ETV Bharat / international

ಸ್ಪೀಕರ್‌ ವಿರುದ್ಧ ಆಕ್ರೋಶ; ಸದನದಲ್ಲಿ ಶರ್ಟ್​ ಕಳಚಿ ಪ್ರತಿಭಟಿಸಿದ ನೇಪಾಳ ಸಂಸದ

ಸದನದಲ್ಲಿ ಮಾತನಾಡಲು ಅವಕಾಶ ನೀಡದೇ ಇದ್ದುದಕ್ಕೆ ಕೋಪಗೊಂಡ ಸಂಸದರೊಬ್ಬರು ಶರ್ಟ್​ ಕಳಚಿ ಪ್ರತಿಭಟನೆ ನಡೆಸಿದ್ದಾರೆ. ಅಂದಹಾಗೆ ಇದು ನೇಪಾಳ ಸಂಸತ್ತಿನಲ್ಲಿ ನಡೆದ ಘಟನೆ.

ಶರ್ಟ್​ ಕಳಚಿ ಪ್ರತಿಭಟನೆ
ಶರ್ಟ್​ ಕಳಚಿ ಪ್ರತಿಭಟನೆ
author img

By

Published : May 9, 2023, 11:53 AM IST

ಕಾಠ್ಮಂಡು (ನೇಪಾಳ) : ಸ್ಪೀಕರ್​ ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ನೇಪಾಳ ಸಂಸದರೊಬ್ಬರು ಸದನದಲ್ಲೇ ತಾವು ಧರಿಸಿದ್ದ ಶರ್ಟ್​ ಕಳಚಿ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ನಡೆದ ಕಲಾಪದಲ್ಲಿ ಸಂಸದ ಅಮರೇಶ್ ಕುಮಾರ್ ಸಿಂಗ್ ಪ್ರತಿಭಟಿಸಿದರು. ಅಮರೇಶ್​ ನೇಪಾಳಿ ಕಾಂಗ್ರೆಸ್‌ನ ಮಾಜಿ ನಾಯಕ. ಕಳೆದ ವರ್ಷ ನಡೆದ ಸಂಸತ್ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದ ಕಾರಣಕ್ಕೆ ಸರ್ಲಾಹಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

ಭಾರತದ ರಾಜಧಾನಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದ ಸಿಂಗ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಸ್ಪೀಕರ್ ದೇವರಾಜ್ ಘಿಮಿರೆ ಅವರು ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಿಡಿಮಿಡಿಗೊಂಡರು. ಇದೇ ವೇಳೆ ತಮ್ಮ ಬಟ್ಟೆಗಳನ್ನು ಕಳಚಿ ಪ್ರತಿಭಟಿಸಿದರು. ಸಭೆಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್​ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ, ಭ್ರಷ್ಟಚಾರದ ವಿರುದ್ಧ ನಾನು ಮಾತನಾಡುತ್ತೇನೆ. ಇದಕ್ಕಾಗಿ ಪ್ರಾಣ ಕೊಡಲೂ ಸಿದ್ದ ಎಂದು ಹೇಳಿದರು.

ಸದನದ ಘನತೆಗೆ ಧಕ್ಕೆ ತರದಂತೆ ಸಭ್ಯತೆಯಿಂದ ವರ್ತಿಸಿ ಎಂದು ಸ್ಪೀಕರ್ ಮನವಿ ಮಾಡಿದರು. ಆದರೆ, ಇದ್ಯಾವುದಕ್ಕೂ ಕಿವಿಗೊಡದ ಸಿಂಗ್ ಪ್ರತಿಭಟನೆ ಮುಂದುವರೆಸಿದರು. ಸದನ ಮುಕ್ತಾಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕೆಲವು ಶಾಸಕರು, ನೇಪಾಳದ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಅಮರೇಶ್​ ಸಿಂಗ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸ್ಫೋಟಕಗಳನ್ನು ಬಳಸಿ 450 ಮೀಟರ್​ ಉದ್ದದ ಜರ್ಮನಿಯ ಬೃಹತ್​ ಸೇತುವೆ ನೆಲಸಮ -ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.