ETV Bharat / international

ರಾಜತಾಂತ್ರಿಕ ಬಿಕ್ಕಟ್ಟು: ಚೀನಾ ಪ್ರವಾಸದ ಬಳಿಕ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಭೇಟಿ ಸಾಧ್ಯತೆ - ಮೊಹಮ್ಮದ್ ಮುಯಿಝು

Muizzu Eyes India Visit After China: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ಚೀನಾ ಪ್ರವಾಸದ ನಂತರ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

Maldives seeks truce, Muizzu eyes India visit after China
ಚೀನಾ ಪ್ರವಾಸದ ಬಳಿಕ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಭೇಟಿ
author img

By ETV Bharat Karnataka Team

Published : Jan 9, 2024, 8:35 PM IST

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಇದರ ಮಧ್ಯೆಯೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಚೀನಾ ಪ್ರವಾಸದ ನಂತರ ಈ ತಿಂಗಳ ಕೊನೆಯಲ್ಲಿ ದೆಹಲಿಗೆ ಭೇಟಿ ನೀಡುವ ಕುರಿತು ಅಧ್ಯಕ್ಷರ ಕಚೇರಿ ಪ್ರಸ್ತಾಪಿಸಿದೆ.

ಈ ಬೆಳವಣಿಗೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಹ್ವಾನದ ಮೇರೆಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಪ್ರಸ್ತುತ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ದ್ವೀಪ ರಾಷ್ಟ್ರವು ತನ್ನ ನಿಕಟ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗಲೇ ಅಧ್ಯಕ್ಷರ ಈ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.

2023ರ ನವೆಂಬರ್​​ ಮಾಲ್ಡೀವ್ಸ್ ಅಧ್ಯಕ್ಷರಾಗಿ ಮುಯಿಝು ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ಚುನಾವಣಾ ಪ್ರಚಾರದಲ್ಲಿ ಅವರು, ತಮ್ಮ ದ್ವೀಪ ರಾಷ್ಟ್ರದಲ್ಲಿರುವ ಸುಮಾರು 75 ಭಾರತೀಯ ಸೇನಾ ಸಿಬ್ಬಂದಿಯ ಸಣ್ಣ ತುಕಡಿ ತೆಗೆದುಹಾಕುವುದಾಗಿ ಮತ್ತು ಮಾಲ್ಡೀವ್ಸ್‌ನ ಭಾರತ 'ಮೊದಲು' ಎಂಬ ನೀತಿಯನ್ನು ಬದಲಾಯಿಸುವುದಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಫ್ರಾನ್ಸ್‌ ಪ್ರಧಾನಿಯಾಗಿ 'ಸಲಿಂಗಕಾಮಿ' ಗೇಬ್ರಿಯಲ್ ಅಟ್ಟಲ್ ಆಯ್ಕೆ

ಅದರಲ್ಲೂ, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ನಂತರ ಭಾರತ ಮತ್ತು ಪ್ರಧಾನಿ ವಿರುದ್ಧ ಕೆಲವು ಮಾಲ್ಡೀವ್ಸ್ ರಾಜಕಾರಣಿಗಳು ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ತಿರುಗಿದೆ. ಪ್ರಧಾನಿ ಮೋದಿಯವರ ಭೇಟಿಯು ಮಾಲ್ಡೀವ್ಸ್‌ಗೆ ಹೋಗುವ ವೆಚ್ಚದಲ್ಲೇ ಲಕ್ಷದ್ವೀಪಕ್ಕೆ ಜನತೆ ಭೇಟಿ ನೀಡಬಹುದು ಎಂಬ ಸಂದೇಶದೊಂದಿಗೆ ಅಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಮತ್ತೊಂದು ಗಮನಾರ್ಹ ಅಂಶ ಎಂದರೆ, ಇತ್ತೀಚಿನ ದಿನಗಳಲ್ಲಿ ಮುಯಿಝು ಅವರ ಪೂರ್ವಜರು ಭಾರತಕ್ಕೆ ಭೇಟಿ ನೀಡಿದ್ದರು. ಇದನ್ನು ದ್ವಿಪಕ್ಷೀಯ ಸಂಬಂಧಗಳು ಮತ್ತು ಭಾರತಕ್ಕೆ ಮಾಲ್ಡೀವ್ಸ್‌ನ ನಿಕಟತೆ ಪರಿಗಣಿಸಿ ಎಂದು ಭಾವಿಸಲಾಗಿತ್ತು. ಇದಾದ ನಂತರ ಚೀನಾವು ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ದ್ವೀಪ ರಾಷ್ಟ್ರದಲ್ಲಿ ತನ್ನ ಪ್ರಭಾವ ವಿಸ್ತರಿಸಿದೆ.

ಇದರ ಮಧ್ಯೆ ಪ್ರಧಾನಿ ಮೋದಿ ಲಕ್ಷದ್ವೀಪದ ಭೇಟಿ ಕೊಟ್ಟಿದ್ದರು. ಇದೀಗ ಲಕ್ಷದ್ವೀಪದ ಗೂಗಲ್​ನಲ್ಲಿ ಹುಡುಕಾಟ ಜೋರಾಗಿದೆ. ಆನ್‌ಲೈನ್ ಟ್ರಾವೆಲ್ ಕಂಪನಿಯಾದ ಮೇಕ್ ಮೈ ಟ್ರಿಪ್ ಪ್ರಕಾರ, ಲಕ್ಷದ್ವೀಪದ ಹುಡುಕಾಟ ಶೇ.3,400ರಷ್ಟು ಹೆಚ್ಚಳವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 'ಬೀಚ್ ಆಫ್ ಇಂಡಿಯಾ' ಅಭಿಯಾನ ಟ್ರೆಂಡ್​ ಆಗಿದೆ.

ಇದನ್ನೂ ಓದಿ: ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.