ETV Bharat / international

Maui wildfires: ಹವಾಯಿಯಲ್ಲಿ ಕಾಳ್ಗಿಚ್ಚಿನ ಅಟ್ಟಹಾಸ.. ಈವರೆಗೆ 53 ಮಂದಿ ಅಗ್ನಿಗಾಹುತಿ - ಜೋ ಬೈಡನ್

Maui fire: ಹವಾಯಿ ದ್ವೀಪದ ಮಾಯಿಯಲ್ಲಿ ಭಾರಿ ಕಾಳ್ಗಿಚ್ಚು ಆವರಿಸಿದೆ. ದುರಂತದಲ್ಲಿ ಈವರೆಗೆ 53 ಮಂದಿ ಸಾವಿಗೀಡಾಗಿದ್ದಾರೆ ಎಂದು ಹವಾಯಿ ಗವರ್ನರ್ ಹೇಳಿದ್ದಾರೆ

Representative Image
ಪ್ರಾತಿನಿದಿಕ ಚಿತ್ರ
author img

By

Published : Aug 11, 2023, 9:11 AM IST

ಲಹೈನಾ( ಹವಾಯಿ): ಮಾಯಿ ದ್ವೀಪದಲ್ಲಿ ಸಂಭವಿಸಿದ ವಿನಾಶಕಾರಿ ಕಾಳ್ಗಿಚ್ಚಿನಿಂದ ಅಪಾರ ಸಾವು ನೋವು ಸಂಭವಿಸಿದೆ. ಆ.9 ರಂದು ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 53ಕ್ಕೆ ಏರಿಕೆ ಆಗಿದೆ. ಹವಾಯಿ ಗವರ್ನರ್ ಜೋಶ್ ಗ್ರೀನ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹವಾಯಿ ಅತಿದೊಡ್ಡ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಭಾರಿ ಕಾಳ್ಗಿಚ್ಚಿಗೆ ಈವರೆಗೆ 53 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಿಬ್ಬಂದಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರೆಣೆ ಮುಂದುವರೆಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಸಾವಿರಕ್ಕೂ ಅಧಿಕ ಕಟ್ಟಡಗಳು ಹಾನಿಗೀಡಾಗಿವೆ ಎಂದು ಗವರ್ನರ್ ಜೋಶ್ ಗ್ರೀನ್ ಕಳವಳ ವ್ಯಕ್ತಪಡಿಸಿದ್ದಾರೆ

  • The federal government isn't just sending prayers to the people of Hawai'i – but every asset they need.

    We're surging aid, resources, and personnel, and will help the state recover for as long as it takes. pic.twitter.com/Lj8cntL9JH

    — President Biden (@POTUS) August 11, 2023 " class="align-text-top noRightClick twitterSection" data=" ">

ಲಹೈನಾ ನಗರ ಬಿರುಗಾಳಿಯಂತೆ ಹಬ್ಬುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದೆ ಎಂದು ಮಾಯಿ ಮೇಯರ್ ರಿಚರ್ಡ್ ಬಿಸ್ಸೆನ್ ಗುರುವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಕಾಳ್ಗಿಚ್ಚಿನ ಅನಾಹುತವನ್ನ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಗ್ರೀನ್ 'ನಿಸ್ಸಂದೇಹವಾಗಿ, ಇದು ಲಹೈನಾ ನಗರ ಬಾಂಬ್ ದಾಳಿಗೆ ತುತ್ತಾಗಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು.

ದೇಣಿಗೆ ನೀಡುವಂತೆ ಮನವಿ: ವಿಪತ್ತು ಲೋಕೋಪಕಾರ ಕೇಂದ್ರದ ಉಪಾಧ್ಯಕ್ಷ ರೆಜಿನ್ ವೆಬ್‌ಸ್ಟರ್ ಈ ಬಗ್ಗೆ ಮಾತನಾಡಿ, ಅಗ್ನಿಶಾಮಕ ದಳ ಕಾಳ್ಗಿಚ್ಚನ್ನ ತಹ ಬದಿಗೆ ತರಲು ಇನ್ನೂ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಸಮುದಾಯದ ಜನರು ಹಾಗೂ ಸಂಸ್ಥೆಗಳು ದೇಣಿಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಈ ದುರಂತದಲ್ಲಿ ಸಂತ್ರಸ್ತರಾದವರಿಗೆ ಹಣಕಾಸು ನೆರವಿನ ಅಗತ್ಯ ಇದ್ದು, ದಾನಿಗಳು ಉದಾರ ದೇಣಿಗೆ ನೀಡಿ, ಇವರನ್ನೆಲ್ಲ ಕಾಪಾಡಬೇಕಿದ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

ಜನರು ಕ್ರೌಡ್‌ಫಂಡಿಂಗ್ ಸೈಟ್ 'GoFundMe' ಮೂಲಕ ದೇಣಿಗೆ ನೀಡಬಹುದು. ಇದು ಪ್ರಕೃತಿ ಅವಘಡದಲ್ಲಿ ಆಸ್ತಿಯನ್ನು ಕಳೆದುಕೊಂಡವರಿಗೆ ಅಥವಾ ಗಾಯಗೊಂಡವರಿಗೆ ಸಹಾಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಇನ್ನು ಐತಿಹಾಸಿಕ ಪಟ್ಟಣವಾದ ಲಹೈನಾದಲ್ಲಿನ ದೃಶ್ಯಗಳು ಮನಕಲಕುವಂತಿವೆ. ಹವಾಯಿಯ ತುರ್ತು ಪ್ರತಿಕ್ರಿಯೆ ಸಿಬ್ಬಂದಿ ಸಂತ್ರಸ್ತರನ್ನು ರಕ್ಷಿಸಲು ಹರಸಾಹನ ಪಡುತ್ತಿದ್ದಾರೆ. ಗುರುವಾರ ಈ ಪ್ರದೇಶದಲ್ಲಿನ ಒಂದು ರಸ್ತೆಯು ಸುಟ್ಟು ಕರಕಲಾದ ವಾಹನಗಳಿಂದ ತುಂಬಿರುವುದು ಕಂಡು ಬಂದಿತ್ತು.

"ದೊಡ್ಡ ವಿಪತ್ತು": ಅಧ್ಯಕ್ಷ ಜೋ ಬೈಡನ್​ ಜೋಶ್ ಗ್ರೀನ್ ಅವರೊಂದಿಗೆ ಕಾಳ್ಗಿಚ್ಚಿನ ಬಗ್ಗೆ ಫೋನ್ ಮೂಲಕ ಮಾತನಾಡಿದರು. ಹವಾಯಿ ಕಾಳ್ಗಿಚ್ಚನ್ನು "ದೊಡ್ಡ ವಿಪತ್ತು" ಎಂದು ಘೋಷಿಸಿದರು. ಕಳೆದುಕೊಂಡ ಅಮೂಲ್ಯ ಜೀವಗಳು ಮತ್ತು ಭೂಮಿ ನಾಶವಾದ ಬಗ್ಗೆ ಅವರು ಸಂತಾಪ ಸೂಚಿಸಿದರು. ಪ್ರೀತಿಪಾತ್ರರನ್ನು ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಫೆಡರಲ್ ವಿಪತ್ತು ಸಹಾಯ ನೀಡುವ ವಾಗ್ದಾನ ಮಾಡಿದರು.

ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ ಮಾಯಿಯಲ್ಲಿ ತುರ್ತು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ದ್ವೀಪದಲ್ಲಿ ಲಭ್ಯವಿರುವ ಎಲ್ಲಾ ಕೋಸ್ಟ್ ಗಾರ್ಡ್ ಮತ್ತು ಏರ್ ಫೋರ್ಸ್ ಸಿಬ್ಬಂದಿಗೆ ಹವಾಯಿ ನ್ಯಾಷನಲ್ ಗಾರ್ಡ್​ನೊಂದಿಗೆ ಕೆಲಸ ಮಾಡುವಂತೆ ಬೈಡನ್ ಇದೇ ವೇಳೆ​ ಆದೇಶಿಸಿದರು. ನಮ್ಮ ಪ್ರಾರ್ಥನೆಗಳು ಹವಾಯಿಯ ಜನರೊಂದಿಗೆ ಇವೆ. ನಮ್ಮ ಪ್ರಾರ್ಥನೆ ಮಾತ್ರವಲ್ಲ, ನಮ್ಮಲ್ಲಿರುವ ಪ್ರತಿಯೊಂದು ಸೌಲಭ್ಯವು ಅವರಿಗೆ ಲಭ್ಯವಾಗಲಿದೆ ಎಂದರು.

ಕಾಳ್ಗಿಚ್ಚು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಆದರೆ, ಈವರೆಗೆ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ಹವಾಯಿ ತುರ್ತು ನಿರ್ವಹಣಾ ವಕ್ತಾರ ಆಡಮ್ ವೈಂಟ್ರಬ್ ಹೇಳಿದ್ದಾರೆ. ನಾವು ಇನ್ನೂ ಜೀವ ಸಂರಕ್ಷಣಾ ಕ್ರಮದಲ್ಲಿದ್ದೇವೆ. ಹುಡುಕಾಟ ಮತ್ತು ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಿದೆ ಎಂದರು.

ಮಾರಕ ನೈಸರ್ಗಿಕ ವಿಪತ್ತು: ಚಂಡಮಾರುತದ ಭೀಕರ ಗಾಳಿಯಿಂದ ಈ ವಾರ ಮಾಯಿಯ ಭಾಗಗಳಲ್ಲಿ ಕಾಳ್ಗಿಚ್ಚು ವ್ಯಾಪಕವಾಗಿ ಹರಡಿದೆ. ಇದು ವ್ಯಾಪಕವಾಗಿ ಹರಡಿ 53 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ. ಸಂತ್ರಸ್ತರ ನೆರವಿಗಾಗಿ ರಾಜ್ಯಪಾಲರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಹವಾಯಿಯ ನಿವಾಸಿಗಳು ಲಹೈನಾ ಮತ್ತು ಮಾಯಿ ನಿವಾಸಿಗಳಿಗೆ ಎಲ್ಲಾ ಭಾವನಾತ್ಮಕ ಮತ್ತು ಆರ್ಥಿಕ ಬೆಂಬಲ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗ್ರೀಸ್​ ದೇಶದ 82 ಪ್ರದೇಶಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.