ETV Bharat / international

ರಷ್ಯಾ-ಉಕ್ರೇನ್‌ನಿಂದ 200 ಯುದ್ಧ ಖೈದಿಗಳ​ ವಿನಿಮಯ - etv bharat kannada

ಭೀಕರ ಕಾಳಗದ ನಡುವೆ ರಷ್ಯಾ-ಉಕ್ರೇನ್​ ದೇಶಗಳು ತಮ್ಮಲ್ಲಿರುವ ಯುದ್ಧ ಖೈದಿಗಳನ್ನು ವಿನಿಮಯ ಮಾಡಿಕೊಂಡಿವೆ.

Russia Ukraine
ರಷ್ಯಾ ಉಕ್ರೇನ್
author img

By

Published : Feb 5, 2023, 12:03 PM IST

ಕೀವ್ (ಉಕ್ರೇನ್) : ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ ಒಂದು ವರ್ಷ ಕಳೆದಿದೆ. ಇದೀಗ ಇವೆರಡೂ ರಾಷ್ಟ್ರಗಳು ಯುದ್ಧ ಖೈದಿಗಳನ್ನು ವಿನಿಮಯ ಮಾಡಿಕೊಂಡಿವೆ. ಉಭಯ ದೇಶಗಳ ಸೈನಿಕರು ಮನೆಗೆ ಮರಳಿರುವುದಾಗಿ ಎರಡೂ ಕಡೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಉಕ್ರೇನ್​ ಅಧ್ಯಕ್ಷರ ಕಚೇರಿ ಮುಖ್ಯಸ್ಥ ಆಂಡ್ರಿ ಯೆಮಾರ್ಕ್​ ಅವರು ಟೆಲಿಗ್ರಾಮ್​ ಪೋಸ್ಟ್​ನಲ್ಲಿ 116 ಉಕ್ರೇನಿಯರು ಮನೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. ಬಿಡುಗಡೆಯಾದ ಯುದ್ಧ ಖೈದಿಗಳಲ್ಲಿ ಮಾಸ್ಕೋದ ಮೇಲೆ ಕೆಲ ತಿಂಗಳುಗಳ ಕಾಲ ನಡೆದ ಯುದ್ಧದಲ್ಲಿ ಮಾರಿಯುಪೋಲ್​ನಲ್ಲಿ ಸೆರೆಸಿಕ್ಕ ಉಕ್ರೇನ್ ಪಡೆಗಳು, ಖೆರ್ಸನ್​ ಪ್ರದೇಶದ ಗೆರಿಲ್ಲಾ ಹೋರಾಟಗಾರರು ಮತ್ತು ಬಖ್ಮುತ್​ನಲ್ಲಿ ಸೆರೆಹಿಡಿಯಲ್ಪಟ್ಟ ಸ್ನೈಪರ್​ಗಳು ಸೇರಿದ್ದಾರೆ. ರಷ್ಯಾಕ್ಕೆ 63 ಯುದ್ಧ ಖೈದಿಗಳು ಉಕ್ರೇನ್‌ನಿಂದ ಮರಳಿದ್ದಾರೆ ಎಂದು ರಷ್ಯಾ ಹೇಳಿದೆ. ಜನವರಿ ಆರಂಭದ ವೇಳೆಗೆ 3,000ಕ್ಕೂ ಹೆಚ್ಚು ಉಕ್ರೇನಿಯನ್​ ಸೈನಿಕರು ರಷ್ಯಾದ ಸೆರೆಯಲ್ಲಿ ಉಳಿದಿದ್ದರು.

ಇದನ್ನೂ ಓದಿ: ಉಕ್ರೇನ್​ ಯುದ್ಧಕ್ಕೂ ಮೊದಲು ನನ್ನ ಮೇಲೆ ಪುಟಿನ್​ ಕ್ಷಿಪಣಿ ದಾಳಿ ಬೆದರಿಕೆ: ಇಂಗ್ಲೆಂಡ್​ ಮಾಜಿ ಪ್ರಧಾನಿ

ಮುಂದುವರೆದ ದಾಳಿ: ರಷ್ಯಾ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್​ಗಳ ದಾಳಿಯನ್ನು ಮತ್ತೆ ಪ್ರಾರಂಭಿಸಿರುವುದಾಗಿ ಉಕ್ರೇನ್ ಅಧಿಕಾರಿಗಳು ಕೆಲ ದಿನಗಳ ಹಿಂದೆ ತಿಳಿಸಿದ್ದರು. ಯುದ್ಧದಲ್ಲಿ ಉಕ್ರೇನ್​ಗೆ ನೆರವಾಗುವ ನಿಟ್ಟಿನಲ್ಲಿ ಜರ್ಮನಿ ಮತ್ತು ಅಮೆರಿಕ ಸುಧಾರಿತ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಹೇಳಿದ್ದವು. ಇದರ ಬೆನ್ನಲ್ಲೇ ಉಕ್ರೇನ್​ ಮೇಲೆ ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಹೊಸ ದಾಳಿ ಶುರು ಮಾಡಿದ್ದವು. ವೈಮಾನಿಕ ದಾಳಿಯ ಸೈರನ್‌ಗಳು ದೇಶಾದ್ಯಂತ ಮೊಳಗಿದ್ದು, ಸದ್ಯಕ್ಕೆ ಯಾವುದೇ ಸಾವು-ನೋವು ವರದಿಯಾಗಿಲ್ಲ.

ರಷ್ಯಾ-ಉಕ್ರೇನ್​ ಜೋಡಿಯ ಮದ್ವೆ: ಕಳೆದ ವರ್ಷ ಉಕ್ರೇನ್​​-ರಷ್ಯಾ ಜೋಡಿಯೊಂದು ಭಾರತದ ಹಿಮಾಚಲ ಪ್ರದೇಶದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಭಾರತದ ವಿಶೇಷ ವಿವಾಹ ಕಾಯ್ದೆಯ ಅನುಸಾರ, ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದರು. ಬಳಿಕ 'ಪರಸ್ಪರ ಪ್ರೀತಿ ಮಾಡಿ, ಯುದ್ಧ ಬೇಡ' ಎಂದು ಉಕ್ರೇನ್​ ಹಾಗೂ ರಷ್ಯಾ ಸರ್ಕಾರಕ್ಕೆ ಮನವಿ ಮಾಡಿಕೊಂಡು ವಿಶೇಷವಾಗಿ ಗಮನ ಸೆಳೆದಿದ್ದರು.

'ಯುದ್ಧ ಕೊನೆಗೊಳಿಸುತ್ತೇವೆ..': ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸಬೇಕೆಂದು ರಷ್ಯಾ ಬಯಸುತ್ತದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಈ ಹಿಂದೆ ವರದಿ ಮಾಡಿತ್ತು. ಮಾತುಕತೆ ಮೂಲಕ ಎಲ್ಲ ಸಶಸ್ತ್ರ ಸಂಘರ್ಷಗಳು ಕೊನೆಗೊಳ್ಳುತ್ತವೆ. ನಾವು ಇದಕ್ಕಾಗಿ ಶ್ರಮಿಸುತ್ತಿದ್ದೇವೆ ಎಂದು ಪುಟಿನ್ ಹೇಳಿರುವುದಾಗಿ ಮಾಹಿತಿ ಹರಿದಾಡುತ್ತಿದೆ.

ಇದನ್ನೂ ಓದಿ: 12ನೇ ತಿಂಗಳಿಗೆ ಕಾಲಿಟ್ಟ ಯುದ್ಧ: ಉಕ್ರೇನ್​ಗೆ ಅಮೆರಿಕ, ಜರ್ಮನಿ ನೆರವು ಘೋಷಣೆ ಬೆನ್ನಲ್ಲೆ ರಷ್ಯಾದ ಹೊಸ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.