅಮೆರಿಕ ಸರ್ಕಾರ ಇದೇ ವೇಳೆ ಎಂದಿದ್ದಾರೆ.

ಈ ಕುರಿತು ವರದಿ ಬಿತ್ತರಿಸಿರುವ ನ್ಯೂಯಾರ್ಕ್​ ಟೈಮ್ಸ್​​​, ತಮ್ಮ ನಗರದ ಕಳಪೆ ವಾಯು ಗುಣಮಟ್ಟಕ್ಕೆ ದೆಹಲಿಯನ್ನು ಉದಾಹರಣೆಯಾಗಿರಿಸಿ ಮುಖ್ಯಾಂಶಗಳನ್ನು ಬಿತ್ತರಿಸಿದೆ. ಉದಾ: ಗಾಳಿಯು ವಿಷಕ್ಕೆ ತಿರುಗಿದಾಗ ಭಾರತ ಹೇಗಿರುತ್ತದೆ. ನವದೆಹಲಿಯ ಗಾಳಿ ಉಸಿರುಗಟ್ಟುಸುತ್ತಿದೆ ಎಂಬ ರೂಪಕವನ್ನು ಬಳಸಿ ತಮ್ಮ ನಗರದ ವಾಯುಗುಣಟ್ಟದ ಬಗ್ಗೆ ವರದಿ ಮಾಡಿದೆ.

ವಾಯು ಮಾಲಿನ್ಯಕ್ಕೆ ಕಾರಣ: ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ, ರಾಜಧಾನಿ ಸೇರಿದಂತೆ ಐದು ನಗರಗಳ ವಾಯು ಗುಣಮಟ್ಟದ ದತ್ತಾಂಶವನ್ನು ಆನ್​ಲೈನ್​ ಡ್ಯಾಶ್​ಬೋರ್ಡ್​ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ. ಕ್ಯೂಬೆಕ್​ ಮತ್ತು ಕೆನಡಾದ ಇತರೆ ಭಾಗದಲ್ಲಿ ಇತ್ತೀಚೆಗೆ ಅರಣ್ಯದಲ್ಲಿ ಬೆಂಕಿ ಪ್ರಕರಣಗಳು ಕಾಣಿಸಿಕೊಂಡಿದೆ. ಇದರಿಂದ ಅಮೆರಿಕದ ಈಶಾನ್ಯ ಹೊಗೆಯಿಂದ ಸುತ್ತುವರೆದಿದ್ದು, ಆರೋಗ್ಯ ಮತ್ತು ಪರಿಸರದ ಮೇಲೆ ಇದು ಎಚ್ಚರಿಕೆಯ ಗಂಟೆ ಬಾರಿಸಿದೆ. ಇದು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದಯ ಆ್ಯಡಮ್ಸ್​​ ತಿಳಿಸಿದ್ದಾರೆ.

ಜಗತ್ತಿನ ವಾಯು ಗುಣಮಟ್ಟದ ರಿಯಲ್​ ಟೈಮ್​ ನಿರ್ವಹಣೆ ಮಾಡುವ ಐಕ್ಯೂಏರ್​ ಪ್ರಕಾರ, ನ್ಯೂಯಾರ್ಕ್​ನಲ್ಲಿ 7.30ರಬಳಿಕ ವಾಯುಗುಣಮಟ್ಟ 161 ಇದ್ದರೆ ದೆಹಲಿಯಲ್ಲಿ ಬೆಳಗ್ಗೆ 9ಕ್ಕೆ 191 ಇರುತ್ತದೆ ಎಂದಿದ್ದಾರೆ. ನ್ಯೂಯಾರ್ಕ್​ ಎರಡನೇ ಕಳಪೆ ವಾಯು ಗುಣಮಟ್ಟ ಹೊಂದಿರುವ ನಗರವಾಗಿದೆ. ದೆಹಲಿಯಲ್ಲಿ ವಾಯು ಗುಣಮಟ್ಟ ಕಡಿಮೆಯಾಗಲು ಮನುಷ್ಯ ಕಾರಣ. ಇಲ್ಲಿ ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಅಮೆರಿಕದ ವಾಯು ಗುಣಮಟ್ಟಕ್ಕೆ ಅರಣ್ಯದ ಬೆಂಕಿ ಕಾರಣವಾಗಿದೆ. ಕಳೆದ ವರ್ಷ ಅಮೆರಿಕದಲ್ಲೂ ಕೂಡ ಕಾಡ್ಗಿಚ್ಚು ಸಂಭವಿಸಿ ಸಾಕಷ್ಟು ಅರಣ್ಯ ಸಂಪತ್ತು ನಾಶವಾಗಿತ್ತು.

ಇದನ್ನೂ ಓದಿ: 3 ತಿಂಗಳ ವಿರಾಮದ ನಂತರ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದ ಕಿಲೌಯಾ ಜ್ವಾಲಾಮುಖಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.