ETV Bharat / international

8 ಜನರನ್ನು ಕೊಂದ ಅಪರಾಧಿಗೆ 10 ಜೀವಾವಧಿಸಹಿತ 260 ವರ್ಷ ಜೈಲು ಶಿಕ್ಷೆ!

ಟ್ರಕ್​ನಿಂದ ಗುದ್ದಿ ಬೈಕ್​ ಸವಾರರನ್ನು ಭೀಕರವಾಗಿ ಹತ್ಯೆಗೈದಿದ್ದ ಇಸ್ಲಾಮಿಕ್​ ಭಯೋತ್ಪದಕನಿಗೆ ಯುಎಸ್​ ನ್ಯಾಯಾಲಯ 260 ವರ್ಷ ಜೈಲು ಸಜೆ ವಿಧಿಸಿದೆ.

ಇಸ್ಲಾಮಿಕ್​ ಭಯೋತ್ಪಾದಕನಿಗೆ 260 ವರ್ಷ ಜೈಲು ಶಿಕ್ಷೆ

author img

By

Published : May 18, 2023, 9:44 AM IST

ನ್ಯೂಯಾರ್ಕ್: 2017ರಲ್ಲಿ ಹ್ಯಾಲೋವೀನ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ನಡೆದ ಭಯೋತ್ಪಾದಕ ಟ್ರಕ್ ದಾಳಿಯಲ್ಲಿ 8 ಮಂದಿ ಬೈಕ್​ ಸಂಚಾರಿಗಳನ್ನು ಕೊಂದಿದ್ದ ಸೈಫುಲ್ಲೋ ಸೈಪೋವ್​ ಎಂಬ ಅಪರಾಧಿಗೆ ಯುಎಸ್​ ಜಿಲ್ಲಾ ನ್ಯಾಯಾಲಯ 10 ಜೀವವಾಧಿ ಶಿಕ್ಷೆ ಸೇರಿದಂತೆ ಹೆಚ್ಚುವರಿಯಾಗಿ 260 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೈಕ್​ ಸಂಚಾರ ಮಾರ್ಗದಲ್ಲಿ ಚಲಿಸುತ್ತಿದ್ದ ಸವಾರರನ್ನು ಸೈಫುಲ್ಲೋ ಟ್ರಕ್‌ನಿಂದ ಅಪಘಾತ ಮಾಡಿ ಕೊಂದು ಹಾಕಿದ್ದ. ಇತರೆ 18 ಜನರನ್ನು ತೀವ್ರವಾಗಿ ಗಾಯಗೊಳಿಸಿದ್ದ. ಬುಧವಾರ ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾ.ವೆರ್ನಾನ್ ಎಸ್.ಬ್ರೋಡೆರಿಕ್ ಅವರಿದ್ದ ನ್ಯಾಯಪೀಠ ಅಪರಾಧಿಗೆ ಏಕಕಾಲಕ್ಕೆ ಅನ್ವಯಿಸುವಂತೆ ಭಾರಿ ಪ್ರಮಾಣದ ಶಿಕ್ಷೆ ವಿಧಿಸಿತು.

ಶಿಕ್ಷೆಗೆ ಮೊದಲು ಸೈಪೋವ್ ಇಸ್ಲಾಂನ ಇತಿಹಾಸದ ಬಗ್ಗೆ ಭಾಷಾಂತರಕಾರರ ಮೂಲಕ ಉಜ್ಬೇಕ್ ಭಾಷೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿ, ಇಸ್ಲಾಂನಲ್ಲಿ ನಂಬಿಕೆ ಇರುವವರು ಮತ್ತು ಅವರ ಹರಿಸುವ ರಕ್ತ, ಕಣ್ಣೀರಿಗೆ ಹೋಲಿಸಿದರೆ ಈ ಸಂತ್ರಸ್ತರ ಕಣ್ಣೀರು ಚಿಕ್ಕದು ಎಂದು ಹೇಳಿ ತನ್ನ ಅಪರಾಧವನ್ನು ಸಮರ್ಥಿಸಿಕೊಂಡಿದ್ದಾನೆ. ಈ ವೇಳೆ ಯಾವುದೇ ಪಶ್ಚಾತ್ತಾಪದ ಮಾತುಗಳನ್ನು ಆಡಲಿಲ್ಲ. ಅಪರಾಧಿಯ ನಡವಳಿಕೆ ಅತ್ಯಂತ ಕೆಟ್ಟದ್ದಾಗಿದೆ. ಸೈಫುಲ್ಲೋ ಸೈಪೋವ್​ ಪಶ್ಚಾತ್ತಾಪವಿಲ್ಲದ ಸ್ವಭಾವ ಹೊಂದಿದ್ದಾನೆ ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು.

ಸೈಫುಲ್ಲೋ ಸೈಪೋವ್​ಗೆ ಮರಣದಂಡನೆ ವಿಧಿಸಲು ಕುಟುಂಬಸ್ಥರ ಪರ ವಕೀಲರು ಒತ್ತಾಯಿಸಿದ್ದರು. ಆದರೆ ಇದನ್ನು ನ್ಯಾಯಾಧೀಶರು ತಿರಸ್ಕರಿಸಿ ವಿಚಾರಣೆ ಮುಂದೂಡಿದ್ದರು. ನಿನ್ನೆ ನಡೆದ ವಿಚಾರಣೆಯಲ್ಲಿ ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಅಪರಾಧಿಗೆ ತಲಾ ಒಬ್ಬರ ಸಾವಿನಂತೆ 10 ಜೀವಾವಧಿ ಶಿಕ್ಷೆ ಮತ್ತು 260 ವರ್ಷಗಳ ಜೈಲು ಶಿಕ್ಷೆ ಎರಡನ್ನೂ ಏಕಕಾಲಕ್ಕೆ ವಿಧಿಸಬೇಕು. ಇದರಿಂದ ಈ ರೀತಿಯ ಮನಸ್ಥಿತಿ ಹೊಂದಿರುವ ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನಿಸಿದಂತಾಗುತ್ತದೆ ಎಂದು ನ್ಯಾಯಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ಅಮೆರಿಕದ ಒಕ್ಲಹೋಮ್​ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ತನಿಖೆ ಚುರುಕು

ಇದಾದ ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬದುಕುಳಿದವರು ಮತ್ತು ಸಂತ್ರಸ್ತ ಕುಟುಂಬ ಸದಸ್ಯರು, ಘಟನೆ ತಮ್ಮ ಜೀವನವನ್ನು ಹೇಗೆ ಬದಲಿಸಿತು ಎಂಬುದರ ಕುರಿತು ನ್ಯಾಯಾ ಪೀಠಕ್ಕೆ ವಿವರಿಸಿದರು. ಸಂತ್ರಸ್ತರು ಮತ್ತು ಗಾಯಾಳುಗಳ ಮಾತು ಆಲಿಸಿದ ನ್ಯಾಯಪೀಠ 35 ವರ್ಷದ ಉಜ್ಬೇಕಿಸ್ತಾನ್ ಪ್ರಜೆ ಸೈಪೋವ್​ಗೆ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಇದನ್ನೂ ಓದಿ: ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಭಾರತ ಹಸ್ತಾಂತರಕ್ಕೆ ಅಮೆರಿಕ​ ಕೋರ್ಟ್‌ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.