ನ್ಯೂಯಾರ್ಕ್: 2021ರಲ್ಲಿ ಐದು ವರ್ಷದ ಭಾರತೀಯ-ಅಮೆರಿಕನ್ ಮಗುವಿನ ಸಾವಿಗೆ ಕಾರಣಕರ್ತನಾದ 35 ವರ್ಷದ ವ್ಯಕ್ತಿಗೆ 100 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಲೂಸಿಯಾನದ ಕ್ಯಾಡೋ ಪ್ಯಾರಿಷ್‌ನ ನ್ಯಾಯಾಧೀಶರು ಆದೇಶಿಸಿದ್ದಾರೆ. ಮಾಯಾ ಪಟೇಲ್ ಎಂಬ ಬಾಲಕಿ ಸಾವನ್ನಪ್ಪಿದ್ದಳು. ಅಪರಾಧಿ ಜೋಸೆಫ್ ಲೀ ಸ್ಮಿತ್ ಇದೀಗ ಶಿಕ್ಷೆಗೆ ಗುರಿಯಾಗಿದ್ದಾನೆ.
ಮಾಯಾ ಪಟೇಲ್ 2021ರ ಮಾರ್ಚ್ ತಿಂಗಳಲ್ಲಿ ಶ್ರೆವ್‌ಪೋರ್ಟ್‌ನ ಮಾಂಕ್‌ಹೌಸ್ ಡ್ರೈವ್‌ನಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಜೋಸೆಫ್ ಲೀ ಸ್ಮಿತ್‌ನ ಬಂದೂಕಿನಿಂದ ಹಾರಿದ ಬುಲೆಟ್ ಗುರಿ ತಪ್ಪಿ ಬಾಲಕಿಗೆ ತಗುಲಿತ್ತು. ಮಯಾ ಪಟೇಲ್ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶ ಜಾನ್ ಡಿ. ಮೋಸ್ಲಿ ಜೂನಿಯರ್ ಅವರು ಸ್ಮಿತ್‌ಗೆ ವೈದ್ಯಕೀಯ ಪರೀಕ್ಷೆ, ಪೆರೋಲ್ ಅಥವಾ ಶಿಕ್ಷೆ ಕಡಿತವಿಲ್ಲದೆ 60 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದರು.
ಈ ವರ್ಷದ ಜನವರಿಯಲ್ಲಿ ನರಹತ್ಯೆಯ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲಸ್ಲಿ ಸ್ಮಿತ್‌ಗೆ ನ್ಯಾಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ 20 ವರ್ಷ ಮತ್ತು ಮಯಾ ಪಟೇಲ್ ಹತ್ಯೆಗೆ ಸಂಬಂಧಿಸಿದ ಪ್ರತ್ಯೇಕ ಅಪರಾಧಗಳಿಗಾಗಿ 20 ವರ್ಷಗಳ ಶಿಕ್ಷೆ ಸೇರಿ ಒಟ್ಟು 100 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಅಪರಾಧಿ ಪೆರೋಲ್ ಅಥವಾ ಶಿಕ್ಷೆಯ ಕಡಿತದ ಪ್ರಯೋಜನವಿಲ್ಲದೆ ಕಠಿಣ ಕೆಲಸದಲ್ಲಿ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮಾ. 20, 2021 ರಂದು, ವೆಸ್ಟ್ ಶ್ರೆವ್‌ಪೋರ್ಟ್‌ನಲ್ಲಿರುವ ಮಾಂಕ್‌ಹೌಸ್ ಡ್ರೈವ್‌ನ 4,900 ಬ್ಲಾಕ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಸ್ಮಿತ್ ಬೇರೊಬ್ಬ ವ್ಯಕ್ತಿಯೊಂದಿಗೆ ವಾಗ್ವಾದಕ್ಕಿಳಿದ್ದನು. ಆ ಸಮಯದಲ್ಲಿ ವಿಮಲ್ ಮತ್ತು ಸ್ನೇಹಲ್ ಪಟೇಲ್ ಅವರು ಮಗಳು ಮಾಯಾ ಮತ್ತು ಕಿರಿಯ ಸಹೋದರನೊಂದಿಗೆ ನೆಲ ಅಂತಸ್ತಿನ ಘಟಕದಲ್ಲಿ ವಾಸಿಸುತ್ತಿದ್ದರು. ವಾಗ್ವಾದದ ಸಮಯದಲ್ಲಿ, ಸ್ಮಿತ್ ಆ ವ್ಯಕ್ತಿಗೆ 9-ಎಂಎಂ ಕೈ ಬಂದೂಕಿನಿಂದ ಶೂಟ್ ಮಾಡಿದ್ದಾನೆ. ಆ ಬುಲೆಟ್ ಗುರಿ ತಪ್ಪಿ ಬಾಲಕಿಗೆ ತಗುಲಿದೆ. ಗಾಯಗೊಂಡ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಮಾಯಾ ಮಾ.23 ರಂದು ಕೊನೆಯುಸಿರೆಳೆದಿದ್ದಳು.
ಗುಂಡಿನ ದಾಳಿ, 9 ಮಂದಿ ಸಾವು: ಪ್ರತ್ಯೇಕ ಮೂರು ಗುಂಡಿನ ದಾಳಿ ಪ್ರಕರಣಗಳಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ಇತ್ತೀಚೆಗೆ ನಡೆದಿತ್ತು. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಕರಾವಳಿ ಪ್ರದೇಶದಲ್ಲಿರುವ ಅಣಬೆ ಫಾರ್ಮ್ ಮತ್ತು ಟ್ರಕ್ಕಿಂಗ್ ಘಟಕದಲ್ಲಿ ಮೊದಲೆರಡು ಘಟನೆಗಳು ನಡೆದಿವೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು. ಘಟನೆಗೆ ಕಾರಣನಾದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದರು. ಈ ಪೈಕಿ ನಾಲ್ವರು ಫಾರ್ಮ್‌ನಲ್ಲಿ ಹತ್ಯೆಯಾಗಿದ್ದು, ಇನ್ನು ಮೂವರು ಟ್ರಕ್ಕಿಂಗ್ ವ್ಯವಹಾರ ಮಾಡುವ ಹಾಫ್ ಮೂನ್ ಬೇ ಹೊರಭಾಗದ ಘಟಕದಲ್ಲಿ ಸಾವಿಗೀಡಾಗಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳು ಸೇರಿ 9 ಮಂದಿ ಸಾವು!