ETV Bharat / international

ಗುಂಡಿನ ದಾಳಿಯ ನಂತರ ಪಾರ್ಶ್ವವಾಯು; ಪ್ಯಾಲೇಸ್ಟಿನಿಯನ್ ವಿದ್ಯಾರ್ಥಿಗೆ 95ಸಾವಿರ ಡಾಲರ್​ ನಿಧಿ ಸಂಗ್ರಹ

ಅಮೆರಿಕದಲ್ಲಿ ಇತ್ತೀಚೆಗೆ ನಡೆದಿದ್ದ ಗುಂಡಿನ ದಾಳಿಯ ನಂತರ ಪಾರ್ಶ್ವವಾಯುವಿಗೆ ತುತ್ತಾದ ಪ್ಯಾಲೇಸ್ಟಿನಿಯನ್ ವಿದ್ಯಾರ್ಥಿಗಾಗಿ 950,000ಕ್ಕಿಂತ ಹೆಚ್ಚು ಡಾಲರ್​ ನಿಧಿ ಸಂಗ್ರಹಿಸಲಾಗಿದೆ.

shooting attack
ಗುಂಡಿನ ದಾಳಿಯ ನಂತರ ಪಾರ್ಶ್ವವಾಯುವಿಗೆ ತುತ್ತಾದ ಪ್ಯಾಲೇಸ್ಟಿನಿಯನ್ ವಿದ್ಯಾರ್ಥಿಗೆ 950,000ಕ್ಕಿಂತ ಹೆಚ್ಚು ಡಾಲರ್​ ನಿಧಿ ಸಂಗ್ರಹ
author img

By PTI

Published : Dec 5, 2023, 7:17 AM IST

ವೆರ್ಮೊಂಟ್ (ಅಮೆರಿಕ): ಅಮೆರಿಕದ ಬರ್ಲಿಂಗ್ಟನ್​ನ ವೆರ್ಮೊಂಟ್‌ನಲ್ಲಿ ಇತ್ತೀಚೆಗೆ ಪ್ಯಾಲೆಸ್ಟೈನ್ ಮೂಲದ ಮೂವರು ಯುವಕರ ಮೇಲೆ ಗುಂಡಿನ ದಾಳಿ ನಡೆದಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ವಿದ್ಯಾರ್ಥಿ ಪಾರ್ಶ್ವವಾಯುವಿಗೆ ತತ್ತಾಗಿದ್ದಾರೆ. ಪ್ಯಾಲೇಸ್ಟಿನಿಯನ್ ಮೂಲದ ಮೂವರು ಕಾಲೇಜು ವಿದ್ಯಾರ್ಥಿಗಳ ಪೈಕಿ ಒಬ್ಬನ ಚೇತರಿಕೆಗಾಗಿ 950,000ಕ್ಕಿಂತ ಹೆಚ್ಚು ಡಾಲರ್​ ಸಂಗ್ರಹಿಸಲಾಗಿದೆ. ಇದಕ್ಕಾಗಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬವು ಗೋ ಫಂಡ್​ ಮೀ (GoFundMe) ಅನ್ನು ಸ್ಥಾಪಿಸಿದೆ.

''ನವೆಂಬರ್ 25ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಹಿಶಾಮ್ ಅವರ್ತಾನಿ ತೀವ್ರವಾಗಿ ಗಾಯಗೊಂಡಿದ್ದನು. ಅವನ ಬೆನ್ನುಮೂಳೆಯಲ್ಲಿ ಬುಲೆಟ್​ಗಳನ್ನು ಸಿಲುಕಿಕೊಂಡಿದ್ದವು. ಹಿಶಾಮ್​ಗೆ ಉತ್ತಮ ಚಿಕಿತ್ಸೆ ಕೊಡಿಸಲು ನಿಧಿಸಲಾಗುತ್ತಿದೆ'' ಎಂದು ಹಿಶಾಮ್​ನ ಕುಟುಂಬದವರು ತಿಳಿಸಿದ್ದಾರೆ.

ಅವರ್ತಾನಿ, ಕಿನ್ನನ್ ಅಬ್ದಲ್‌ಹಮಿದ್ ಮತ್ತು ತಹ್ಸೀನ್ ಅಲಿ ಅಹ್ಮದ್ ಅವರು ಬಾಲ್ಯದ ಗೆಳೆಯರಾಗಿದ್ದರು. ಅವರು ವೆಸ್ಟ್ ಬ್ಯಾಂಕ್‌ನ ಖಾಸಗಿ ಕ್ವೇಕರ್ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. ಈಗ ಪೂರ್ವ ಅಮೆರಿಕದಲ್ಲಿ ಕಾಲೇಜುಗಳಿಗೆ ಹಾಜರಾಗಿದ್ದಾರೆ. ಈ 20 ವರ್ಷದ ಯುವಕರು ವಿರಾಮದ ವೇಳೆಯಲ್ಲಿ ಬರ್ಲಿಂಗ್‌ಟನ್‌ನಲ್ಲಿರುವ ಅವರ್ತಾನಿಯ ಸಂಬಂಧಿಕರನ್ನು ಭೇಟಿ ಮಾಡುತ್ತಿದ್ದರು. ಹಿಶಾಮ್ ಅವರ ಅಜ್ಜಿಯ ಮನೆಗೆ ಊಟಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅಪ್ರಚೋದಿತ ಗುಂಡಿನ ದಾಳಿ ನಡೆದಿತ್ತು ಎಂದು ಸಂತ್ರಸ್ತರ ಕುಟುಂಬದವರು ತಿಳಿಸಿದ್ದಾರೆ.

ಗುಂಡಿನ ದಾಳಿ ಕುರಿತು ಅಧಿಕಾರಿಗಳಿಂದ ತನಿಖೆ: ಯುವಕರು ಇಂಗ್ಲಿಷ್ ಮತ್ತು ಅರೇಬಿಕ್ ಮಿಶ್ರಣದಲ್ಲಿ ಮಾತನಾಡುತ್ತಿದ್ದರು. ಅವರಲ್ಲಿ ಇಬ್ಬರು ಕಪ್ಪು- ಬಿಳುಪಿನ ಪ್ಯಾಲೆಸ್ತೀನ್​ನ ಸಾಂಪ್ರದಾಯಿಕ ಸ್ಕಾರ್ಫ್‌ಗಳನ್ನು ಧರಿಸಿದ್ದರು ಎಂದು ಬರ್ಲಿಂಗ್ಟನ್ ಪೊಲೀಸ್ ಮುಖ್ಯಸ್ಥ ಜಾನ್ ಮುರಾದ್ ಹೇಳಿದ್ದಾರೆ. ಗುಂಡಿನ ದಾಳಿ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಪೈಕಿ ವಿದ್ಯಾರ್ಥಿ ಅಬ್ದಲಹಮಿದ್ ಕಳೆದ ವಾರ ಆಸ್ಪತ್ರೆಯಿಂದ ಡಿಶ್ಚಾರ್ಜ್​ ಆಗಿದ್ದರು. ಇನ್ನೂ ಶಂಕಿತ ಬಂದೂಕುಧಾರಿ ಜೇಸನ್ ಜೆ ಈಟನ್​ನನ್ನು (48) ಘಟನೆ ನಡೆದ ಮರುದಿನ ಬರ್ಲಿಂಗ್ಟನ್ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿತ್ತು. ಈಟನ್ ಕೊಲೆ ಯತ್ನದ ಕುರಿತು ತಪ್ಪೊಪ್ಪಿಕೊಂಡಿಲ್ಲ. ಪಸ್ತುತ ಈ ಆರೋಪಿ ಜೈಲಿನಲ್ಲಿದ್ದಾನೆ.

''ಇಸ್ರೇಲ್-ಹಮಾಸ್ ಯುದ್ಧ ಮುಂದುವರಿದಿದ್ದು, ಅಕ್ಟೋಬರ್ ಆರಂಭದ ಅವಧಿಯಲ್ಲಿ ಅಮೆರಿಕದಾದ್ಯಂತ ಯಹೂದಿ, ಮುಸ್ಲಿಂ ಮತ್ತು ಅರಬ್ ಸಮುದಾಯಗಳಿಗೆ ಬೆದರಿಕೆಗಳು ಹೆಚ್ಚಾದ ಕಾರಣ ಗುಂಡಿನ ದಾಳಿ ನಡೆದಿದೆ. ಏಳು ಭಾಷೆಗಳನ್ನು ಮಾತನಾಡುವ ಅವರ್ತಾನಿ ಅವರು ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಮತ್ತು ಪುರಾತತ್ತ್ವ ಶಾಸ್ತ್ರದಲ್ಲಿ ಡ್ಯುಯಲ್ ಪದವಿ ಪಡೆಯುತ್ತಿದ್ದಾರೆ. ಅಲ್ಲಿ ಅವರು ಬೋಧನಾ ಸಹಾಯಕರೂ ಆಗಿದ್ದಾರೆ. ಅವರ್ತಾನಿ ಮುಂದಿನ ಸೆಮಿಸ್ಟರ್​ಗೆ ವಿವಿಗೆ ಬರುವ ಸಾಧ್ಯತೆಯಿದೆ'' ಎಂದು ಕುಟುಂಬಸ್ಥರು ತಿಳಿಸಿದರು.

ಗುಂಡಿನ ದಾಳಿ ನಡೆಸಿದವನಿಗೆ ಶಿಕ್ಷೆ ವಿಧಿಸಲು ಒತ್ತಾಯ: ''ಈ ಗುಂಡಿನ ದಾಳಿ ದ್ವೇಷದ ಅಪರಾಧವಾಗಿದ್ದು, ಸೂಕ್ತ ತನಿಖೆ ನಡೆಸಬೇಕು'' ಎಂದು ಸಂತ್ರಸ್ತರ ಕುಟುಂಬಗಳು ಒತ್ತಾಯ ಮಾಡಿವೆ. ದಾಳಿ ನಡೆಸಿದವನಿಗೆ ಶಿಕ್ಷೆ ವಿಧಿಸುವವರೆಗೆ ನಾವು ಹೋರಾಡುತ್ತೇವೆ. ಯಾವುದೇ ಕುಟುಂಬವೂ ನೋವು ಹಾಗೂ ಸಂಕಟವನ್ನು ಸಹಸುವುದಿಲ್ಲ. ನಮ್ಮ ಮಕ್ಕಳು ಅಧ್ಯಯನಕ್ಕಾಗಿ ವಿದೇಶಕ್ಕೆ ಬಂದಿದ್ದಾರೆ. ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಸರಿಯಲ್ಲ'' ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 11 ಪರ್ವತಾರೋಹಿಗಳು ಸಾವು, 22 ಮಂದಿ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.