ETV Bharat / international

ಮೆಹುಲ್ ಚೋಕ್ಸಿಗೆ ಮತ್ತೆ ರಿಲೀಫ್​: ಆಂಟಿಗುವಾದಿಂದ ಗಡಿಪಾರಿಗೆ ಡೊಮಿನಿಕಾ ಕೋರ್ಟ್​ ತಡೆ

author img

By

Published : Apr 15, 2023, 8:01 AM IST

ದೇಶದಿಂದ ಪರಾರಿಯಾಗಿರುವ ಬಹುಕೋಟಿ ಹಗರಣದ ಆರೋಪಿ ಮೆಹುಲ್​ ಚೋಕ್ಸಿಗೆ ವಿದೇಶಿ ಕೋರ್ಟ್​ ಮತ್ತೆ ರಿಲೀಫ್​ ನೀಡಿದೆ. ಅನುಮತಿ ಇಲ್ಲದೇ, ಆತನನ್ನು ಗಡಿಪಾರು ಮಾಡದಂತೆ ಸೂಚಿಸಿದೆ.

ಮೆಹುಲ್ ಚೋಕ್ಸಿಗೆ ಮತ್ತೆ ರಿಲೀಫ್
ಮೆಹುಲ್ ಚೋಕ್ಸಿಗೆ ಮತ್ತೆ ರಿಲೀಫ್

ರೋಸೋ(ಡೊಮಿನಿಕಾ): ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿಗೆ ನ್ಯಾಯಾಲಯದಲ್ಲಿ ಮತ್ತೆ ರಿಲೀಫ್​ ಸಿಕ್ಕಿದೆ. ಅನುಮತಿ ಇಲ್ಲದೇ, ಚೋಕ್ಸಿ ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಗಡಿಪಾರು ಮಾಡುವಂತಿಲ್ಲ ಎಂದು ಡೊಮಿನಿಕಾ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ತಮ್ಮನ್ನು ದೇಶದಿಂದ ಗಡಿಪಾರು ಮಾಡಬಾರದು. ಎಲ್ಲ ತನಿಖೆಗೂ ತಾವು ಸಿದ್ಧ ಎಂದು ಚೋಕ್ಸಿ ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಡೊಮಿನಿಕಾ ಕೋರ್ಟ್​, ಈ ಆದೇಶ ನೀಡಿದೆ. ತಮಗೆ ಗಡಿಪಾರು ಶಿಕ್ಷೆ ನೀಡುವುದು ಅಮಾನವೀಯ ಮತ್ತು ಅವಮಾನಕರ ಎಂದು ಕೋರ್ಟ್​ನಲ್ಲಿ ಚೋಕ್ಸಿ ವಾದಿಸಿದ್ದಾರೆ. ವ್ಯಾಪಾರಿಯನ್ನು ವಿಚಾರಣೆ ಇಲ್ಲದೇ, ಅನುಮತಿ ರಹಿತವಾಗಿ ದೇಶದಿಂದ ಕಳುಹಿಸುವಂತಿಲ್ಲ. ಮೇಲ್ಮನವಿಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಹಕ್ಕುದಾರರಿಗೆ ನೀಡಬೇಕು ಎಂದೂ ಇದೇ ವೇಳೆ ಹೇಳಿದೆ.

ಬಲವಂತದ ಅಪಹರಣ, ದೇಶದಿಂದ ಗಡಿಪಾರು ಮಾಡುವುದರ ವಿರುದ್ಧ ಚೋಕ್ಸಿ ಕೋರ್ಟ್​ ಮೊರೆ ಹೋಗಿದ್ದಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಪೊಲೀಸರು ಡೊಮಿನಿಕಾಗೆ ಕರೆದೊಯ್ದಿದ್ದಾರೆ. ದೇಶದಿಂದ ತಮ್ಮನ್ನು ಕಳುಹಿಸಬಾರದು ಎಂದು ಮನವಿ ಮಾಡಿದ್ದಾರೆ. ತ್ವರಿತ ತನಿಖೆ ನಡೆಸಲು ತಮ್ಮ ವಿರುದ್ಧ ಯಾವುದೇ ಗಂಭೀರ ಪ್ರಕರಣಗಳು ಇಲ್ಲ. ಆದರೂ, ತನಿಖೆಯ ಹೆಸರಿನಲ್ಲಿ ತಮ್ಮ ಹಕ್ಕು ಕಸಿಯಲಾಗುತ್ತಿದೆ. ಕಿರಿಕಿರಿ ನೀಡುವ ಮೂಲಕ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗುತ್ತಿದೆ ಎಂದು ವಾದಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್‌ಬಿ) 13,500 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಭಾರತದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಹೀಗಾಗಿ ಚೋಕ್ಸಿ ಭಾರತಕ್ಕೆ ಮೋಸ್ಟ್​ ವಾಂಟೆಡ್​ ಆರೋಪಿ ಆಗಿದ್ದಾರೆ. ಕಳೆದ ವರ್ಷ ಡೊಮಿನಿಕಾದಿಂದ ಚೋಕ್ಸಿ ನಾಪತ್ತೆಯಾಗಿದ್ದರು. ಬಳಿಕ ಮೇ 26 ರಂದು ಡೊಮಿನಿಕಾದಲ್ಲಿಯೇ ಅವರನ್ನು ಸೆರೆಹಿಡಿಯಲಾಗಿತ್ತು. ಚೋಕ್ಸಿಯ ವಕೀಲರಿಂದ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್​​ ಅರ್ಜಿಯ ಬಳಿಕ ಡೊಮಿನಿಕನ್ ನ್ಯಾಯಾಲಯವು ಅವರ ಗಡಿಪಾರನ್ನು ತಡೆದಿತ್ತು. ಚೋಕ್ಸಿ 2018 ರಿಂದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ.

ರೆಡ್​ ನೋಟಿಸ್​ ಪಟ್ಟಿಯಿಂದ ಔಟ್​: ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಚೋಕ್ಸಿ ಹೆಸರನ್ನು ಇಂಟರ್​ಪೋಲ್​ ರೆಡ್​ ಕಾರ್ನರ್​ ನೋಟಿಸ್​ ಪಟ್ಟಿಯಿಂದ ಈಚೆಗಷ್ಟೇ ತೆಗೆದು ಹಾಕಿತ್ತು. ಆದರೆ, ಭಾರತ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಕೈಬಿಡದಂತೆ ಮನವಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ್ದ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್, ನಮ್ಮ ಕಾನೂನು ತಂಡದ ಪ್ರಯತ್ನಗಳಿಂದಾಗಿ ನನ್ನ ಕಕ್ಷಿದಾರರ ಮೇಲಿರುವ ಆರೋಪ ಮತ್ತು ಅವರ ಮೇಲೆ ಹೇರಿದ ಹಲವಾರು ಷರತ್ತುಗಳನ್ನು ಅಂತಾರಾಷ್ಟ್ರೀಯ ಸಮುದಾಯವು ಅನುಮೋದಿಸದ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಇಂಟರ್‌ಪೋಲ್‌ ತೆಗೆದು ಹಾಕಿದೆ ಎಂದು ತಿಳಿಸಿದ್ದರು.

ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಪರ ವಕೀಲರು ಫ್ರಾನ್ಸ್‌ನ ಲಿಯಾನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇಂಟರ್‌ಪೋಲ್‌ ನಿರ್ಧಾರದ ಬಗ್ಗೆ ಭಾರತದ ಕೇಂದ್ರೀಯ ತನಿಖಾ ದಳ(ಸಿಬಿಐ) ತಕರಾರು ಸಲ್ಲಿಸಿದೆ. ಚೋಕ್ಸಿ ಬಹುಕೋಟಿ ಹಗರಣ ಆರೋಪಿಯಾಗಿದ್ದು, ಆತನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಕೋರಿದೆ.

ಓದಿ: ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಹಾರಾಟಕ್ಕೆ ಎಫ್​ಎಎ ಅಸ್ತು: ಸೋಮವಾರ ಉಡಾವಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.