ETV Bharat / international

ಅರ್ಜೆಂಟೀನಾ ಉಪಾಧ್ಯಕ್ಷೆ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರು

author img

By

Published : Sep 2, 2022, 1:02 PM IST

ಅರ್ಜೆಂಟೀನಾ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಅವರ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ಯತ್ನ ನಡೆಸಿದ್ದಾನೆ.

Man Tried To Shoot Argentina's Vice President

ಬ್ಯೂನಸ್ ಐರಿಸ್(ಅರ್ಜೆಂಟೀನಾ): ಕಳೆದ ಜುಲೈ ತಿಂಗಳಲ್ಲಿ ಜಪಾನ್​​ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಅರ್ಜೆಂಟೀನಾದ ಉಪಾಧ್ಯಕ್ಷರ ಮೇಲೂ ದಾಳಿ​ ನಡೆದಿದೆ. ಆದರೆ, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಅರ್ಜೆಂಟೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಘಟನೆ ನಡೆದಿದೆ.

  • ‼️JUST IN‼️

    🇧🇷❌🇦🇷Footage from another angle shows the moment when a Brazilian National named Fernando Andrés Sabag Montiel pulled a gun and tried to assassinate Argentina's left-wing Vice-President Cristina Kirchner

    — The gun notoriously failed on the last moment pic.twitter.com/JgmUlNuP2Q

    — AZ 🛰🌏🌍🌎 (@AZmilitary1) September 2, 2022 " class="align-text-top noRightClick twitterSection" data=" ">

ಅರ್ಜೆಂಟೀನಾದ ಉಪಾಧ್ಯಕ್ಷ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರ ಮೇಲೆ ವ್ಯಕ್ತಿಯೋರ್ವ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಕ್ರಿಸ್ಟಿನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಉಪಾಧ್ಯಕ್ಷರ ತಲೆಗೆ ಪಿಸ್ತೂಲ್​​ ಇಟ್ಟಿರುವ ವ್ಯಕ್ತಿ ಟ್ರಿಗರ್​​ ಎಳೆದಿದ್ದಾನೆ. ಆದರೆ, ಗುಂಡು ಹಾರಿಲ್ಲ ಎಂದು ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್​​​ ತಿಳಿಸಿದರು. ದೇಶ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಡೆದ ಅತ್ಯಂತ ಗಂಭೀರ ಘಟನೆ ಇದಾಗಿದೆ ಎಂದಿದ್ದಾರೆ.

ಫರ್ನಾಂಡೀಸ್ ಡಿ ಕಿರ್ಚ್ನರ್ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ಬೆಳಗ್ಗೆ ಅವರ ನಿವಾಸದೆದುರು ಘಟನೆ ನಡೆದಿದೆ. ಆರೋಪಿತ ವ್ಯಕ್ತಿ ಬ್ರೆಜಿಲ್​​ ಮೂಲದವನು ಎನ್ನಲಾಗ್ತಿದೆ. ಆತನ ಬಂಧನ ಮಾಡಲಾಗಿದೆ. ಫೆರ್ನಾಂಡಿಸ್ ಡಿ ಕಿರ್ಚ್ನರ್ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸೆನೆಟ್ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.