ETV Bharat / international

ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಮಾದರಿಗಳನ್ನು ಪ್ರದರ್ಶಿಸಿದ ನಾಸಾ: ಸೌರವ್ಯೂಹ, ಭೂಮಿ ಸೃಷ್ಟಿ ಬಗ್ಗೆ ಅಧ್ಯಯನ - ಕ್ಷುದ್ರ ಗ್ರಹದಿಂದ ಸಂಗ್ರಹಿಸಿ ಮಾದರಿ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 'ಬೆನ್ನು' ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಮಾದರಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಂಗ್ರಹಿಸಿದ ಮಾದರಿ ಕಪ್ಪು ಧೂಳು ಮತ್ತು ಕಲ್ಲು ಮಣ್ಣಿನಂತಿದೆ. ಇದರಿಂದ ಸೌರವ್ಯೂಹ ಮತ್ತು ಭೂಮಿಯ ಸೃಷ್ಟಿಯನ್ನು ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

nasa-shows-off-first-asteroid-samples-delivered-by-spacecraft
ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಮಾದರಿಗಳನ್ನು ಪ್ರದರ್ಶಿಸಿದ ನಾಸಾ : ಸೌರವ್ಯೂಹ, ಭೂಮಿ ಸೃಷ್ಟಿ ಬಗ್ಗೆ ಅಧ್ಯಯನ
author img

By PTI

Published : Oct 12, 2023, 9:24 AM IST

ಕೇಪ್ ಕ್ಯಾನವೆರಲ್ (ಅಮೆರಿಕ): ಭಾರತದ ವಿಜ್ಞಾನಿಗಳು ಚಂದ್ರಯಾನವನ್ನು ಯಶಸ್ವಿಯಾಗಿ ನಡೆಸಿದ ಬೆನ್ನಲ್ಲೇ ಅಮೆರಿಕದ ವಿಜ್ಞಾನಿಗಳು ಇದೀಗ ಮಹತ್ತರ ಸಾಧನೆ ಮಾಡಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದ ನೌಕೆಯು 'ಬೆನ್ನು' ಎಂಬ ಕ್ಷುದ್ರ ಗ್ರಹದ ಮಾದರಿಗಳನ್ನು ಸಂಗ್ರಹಿಸಿ ಉತಾಹ್ ಮರುಭೂಮಿಯಲ್ಲಿ ಸಾಫ್ಟ್​ ಲ್ಯಾಂಡಿಂಗ್​ ಆಗಿತ್ತು. ಈ ಮಾದರಿ ಬಗ್ಗೆ ನಾಸಾ ವಿಜ್ಞಾನಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಒಸಿರಿಸ್ ​ -ರೆಕ್ಸ್​ ನೌಕೆಯು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಾದರಿಯನ್ನು ಸಂಗ್ರಹಿಸಿಕೊಂಡು ಬಂದಿದೆ. ಸಂಗ್ರಹಿಸಿದ ಮಾದರಿ ಕಪ್ಪು ಧೂಳು ಮತ್ತು ಕಲ್ಲು ಮಣ್ಣಿನಂತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ.

2016ರಲ್ಲಿ ನಾಸಾ ಸಂಸ್ಥೆಯು ಈ ಒಸಿರಿಸ್ ​ -ರೆಕ್ಸ್​ ನೌಕೆಯನ್ನು ನಭಕ್ಕೆ ಹಾರಿಬಿಟ್ಟಿತ್ತು. ಇದೀಗ ಈ ನೌಕೆಯು 'ಬೆನ್ನು' ಕ್ಷುದ್ರಗ್ರಹದಿಂದ ಸರಿಯಾಗಿ ಎಷ್ಟು ಪ್ರಮಾಣದ ಮಾದರಿಯನ್ನು ಹೊತ್ತು ತಂದಿದೆ ಎಂದು ತಿಳಿದುಬಂದಿಲ್ಲ. ಈ ಬೆನ್ನು ಕ್ಷುದ್ರಗ್ರಹದಲ್ಲಿ ಕಾರ್ಬನ್ ಪ್ರಮಾಣ ಹೆಚ್ಚಾಗಿದ್ದು, ಭೂಮಿಯಿಂದ ಸುಮಾರು 97 ಮಿಲಿಯನ್​ ಕಿಮೀ ದೂರದಲ್ಲಿ ಎಂದು ಹೇಳಿದೆ. ಈ ನೌಕೆಯು ಹೊತ್ತು ತಂದಿರುವ ಪ್ರಮುಖ ಮಾದರಿ ಪೆಟ್ಟಿಗೆಯನ್ನು ಇನ್ನು ತೆರೆಯಲಾಗಿಲ್ಲ ಎಂದು ನಾಸಾ ವಿಜ್ಞಾನಿಗಳು ಹೂಸ್ಟನ್​ನ ಜಾನ್ಸನ್​​ ಸ್ಪೇನ್​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ನಮ್ಮ ಯೋಜನೆ ನಿಧಾನವಾಗಿ, ನಿಖರವಾಗಿ ಸಾಗುತ್ತಿದೆ. ಈಗಾಗಲೇ ನಮ್ಮ ಸಂಶೋಧನೆ ಪ್ರಾರಂಭವಾಗಿದೆ ಎಂದು ಯೋಜನೆಯ ಪ್ರಮುಖ ವಿಜ್ಞಾನಿ ಅರಿಜೋನಾ ವಿಶ್ವ ವಿದ್ಯಾಲಯದ ಡಾಂಟೆ ಲಾರೆಟ್ಟಾ ಹೇಳಿದ್ದಾರೆ.

ನಾಸಾವು ಬೆನ್ನು ಕ್ಷುದ್ರ ಗ್ರಹದಿಂದ ಮೂರು ವರ್ಷಗಳ ಹಿಂದೆಯೇ ಮಾದರಿಯನ್ನು ಸಂಗ್ರಹಿಸಿತ್ತು. ಬಳಿಕ ನೌಕೆಯು ತನ್ನ ಕ್ಯಾಪ್ಸೂಲ್​ ಮೂಲಕ ಭೂಮಿಗೆ ಕಳುಹಿಸಿತ್ತು. ನಾಸಾ ವಿಜ್ಞಾನಿಗಳು ಒಂದು ಕಪ್​ನಷ್ಟು ಮಾದರಿ ಸಂಗ್ರಹಿಸಬಹುದು ಎಂದು ಅಂದಾಜಿಸಿದ್ದರು. ಇದಕ್ಕೂ ಮುನ್ನ ಜಪಾನ್​ ಕ್ಷುದ್ರಗ್ರಹವೊಂದರಿಂದ ಒಂದು ಟೀ ಸ್ಪೂನ್​ನಷ್ಟು ಮಾದರಿಯನ್ನು ಸಂಗ್ರಹಿಸಿ ತಂದಿತ್ತು. ಆದರೆ, ನಾಸಾ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಕ್ಷುದ್ರಗ್ರಹದಿಂದ ಹೆಚ್ಚು ಮಾದರಿ ಸಂಗ್ರಹಿಸಿ ಸಾಧನೆ ಮಾಡಿದ್ದಾರೆ.

ನೀರಿನ ಅಂಶಗಳು ಇರುವ ಸಾಧ್ಯತೆ : ನೌಕೆಯು ಸಂಗ್ರಹಿಸಿರುವ ಮಾದರಿಯು ಕಪ್ಪು ಧೂಳು ಮತ್ತು ಕಲ್ಲು ಮಣ್ಣಿನ ರೀತಿಯಲ್ಲಿದೆ. ಇದು ಇಲ್ಲಿನ ಮಾದರಿ ಪೆಟ್ಟಿಗೆಯ ತುಂಬೆಲ್ಲ ಹರಡಿಕೊಂಡಿದೆ. ಈ ಮಾದರಿಗಳು ಅತ್ಯಂತ ಅಮೂಲ್ಯವಾದವುಗಳು. ಇದು ಸೂರ್ಯನ ಕಿರಣಗಳಿಂದ ಸಂರಕ್ಷಿಸಲ್ಪಟ್ಟ ವಸ್ತುಗಳು ಎಂದು ವಿಜ್ಞಾನಿ ಲಾರೆಟ್ಟಾ ತಿಳಿಸಿದ್ದಾರೆ.

ಈ ಕ್ಷುದ್ರಗ್ರಹದಲ್ಲಿ ಕಾರ್ಬನ್​( ಇಂಗಾಲ) ಹೊರತಾಗಿ, ನೀರಿನ ಅಂಶಗಳು ಇರಬಹುದು ಎಂದು ಹೇಳಲಾಗಿದೆ. ಏಕೆಂದರೆ ಇಲ್ಲಿನ ಕಲ್ಲು ಮಣ್ಣಿನ ಮಾದರಿಗಳು ನೀರಿನ ಅಂಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೇ ರೀತಿಯಲ್ಲಿ ಭೂಮಿಯಲ್ಲಿ ನೀರು ಉಂಟಾಗಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1 ಬಿಲಿಯನ್​ ಡಾಲರ್​, 7 ವರ್ಷಗಳ ಸುದೀರ್ಘ ಯೋಜನೆ : ಈ ಯೋಜನೆಗೆ 1 ಬಿಲಿಯನ್​ ಡಾಲರ್​ ವೆಚ್ಚ ಮಾಡಲಾಗಿದೆ. ಸುಮಾರು 7 ವರ್ಷಗಳಿಂದ ನಾಸಾ ವಿಜ್ಞಾನಿಗಳು ಈ ಯೋಜನೆಯನ್ನು ನಡೆಸುತ್ತಿದ್ದಾರೆ. ಈ ಯೋಜನೆಯ ಪ್ರಮುಖ ಉದ್ದೇಶ ಎಂದರೆ ಸೌರ ವ್ಯೂಹ ಮತ್ತು ಭೂಮಿಯು ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂಬುದನ್ನು ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ.

ಒಟ್ಟು 250 ಗ್ರಾಂ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗಿತ್ತು. ಇನ್ನು ಪ್ರಮುಖ ಮಾದರಿ ಪೆಟ್ಟಿಗೆ ತೆರೆಯಲಾಗಿಲ್ಲ. ಈ ಮಾದರಿಯನ್ನು ತೆರೆದ ನಂತರ ಜಗತ್ತಿನ 60 ಪ್ರಯೋಗಾಲಯಗಳ 200 ವಿಜ್ಞಾನಿಗಳ ಜೊತೆಗೆ ಹಂಚಿಕೊಳ್ಳಲಿದೆ. ಈ ವಿಜ್ಞಾನಿಗಳು ಸಂಗ್ರಹಿಸಿದ ಮಾದರಿ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಿದ್ದಾರೆ. ಇನ್ನು, ನಾಸಾ ಇನ್ನೊಂದು ನೌಕೆಯ ಉಡಾವಣೆಗೆ ಸಿದ್ಧತೆ ನಡೆಸಿದ್ದು, ಮುಂದಿನ ವಾರ ನೌಕೆ ಉಡಾವಣೆಯಾಗಲಿದೆ. ಈ ಬಾರಿ ಲೋಹದಿಂದ ಮಾಡಲಾಗಿರುವ ಸೈಕ್​ ಎಂಬ ಕ್ಷುದ್ರಗ್ರಹವನ್ನು ಅಧ್ಯಯನ ನಡೆಸಲಿದೆ. ಆದರೆ ಯಾವುದೇ ಮಾದರಿಗಳನ್ನು ಇಲ್ಲಿಂದ ತರಲಾಗುತ್ತಿಲ್ಲ.

ಇದನ್ನೂ ಓದಿ : ಕ್ಷುದ್ರಗ್ರಹದ ಮಾದರಿ ಸಂಗ್ರಹಿಸಿ ಭೂಮಿಗೆ ಸುರಕ್ಷಿತವಾಗಿ ಮರಳಿದ ನಾಸಾದ ಗಗನನೌಕೆ: ಫೋಟೋಗಳಿವೆ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.