ಫ್ರಾನ್ಸ್: ಪೊಲೀಸರ ಗುಂಡಿಗೆ ಸಿಲುಕಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಇಡೀ ಫ್ರಾನ್ಸ್ ದೇಶದಲ್ಲೇ ಸಂಚಲನ ಮೂಡಿಸಿದೆ. ಕಳೆದ ಎರಡು ದಿನಗಳಿಂದ ದೇಶದ ವಿವಿಧೆಡೆ ಉದ್ವಿಗ್ನ ಸ್ಥಿತಿ ಇದೆ. ಪ್ಯಾರಿಸ್‌ನ ಹೊರವಲಯದಲ್ಲಿರುವ ರಕ್ಷಣಾ ಜಿಲ್ಲೆಯ ನಾಂಟೆರ್ರೆ ಎಂಬಲ್ಲಿ ಗುರುವಾರ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ಈ ವೇಳೆ ಪ್ರತಿಭಟನಾಕಾರರು ಅಲ್ಲಿದ್ದ ಪರಿಕರಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಗಾಜಿನ ಬಾಟಲಿ ಹಾಗೂ ಕಲ್ಲುಗಳನ್ನು ಭದ್ರತಾ ಪಡೆಗಳತ್ತ ತೂರಿದ್ದಾರೆ.
ಅದೇ ಸಮಯದಲ್ಲಿ ಭದ್ರತಾ ಪಡೆಗಳು, ಕಟ್ಟಡವೊಂದರ ಸಮೀಪ ಆಕ್ರೋಶಗೊಂಡ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಭಾರಿ ಕಾದಾಟದ ಮಧ್ಯದಲ್ಲಿ ಅಲ್ಲೊಬ್ಬ ವ್ಯಕ್ತಿ ರಸ್ತೆಯ ಕಟ್ಟೆಯ ಮೇಲೆ ಕುಳಿತು ಸ್ಯಾಂಡ್‌ವಿಚ್ ತಿನ್ನುತ್ತಿದ್ದ. ರಣರಂಗವಾಗಿ ಬದಲಾದ ಪ್ರದೇಶದಲ್ಲಿ ತನಗೇನಾದರೂ ಘಾಸಿಯಾಗಬಹುದೆಂಬ ಕಿಂಚಿತ್ ಭಯವೂ ಅವನಿಗಿರಲಿಲ್ಲ. ಗಲಭೆಕೋರರು ಕೂದಲೆಲೆ ದೂರದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಣುತ್ತದೆ. ಹಿಂಸಾಚಾರದ ನಡುವೆಯೇ ನಿರಾಳವಾಗಿದ್ದ ಆತ ಸ್ಯಾಂಡ್‌ವಿಚ್ ತಿನ್ನುತ್ತಿರುವುದನ್ನು ಹತ್ತಿರದ ಕಟ್ಟಡದಿಂದ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
-
Be that Man- Man continues to eat his sandwich as rioters and police clash in Nanterre, France.pic.twitter.com/vHrmLiAAmK
— Prof.N John Camm (@njohncamm) June 30, 2023 " class="align-text-top noRightClick twitterSection" data="
">Be that Man- Man continues to eat his sandwich as rioters and police clash in Nanterre, France.pic.twitter.com/vHrmLiAAmK
— Prof.N John Camm (@njohncamm) June 30, 2023Be that Man- Man continues to eat his sandwich as rioters and police clash in Nanterre, France.pic.twitter.com/vHrmLiAAmK
— Prof.N John Camm (@njohncamm) June 30, 2023
ಮುಂದುವರೆದ ಗಲಭೆಗಳು..: ಪೊಲೀಸ್ ಗುಂಡಿನ ದಾಳಿಯಲ್ಲಿ ನಹೆಲ್ ಎಂಬ ಅಲ್ಜೀರಿಯಾ ದೇಶದ ಬಾಲಕನ ಮರಣಾ ನಂತರ ಗಲಭೆಗಳು ಮುಂದುವರೆದಿವೆ. ಮಂಗಳವಾರ ರಾತ್ರಿ ಪ್ಯಾರಿಸ್‌ನ ಉಪನಗರಗಳಲ್ಲಿ ನಡೆದ ಸಂಘರ್ಷ ಗುರುವಾರ ದೇಶಾದ್ಯಂತ ವ್ಯಾಪಿಸಿದೆ. ಪ್ರತಿಭಟನಾಕಾರರು ಅನೇಕ ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಗಳಲ್ಲಿ ಭಾಗವಹಿಸಿದ ಬಹುತೇಕರು ಯುವಕರು. ಇದರ ಪರಿಣಾಮವಾಗಿ ಪ್ಯಾರಿಸ್‌ನ ಉಪನಗರ ಕ್ಲಾಮಾರ್ಟ್ನಲ್ಲಿ ಗುರುವಾರ ರಾತ್ರಿ ಕರ್ಫ್ಯೂ ಹೇರಲಾಗಿತ್ತು. ಮತ್ತೊಂದೆಡೆ, ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆತನ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾಕಾರರು ಬುಧವಾರ ರಾತ್ರಿ ದೇಶದ ವಿವಿಧ ಭಾಗಗಳಲ್ಲಿ ಶಾಲೆಗಳು, ಪೊಲೀಸ್ ಠಾಣೆಗಳು, ಟೌನ್ ಹಾಲ್‌ಗಳು ಮತ್ತು ಇತರ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 100 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಪ್ಯಾರಿಸ್ ಪ್ರದೇಶವೊಂದರಲ್ಲೇ 40,000 ಪೊಲೀಸರನ್ನು ನಿಯೋಜಿಸಲಾಗಿತ್ತು.
ಕ್ಷಮೆ ಯಾಚಿಸಿದ ಪೊಲೀಸ್ ಅಧಿಕಾರಿ: ನಹೀಲ್‌ನನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ ಮೃತನ ಕುಟುಂಬದ ಕ್ಷಮೆ ಯಾಚಿಸಿದ್ದಾರೆ. ಅಧಿಕಾರಿಯ ಪರವಾಗಿ ಮಾತನಾಡಿದ ವಕೀಲರು, ಜನರನ್ನು ಕೊಲ್ಲುವುದು ಅವರ ಉದ್ದೇಶವಾಗಿರಲಿಲ್ಲ ಎಂದು ಹೇಳಿದರು. ಗಲಭೆ ನಿಯಂತ್ರಿಸಲು ಈವರೆಗೆ 400 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಇಡೀ ಪೊಲೀಸ್ ಇಲಾಖೆಯನ್ನು ದೂಷಿಸುವುದಿಲ್ಲ ಎಂದು ನಹೆಲ್ ತಾಯಿ ಹೇಳಿದ್ದಾರೆ.
ಬೆಂಕಿ ಉರಿಯುತ್ತಿದ್ದಂತೆ ಊಟ ಮಾಡಿದ ಜನರ ಗುಂಪು: ಈ ಹಿಂದೆಯೂ ಫ್ರೆಂಚ್ ಅಧ್ಯಕ್ಷರು ತಮ್ಮ ಅತಿದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸಿದ್ದರು. ಎಎಫ್‌ಪಿ ವರದಿಯ ಪ್ರಕಾರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸರ್ಕಾರವು ವಿವಾದಾತ್ಮಕ ಪಿಂಚಣಿ ಸುಧಾರಣೆಯನ್ನು ಸಂಸತ್ತಿನಲ್ಲಿ ಮತದಾನವಿಲ್ಲದೆಯೇ ಜಾರಿಗೆ ತಂದಿತ್ತು. ಇದರ ಪರಿಣಾಮದಿಂದ ಪ್ಯಾರಿಸ್ ಮತ್ತು ಇತರ ನಗರಗಳಲ್ಲಿ ಕೋಪಗೊಂಡ ಪ್ರತಿಭಟನೆಗಳು ಹಾಗೂ ಶಾಸಕಾಂಗದಲ್ಲಿ ಕೋಲಾಹಲವೇ ಉಂಟಾಗಿತ್ತು. ಪ್ಯಾರಿಸ್‌ನಲ್ಲಿ ಪಿಂಚಣಿ ಸುಧಾರಣೆ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಅನೇಕ ಕಡೆಗಳಲ್ಲಿ ಬೆಂಕಿ ಹೊತ್ತಿಕೊಂಡಾಗಲೂ ಸಹ ಫ್ರೆಂಚ್ ರೆಸ್ಟೋರೆಂಟ್‌ನೊಳಗೆ, ಯಾವುದೇ ಚಿಂತೆಯಿಲ್ಲದೇ ಜನರು ಗುಂಪಾಗಿ ಊಟ ಮಾಡುವ ದೃಶ್ಯ ಕಂಡುಬಂದಿತ್ತು. ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಬಾಲಕನನ್ನು ಗುಂಡಿಕ್ಕಿ ಕೊಂದ ಪೊಲೀಸರು.. ಭುಗಿಲೆದ್ದ ಆಕ್ರೋಶ, ನೂರಾರು ಕಾರುಗಳಿಗೆ ಬೆಂಕಿ, ಪಟಾಕಿಯಿಂದ ದಾಳಿ