ETV Bharat / international

ಭೂಕಂಪಪೀಡಿತ ದೇಶದಲ್ಲಿ NDRF​ ರಕ್ಷಣಾ ಕಾರ್ಯ ಹೇಗಿದೆ? ಭಾರತಕ್ಕೆ ಟರ್ಕಿಯರ ಬಹುಪರಾಕ್​!

ಟರ್ಕಿ, ಸಿರಿಯಾದಲ್ಲಿ ಉಂಟಾದ ಭೀಕರ ಭೂಕಂಪನದಿಂದ ಸಾವಿನ ಸಂಖ್ಯೆ 21 ಸಾವಿರ ದಾಟಿದ್ದರೆ, ಭಾರತದ ರಕ್ಷಣಾ ಕಾರ್ಯಾಚರಣೆಯನ್ನು ಅಲ್ಲಿನ ಜನರು ಶ್ಲಾಘಿಸಿ, ಧನ್ಯವಾದ ಹೇಳುತ್ತಿದ್ದಾರೆ.

NDRF rescue operation in Turkey
ಟರ್ಕಿಯಲ್ಲಿ ಎನ್​ಡಿಆರ್​ಎಫ್​ ರಕ್ಷಣಾ ಕಾರ್ಯಾಚರಣೆ
author img

By

Published : Feb 10, 2023, 4:03 PM IST

ಇಸ್ತಾಂ​ಬುಲ್ ​(ಟರ್ಕಿ): ಭೂಕಂಪನದಿಂದ ನಲುಗಿರುವ ಟರ್ಕಿ, ಸಿರಿಯಾ ದೇಶಕ್ಕೆ ಭಾರತ ಸರ್ಕಾರ ಸಹಾಯಹಸ್ತ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್​ಡಿಆರ್​ಎಫ್​) ನೂರಕ್ಕೂ ಅಧಿಕ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಬದುಕಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದೆ. ಇದೇ ವೇಳೆ ಭಾರತೀಯ ಪಡೆಯ ಸಿಬ್ಬಂದಿಗೆ ಟರ್ಕಿ ಮಹಿಳೆಯೊಬ್ಬರು ಮುತ್ತಿಟ್ಟು ಧನ್ಯವಾದ ಹೇಳಿದ್ದಾರೆ.

ಚೀನಾ, ಪಾಕಿಸ್ತಾನದ ಬಳಿಕ ಭಾರತದ ಮೇಲೆ ಅತಿಹೆಚ್ಚು ದ್ವೇಷ ಹೊಂದಿರುವ ಟರ್ಕಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾನವೀಯ ನೆಲೆಯ ಮೇಲೆ ನೆರವು ನೀಡಿದ್ದಾರೆ. ಎನ್​ಡಿಆರ್​ಎಫ್​, ವೈದ್ಯ, ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಎನ್​ಡಿಆರ್​ಎಫ್​ ಸಿಬ್ಬಂದಿ ಮಹಿಳೆ, ಮಗುವನ್ನು ಅವಶೇಷಗಳಡಿಯಿಂದ ಜೀವಂತವಾಗಿ ಹೊರತೆಗೆದು ರಕ್ಷಿಸಿದೆ. ಇದಲ್ಲದೇ 8 ಶವಗಳನ್ನೂ ಪತ್ತೆ ಮಾಡಿದೆ. ಎನ್​ಡಿಆರ್​ಎಫ್​ ಮಗುವನ್ನು ರಕ್ಷಿಸಿದ ವಿಡಿಯೋವನ್ನು ಗೃಹ ಸಚಿವ ಅಮಿತ್​ ಶಾ ಅವರು ಹಂಚಿಕೊಂಡಿದ್ದಾರೆ. "ನಮ್ಮ ಹೆಮ್ಮೆಯ ಎನ್​ಡಿಆರ್​ಎಫ್​​. ರಕ್ಷಣಾ ಕಾರ್ಯಾಚರಣೆಯಲ್ಲಿ ಇಂಡಿಯಾ 11 ತಂಡ ಆರು ವರ್ಷದ ಬಾಲಕಿಯನ್ನು ಬೆರೆನ್​ ಪ್ರದೇಶದಲ್ಲಿ ಅವಶೇಷಗಳಡಿಯಿಂದ ಜೀವಂತವಾಗಿ ರಕ್ಷಿಸಿದೆ. ಟರ್ಕಿಗೆ ಸಹಾಯ ಮಾಡಲು ನಾವು ಬದ್ಧವಾಗಿದೆ" ಎಂದು ಒಕ್ಕಣೆ ನೀಡಿದ್ದಾರೆ.

ಟರ್ಕಿ ಮಹಿಳೆ ಮುತ್ತಿಟ್ಟ ಚಿತ್ರ ವೈರಲ್​: ಇನ್ನೊಂದೆಡೆ, ಟರ್ಕಿಯ ಮಹಿಳೆಯೊಬ್ಬರು ರಕ್ಷಣಾ ಕಾರ್ಯದಲ್ಲಿರುವ ಭಾರತೀಯ ಪಡೆಯ ಸಿಬ್ಬಂದಿಗೆ ಮುತ್ತಿಟ್ಟಿದ್ದನ್ನು ಭಾರತೀಯ ಸೇನೆಯ ಅಡಿಷನಲ್​ ಡೈರೆಕ್ಟರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೇಶನ್ (ADG PI) ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. "ನಾವು ಕಾಳಜಿ ವಹಿಸುತ್ತೇವೆ" ಎಂದು ಬರೆಯಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾರತೀಯರ ಕಾರ್ಯಕ್ಕೆ ಶ್ಲಾಘನೆ: ಭಾರತೀಯ ಯೋಧರ ಕಾರ್ಯಕ್ಕೆ ಅಲ್ಲಿಮ ಜನರು ಶ್ಲಾಘನೆ ವ್ಯಕ್ತಪಡಿಸಿದ್ದು, "ಅವರು ಯುದ್ಧಕ್ಕಾಗಿ ಈ ರೀತಿ ಮಾಡುತ್ತಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಭಾರತೀಯರು ನೆರವಾಗಿದ್ದಾರೆ. ವಿಶ್ವದ ಎಲ್ಲ ದೇಶಗಳ ಅಗತ್ಯ ನಮಗಿದೆ. ಭಾರತೀಯ ತಂಡಕ್ಕೆ ದೊಡ್ಡ ನಮನಗಳು". ಆಪರೇಷನ್​ ದೋಸ್ತ್​ ಎಂದು ಹ್ಯಾಷ್​ಟ್ಯಾಗ್​ನಡಿ ಟರ್ಕಿಯ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ. "ಮಾನವೀಯತೆಯು ವಿಶ್ವದ ಅತಿದೊಡ್ಡ ಧರ್ಮ ಮತ್ತು ಅದುವೇ ಪರಮ ಸತ್ಯ. ಇದೇ ಭಾರತೀಯ ಸಂಸ್ಕೃತಿಯ ಆತ್ಮದ ತಿರುಳಾಗಿದೆ" ಎಂದು ಇನ್ನೊಬ್ಬರು ಬಣ್ಣಿಸಿದ್ದಾರೆ.

ಏರಿಕೆಯತ್ತ ಸಾವಿನ ಸಂಖ್ಯೆ: ಜನರು ನಿದ್ರಿಸುತ್ತಿದ್ದಾಗ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪವು ಸಾವಿರಾರು ಕಟ್ಟಡಗಳನ್ನು ನಾಶಪಡಿಸಿತು, ಅನಿರ್ದಿಷ್ಟ ಸಂಖ್ಯೆಯ ಜನರು ಸಿಕ್ಕಿಬಿದ್ದಿದ್ದಾರೆ ಮತ್ತು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರಬಹುದು. ಫೆ.6 ರಂದು ಉಂಟಾದ ಭೀಕರ ಭೂಕಂಪನದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಈವರೆಗೂ 21,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರಗಳು ತಿಳಿಸಿವೆ. ಸಿರಿಯಾದಲ್ಲಿ 3,377 ಜನರು ಮತ್ತು ಟರ್ಕಿಯಲ್ಲಿ 17,674 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಟರ್ಕಿಯಲ್ಲಿ 12 ಸಾವಿರಕ್ಕೂ ಅಧಿಕ ಕಟ್ಟಡಗಳು ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.