ETV Bharat / international

ವಿಶ್ವದಲ್ಲೇ ಮೊದಲ ಬಾರಿ ಅಮೆರಿಕದ ವ್ಯಕ್ತಿಗೆ ಯಶಸ್ವಿ ಕಣ್ಣು ಕಸಿ! - ಭಾಗಶಃ ಮುಖದ ಕಸಿ ಮಾಡಿದ ವೈದರು

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ವ್ಯಕ್ತಿಯೊಬ್ಬರಿಗೆ ನ್ಯೂಯಾರ್ಕ್​ನ ವೈದ್ಯರು ಯಶಸ್ವಿಯಾಗಿ ಕಣ್ಣಿನ ಹಾಗೂ ಭಾಗಶಃ ಮುಖದ ಕಸಿ ಮಾಡಿದ್ದಾರೆ.

eye transplant
ವಿಶ್ವದಲ್ಲೇ ಮೊದಲ ಬಾರಿ ಅಮೆರಿಕದ ವ್ಯಕ್ತಿಗೆ ಯಶಸ್ವಿಯಾಗಿ ಕಣ್ಣಿನ ಕಸಿ ಮಾಡಿದ ವೈದ್ಯರು..
author img

By PTI

Published : Nov 10, 2023, 3:36 PM IST

ವಾಷಿಂಗ್ಟನ್: ನ್ಯೂಯಾರ್ಕ್‌ನ ಶಸ್ತ್ರಚಿಕಿತ್ಸಕರು, ಅಮೆರಿಕದ ವ್ಯಕ್ತಿಯೊಬ್ಬರಿಗೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಸಂಪೂರ್ಣ ಕಣ್ಣಿನ ಕಸಿ ಮಾಡಿದ್ದಾರೆ. ಆ ವ್ಯಕ್ತಿಯು ಮತ್ತೆ ದೃಷ್ಟಿ ಪಡೆಯುತ್ತಾನೆ ಎಂಬ ಮಾಹಿತಿಯನ್ನು ವೈದ್ಯರು ಖಚಿತಪಡಿಸಿಲ್ಲ.

ಹೈ-ವೋಲ್ಟೇಜ್ ವಿದ್ಯುತ್ ಅಪಘಾತದಿಂದ ಬದುಕುಳಿದ ಆರನ್ ಜೇಮ್ಸ್ ಅವರಿಗೆ 21 ಗಂಟೆಗಳ ಕಣ್ಣಿನ ಕಸಿ ಮಾಡುವ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ. ಈ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯ ಮುಖದ ಅರ್ಧದಷ್ಟು ಭಾಗ ಬದಲಾವಣೆಯಾಗಿದೆ. ಶಸ್ತ್ರಚಿಕಿತ್ಸಕರು ಕಾರ್ನಿಯಾಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಈ ಕಾರ್ಯದಿಂದ ಕಣ್ಣು ಕಾಣಿಸದೆ ಇರುವ ಲಕ್ಷಾಂತರ ಜನರಿಗೆ ದೃಷ್ಟಿಯನ್ನು ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ವೈದ್ಯ ತಿಳಿಸಿದ್ದಾರೆ.

ಅಪಘಾತಕ್ಕೆ ಒಳಗಾಗಿ ಕಣ್ಣು ಕಳೆದುಕೊಂಡಿದ್ದ ಜೇಮ್ಸ್: ಅರ್ಕಾನ್ಸಾಸ್‌ನ ಹೈ-ವೋಲ್ಟೇಜ್ ಯುಟಿಲಿಟಿ ಲೈನ್​ಮೆನ್​ ಆಗಿ ಕೆಲಸ ಮಾಡುತ್ತಿದ್ದ ಜೇಮ್ಸ್, 2021ರಲ್ಲಿ ಆಕಸ್ಮಿಕವಾಗಿ 7,200 ವೋಲ್ಟ್ ವಿದ್ಯುತ್​ ತಂತಿಯನ್ನು ಸ್ಪರ್ಶಿಸಿದಾಗ ಅವರ ಮುಖದ ಹೆಚ್ಚಿನ ಭಾಗವು ಸುಟ್ಟು ಹೋಗಿತ್ತು. ಈ ವರ್ಷ ಮೇ 27 ರಂದು, ಅವರು ಕಣ್ಣಿನ ಕಸಿ ಜೊತೆಗೆ ಅಪರೂಪದ ಭಾಗಶಃ ಮುಖದ ಕಸಿ ಮಾಡಿಸಿಕೊಂಡಿದ್ದಾರೆ. ಕಸಿ ಮಾಡುವ ಕಾರ್ಯದಲ್ಲಿ 140ಕ್ಕೂ ಹೆಚ್ಚು ಆರೋಗ್ಯ ಕ್ಷೇತ್ರದ ವೃತ್ತಿಪರರು ತೊಡಗಿಸಿಕೊಂಡಿದ್ದರು.

ತುಂಬಾ ಕಠಿಣವಾದ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಎನ್​ವೈಯು ಲ್ಯಾಂಗೋನ್ ಹೆಲ್ತ್‌ನ ಶಸ್ತ್ರಚಿಕಿತ್ಸಕರು ಮಾತನಾಡಿ, "46 ವರ್ಷದ ಜೇಮ್ಸ್ ಅವರು ಡ್ಯುಯಲ್ ಟ್ರಾನ್ಸ್‌ಪ್ಲಾಂಟ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಸಿ ಮಾಡಲಾಗಿರುವ ಕಣ್ಣು ಗಮನಾರ್ಹವಾಗಿ ಆರೋಗ್ಯಕರವಾಗಿ ಕಾಣುತ್ತದೆ. ಜೊತೆಗೆ ಅವರು ಬಲಗಣ್ಣು ಇನ್ನೂ ಕೆಲಸ ಮಾಡುತ್ತದೆ'' ಎಂದು ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಡಾ.ಎಡ್ವರ್ಡೊ ರೋಡ್ರಿಗಸ್ ಮಾಹಿತಿ: "ನಾವು ಮೊದಲ ಬಾರಿ ಯಶಸ್ವಿಯಾಗಿ ಸಂಪೂರ್ಣ ಕಣ್ಣಿನ ಹಾಗೂ ಭಾಗಶಃ ಮುಖ ಕಸಿ ಮಾಡುವ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ ಎಂಬುದು ಒಂದು ಅದ್ಭುತವಾದ ಸಾಧನೆ. ನಾವು ಒಂದು ಪ್ರಮುಖ ಹೆಜ್ಜೆ ಮುಂದಿಟ್ಟಿದ್ದೇವೆ. ದೃಷ್ಟಿಯನ್ನು ಪುನಃಸ್ಥಾಪಿಸಲು ಮುಂದಿನ ಅಧ್ಯಾಯಕ್ಕೆ ದಾರಿ ಮಾಡಿಕೊಟ್ಟಿದ್ದೇವೆ ಎಂದು ತಂಡದ ಪ್ರಮುಖ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಡಾ. ಎಡ್ವರ್ಡೊ ರೋಡ್ರಿಗಸ್ ಹೇಳಿದರು.

ಆರನ್ ಜೇಮ್ಸ್ ಅವರ (ಎಡ) ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ ಶಸ್ತ್ರಚಿಕಿತ್ಸಕರಲ್ಲಿ ಡಾ.ಎಡ್ವರ್ಡೊ ರೊಡ್ರಿಗಸ್ ಕೂಡ ಒಬ್ಬರು. "ನಾವು ದೃಷ್ಟಿಯನ್ನು ಪುನಃಸ್ಥಾಪಿಸಲು ಹೋಗುತ್ತೇವೆ ಎಂದು ನಾವು ಹೇಳಿಕೊಳ್ಳುತ್ತಿಲ್ಲ. ಆದರೆ, ದೃಷ್ಟಿ ಮರಳಿಸಲು ಮಾಡಿದ ಪ್ರಯತ್ನದಲ್ಲಿ ನಾವು ಒಂದು ಹೆಜ್ಜೆ ಹತ್ತಿರವಾಗಿದ್ದೇವೆ" ಎಂದು ಡಾ.ರೊಡ್ರಿಗಸ್ ವಿಶ್ವಾಸ ವ್ಯಕ್ತಪಡಿಸಿದರು.

ಮೆದುಳಿಗೆ ಚಿತ್ರಗಳನ್ನು ಕಳುಹಿಸುವ ಕಣ್ಣಿನ ಭಾಗವಾದ ರೆಟಿನಾಕ್ಕೆ ನೇರ ರಕ್ತದ ಹರಿವು ಇದೆ ಎಂದು ವೈದ್ಯರು ಹೇಳಿದ್ದಾರೆ. ಜೇಮ್ಸ್ ತನ್ನ ಹೊಸ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆಯುತ್ತಾನೆ ಎಂಬುದನ್ನು ಮಾತ್ರ ಖಚಿತಪಡಿಸಿಲ್ಲ. ಆದ್ರೆ, ಆ ವ್ಯಕ್ತಿಗೆ ದೃಷ್ಟಿ ಮರಳಿ ಬರುವ ಸಾಧ್ಯತೆಯನ್ನೂ ಕೂಡ ತಳ್ಳಿಹಾಕಿಲ್ಲ.

ಮುಖ ಕಸಿ ಮಾಡಿಸಿಕೊಂಡ 19ನೇ ವ್ಯಕ್ತಿ ಜೇಮ್ಸ್: "ಪ್ರಥಮ ಬಾರಿ ಕಣ್ಣಿನ ಕಸಿ ಮಾಡಿರುವುದು ವೈದ್ಯರ ಅದ್ಭುತ ಸಾಧನೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾರಿ ಪ್ರಾರಂಭಕ್ಕೆ ಪೂರಕವಾಗಿದೆ ಎಂದು ನಂಬುತ್ತೇನೆ'' ಎಂದ ಅವರು, ನಾನು ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತೇನೆ'' ಎಂದು ಜೇಮ್ಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಜೇಮ್ಸ್ ಅವರು ಅಮೆರಿಕದಲ್ಲಿ ಮುಖ ಕಸಿ ಮಾಡಿಸಿಕೊಂಡ 19ನೇ ವ್ಯಕ್ತಿಯಾಗಿದ್ದಾರೆ.

ಪತ್ನಿ ಮೀಗನ್ ಜೇಮ್ಸ್ ಸಂತಸ: ಪತ್ನಿ ಮೀಗನ್ ಜೇಮ್ಸ್ ಪ್ರತಿಕ್ರಿಯಿಸಿ, "ಶಸ್ತ್ರಚಿಕಿತ್ಸೆಯ ಪೂರ್ಣಗೊಂಡ ಜೇಮ್ಸ್​ನ ನೋಡಿದ ಬಳಿಕ ನನ್ನಲ್ಲಿ ಅಚ್ಚರಿ ಹಾಗೂ ತುಂಬಾ ಸಂತೋಷದ ಭಾವನೆ ಮೂಡಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ''ಅಪಘಾತದ ನಂತರ, ಜೇಮ್ಸ್ ಅನುಭವಿಸುತ್ತಿದ್ದ ನೋವಿನಿಂದಾಗಿ ಅವರ ಎಡಗಣ್ಣನ್ನು ತೆಗೆದುಹಾಕಬೇಕಾಯಿತು. ಅವರು ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ನಂತರ ಜೇಮ್ಸ್ ಮಾಡಿಸಿಕೊಂಡ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಯಿಂದ, ಅವರ ಜೀವನವನ್ನು ಬದಲಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾಗಿಸಿದ ದಾನಿ ಮತ್ತು ಅವರ ಕುಟುಂಬಕ್ಕೆ ಪದಗಳಿಗೂ ಮೀರಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಇದನ್ನೂ ಓದಿ: ಯುದ್ಧದ ಪರಿಣಾಮ: ತೀವ್ರ ಬಡತನದ ಸುಳಿಯಲ್ಲಿ ಪ್ಯಾಲೆಸ್ಟೈನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.