ಜೆರುಸಲೇಂ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಇಬ್ಭಾಗವಾಗಿರುವ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈಗಾಗಲೇ ಎಂಟು ವರ್ಷಗಳಿಂದ ಗಾಜಾವನ್ನು ದಿಗ್ಬಂಧನ ಮಾಡಿರುವ ಇಸ್ರೇಲ್, ಗಾಜಾ ನಗರದ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಹಮಾಸ್ ಇನ್ನೂ ರಾಕೆಟ್ ದಾಳಿಗಳನ್ನು ನಡೆಸುತ್ತಿದೆ. ಮತ್ತೊಂದೆಡೆ, ಲೆಬನಾನ್ ಮತ್ತು ಸಿರಿಯಾದಿಂದ ಉಗ್ರಗಾಮಿಗಳ ದಾಳಿ ಪ್ರಾರಂಭವಾಗಿದೆ. ಇದರೊಂದಿಗೆ ಈ ಸಂಘರ್ಷ ಮತ್ತಷ್ಟು ಹರಡುವ ಭೀತಿ ಎದುರಾಗಿದೆ. ಈ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇಸ್ರೇಲ್ ದಾಳಿಗೆ ಪ್ರತಿಯಾಗಿ ಹಮಾಸ್ ಅನ್ನು ಹತ್ತಿಕ್ಕುತ್ತೇವೆ ಮತ್ತು ಸರ್ವನಾಶಪಡಿಸುತ್ತೇವೆ. ಪ್ರತಿಯೊಬ್ಬ ಹಮಾಸ್ ಸದಸ್ಯರು ಇನ್ಮುಂದೆ ಸತ್ತ ವ್ಯಕ್ತಿಯಂತೆ ಕಾಣುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದ್ದಾರೆ. ಇಸ್ರೇಲ್ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿ ವಿಮಾನಗಳು ಗಾಜಾವನ್ನು ಹೊಡೆದುರುಳಿಸಿದಾಗ ನೆತನ್ಯಾಹು ತಡರಾತ್ರಿ ದೂರದರ್ಶನದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬುಧವಾರದಂದು ಹಮಾಸ್ ಉಗ್ರಗಾಮಿಗಳ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಹೋರಾಟದ ಮೇಲ್ವಿಚಾರಣೆಗಾಗಿ ಯುದ್ಧ-ಸಮಯದ ಕ್ಯಾಬಿನೆಟ್ ಸಭೆ ಅನ್ನು ಕರೆದಿದ್ದು, ಉನ್ನತ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ದೂರದರ್ಶನದಲ್ಲಿ ಮಾತನಾಡಿದರು.
ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತರ ದೇಶಗಳು ಮತ್ತು ಗುಂಪುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಆರಂಭವಾದ ಸಂಘರ್ಷದಲ್ಲಿ ಇದುವರೆಗೆ 2,300 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಒಂದರಲ್ಲೇ 1,200 ಮಂದಿ ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ 1,100 ಜನರು ಮೃತಪಟ್ಟಿದ್ದಾರೆ. ಅವರಲ್ಲಿ 260 ಮಕ್ಕಳು ಮತ್ತು 230 ಮಹಿಳೆಯರು ಸೇರಿದ್ದಾರೆ. ಪಶ್ಚಿಮ ದಂಡೆಯಲ್ಲಿ ನಡೆದ ಘರ್ಷಣೆಯಲ್ಲಿ ಇನ್ನೂ 15 ಪ್ಯಾಲೆಸ್ತೀನಿಯರು ಸಾವನ್ನಪ್ಪಿರುವುದು ವರದಿಯಾಗಿದೆ.
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿರಂತರ ದಾಳಿ: ಇಸ್ರೇಲಿ ವಾಯುಪಡೆ ಗಾಜಾದಲ್ಲಿ ಒಂದರ ನಂತರ ಒಂದರಂತೆ ಬಾಂಬ್ ದಾಳಿ ನಡೆಸುತ್ತಿದೆ. ಇದು ಈಗಾಗಲೇ ವಿದ್ಯುತ್, ಆಹಾರ ಮತ್ತು ಇಂಧನ ಸರಬರಾಜುಗಳನ್ನು ಸ್ಥಗಿತಗೊಳಿಸಿದೆ. ಸಾವಿರಾರೂ ಕಟ್ಟಡಗಳನ್ನು ನೆಲಸಮಗೊಂಡಿದ್ದಾವೆ. 24 ಗಂಟೆಗಳಲ್ಲಿ ಗಾಜಾದ ಮೇಲೆ 450 ಬಾಂಬ್ ದಾಳಿ ಮಾಡಿದೆ ಇಸ್ರೇಲ್. ಗಾಜಾ ಬಂದರಿನಲ್ಲಿದ್ದ ಮೀನುಗಾರಿಕಾ ದೋಣಿಗಳಿಗೆ ಬಾಂಬ್ ದಾಳಿಗೆ ತುತ್ತಾಗಿವೆ. ಈ ದಾಳಿಗಳಿಂದ ಚಿಂತಾಕ್ರಾಂತರಾಗಿರುವ ಗಾಜಾಗಳು ಶಾಲೆಗಳಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಆಶ್ರಯಧಾಮಗಳಿಗೆ ಅಲೆಯುತ್ತಿದ್ದಾರೆ.
ಇಸ್ರೇಲ್ ಬಾಂಬ್ ದಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರೇಟರ್‌ಗಳಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳು ಮತ್ತು ಆಸ್ಪತ್ರೆಗಳು ಇಂಧನಕ್ಕಾಗಿ ಹೆಣಗಾಡುತ್ತಿವೆ. ಅಲ್-ಕರಾಮದ ಸಂಪೂರ್ಣ ಪ್ರದೇಶವು ಬಾಂಬ್ ದಾಳಿಯಿಂದ ನಾಶವಾಗಿದೆ. ಅನೇಕ ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದವರ ಚಿಕಿತ್ಸೆಗಾಗಿ ವೈದ್ಯಕೀಯ ತಂಡ ಅಲ್ಲಿಗೆ ಹೋಗುವ ಸಾಧ್ಯತೆ ಕಡಿಮೆಯಿದೆ. ಎಲ್ಲಾ ರಸ್ತೆಗಳು ನಾಶವಾಗಿವೆ ಎಂದು ಹಮಾಸ್ ಗೃಹ ಸಚಿವಾಲಯ ಹೇಳಿದೆ. 2,50,000 ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. 4,00,000 ಜನರಿಗೆ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು ಸ್ಥಗಿತಗೊಂಡಿವೆ.
ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಬುಧವಾರ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿದೆ. ಸೆಂಟ್ರಲ್ ಗಾಜಾದಲ್ಲಿರುವ ಅಂತರಾಷ್ಟ್ರೀಯ ಕಾನೂನು ತಜ್ಞರಾದ ಸಯೀದ್ ಅಲ್-ದಶಾನ್ ಅವರ ಮನೆಯ ಮೇಲೆ ಇಸ್ರೇಲ್ ಬಾಂಬ್ ಸ್ಫೋಟಿಸಿತು. ಈ ಘಟನೆಯಲ್ಲಿ ಅವರ ಹತ್ತಿರದ 30 ಸಂಬಂಧಿಗಳು ಸಾವನ್ನಪ್ಪಿದ್ದಾರೆ. ದಶಾನ್ ಅವರು ಈಜಿಪ್ಟ್‌ನ ಕೈರೋದಲ್ಲಿ ವಾಸಿಸುತ್ತಿದ್ದಾರೆ.
ಇಸ್ರೇಲ್ ಮೇಲೆ ಸಿರಿಯಾ, ಲೆಬನಾನ್ ಉಗ್ರರ ದಾಳಿ: ಬುಧವಾರ, ಇಸ್ರೇಲ್‌ನ ಉತ್ತರ ಪ್ರದೇಶದ ಗಡಿಯಲ್ಲಿ ಪರಸ್ಪರ ಗುಂಡಿನ ದಾಳಿ ನಡೆದಿದೆ. ಲೆಬನಾನ್ ಮತ್ತು ಸಿರಿಯಾದ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದರು. ಲೆಬನಾನಿನ ಉಗ್ರಗಾಮಿ ಗುಂಪು ಹೆಜ್ಬೊಲ್ಲಾ ಇಸ್ರೇಲಿ ಸೇನಾ ನೆಲೆಗಳ ಮೇಲೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾರಿಸಿತು. ಅರಾಮ್ಶಾ ಮೇಲಿನ ದಾಳಿಯಲ್ಲಿ ಹಲವಾರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಹಿಜ್ಬುಲ್ಲಾ ಘೋಷಿಸಿದರು. ದಾಳಿಯನ್ನು ಇಸ್ರೇಲಿ ಸೇನೆ ದೃಢಪಡಿಸಿದೆ. ಆದರೆ ಸಾವಿನ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸಿತು.
ಲೆಬನಾನ್‌ನಿಂದ ಶತ್ರು ವಿಮಾನಗಳು ದೇಶವನ್ನು ಪ್ರವೇಶಿಸಿವೆ ಮತ್ತು ಉತ್ತರ ಪ್ರಾಂತ್ಯದ ಎಲ್ಲಾ ಜನರು ಆಶ್ರಯಕ್ಕೆ ತೆರಳಬೇಕು ಎಂದು ಇಸ್ರೇಲ್ ಬುಧವಾರ ರಾತ್ರಿ ಎಚ್ಚರಿಕೆ ನೀಡಿತು. ಅದು ಯಾವ ರೀತಿಯ ವಿಮಾನ ಎಂದು ತಿಳಿದಿಲ್ಲ ಮತ್ತು ಇರಾನ್ ಮತ್ತು ಲೆಬನಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿಗಳು ಡ್ರೋನ್ ಮತ್ತು ಗ್ಲೈಡರ್‌ಗಳನ್ನು ಹೊಂದಿದ್ದಾರೆ ಎಂದು ಅದು ಇಸ್ರೇಲ್ ಹೇಳಿದೆ. ಕೊನೆಗೆ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿದುಬಂದಿದೆ.
ಗಾಜಾಕ್ಕೆ ಇಸ್ರೇಲ್‌ನ ದಿಗ್ಬಂಧನವನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಖಂಡಿಸಿದ್ದಾರೆ. ವಿದ್ಯುತ್, ಆಹಾರ, ನೀರು ಪೂರೈಕೆ ಸ್ಥಗಿತಗೊಳಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಸಾವಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಓದಿ: ಹಮಾಸ್ ಉಗ್ರರ ವಿರುದ್ಧದ ಸಮರಕ್ಕೆ 3 ಲಕ್ಷ ಇಸ್ರೇಲ್ ಸೈನಿಕರು ಸಜ್ಜು; ಗಾಜಾ ಮೇಲೆ ನಿರಂತರ ದಾಳಿ