ETV Bharat / international

ಯುಕೆಯಲ್ಲಿರುವ ಬಹುತೇಕ ವೈದ್ಯ, ನರ್ಸ್​ ಭಾರತೀಯರು! - ಕೌಶಲ್ಯಪೂರ್ಣ ಕೆಲಸದ ವೀಸಾಗಳ

2022ರಲ್ಲಿ ಯುಕೆಗೆ ವಲಸೆ ಬಂದಿರುವ ಆರೋಗ್ಯ ಕಾರ್ಯಕರ್ತರ ಸಂಖ್ಯೆಯಲ್ಲಿ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Majority of docs, nurses in UK came from India: Study

author img

By

Published : Jun 28, 2023, 7:43 PM IST

ಲಂಡನ್ : 2022ರಲ್ಲಿ ಕುಶಲ ಉದ್ಯೋಗಿಗಳ ಪ್ರಾಯೋಜಿತ ವೀಸಾಗಳ ಅಡಿಯಲ್ಲಿ ಯುಕೆಗೆ ಬಂದಿರುವ ಆರೋಗ್ಯ ಕಾರ್ಯಕರ್ತರ ಪೈಕಿ ಬಹುತೇಕರು ಭಾರತದಿಂದಲೇ ಬಂದವರಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇಂಥ ವೀಸಾದಡಿ ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಿಂದ ಯುಕೆಗೆ ಬಂದಿರುವ ಆರೋಗ್ಯ ಕಾರ್ಯಕರ್ತರ ಪ್ರಮಾಣ ಕೇವಲ ಶೇಕಡಾ 1 ರಷ್ಟಿದೆ.

ದೇಶದ ವಲಸೆ ವ್ಯವಸ್ಥೆಯು 2022- 23ರಲ್ಲಿ ಅಭೂತಪೂರ್ವ ಸಂಖ್ಯೆಯ ಸಾಗರೋತ್ತರ ಕಾರ್ಮಿಕರನ್ನು ಆರೋಗ್ಯ ಮತ್ತು ಆರೈಕೆ ಕಾರ್ಯಪಡೆಗೆ ತಂದಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಲಸೆ ವೀಕ್ಷಣಾಲಯದ ವರದಿ ಹೇಳಿದೆ. ರಾಷ್ಟ್ರೀಯತೆಯ ಆಧಾರದಲ್ಲಿ ನೋಡುವುದಾದರೆ, ವಿದೇಶದಿಂದ ಆಗಮಿಸಿದ ಹೊಸದಾಗಿ ನೇಮಕಗೊಂಡ ಭಾರತೀಯ ವೈದ್ಯರ ಪ್ರಮಾಣ ಶೇ 20 ಮತ್ತು ಭಾರತೀಯ ನರ್ಸ್​ಗಳ ಪ್ರಮಾಣ ಶೇ 46 ರಷ್ಟಿದೆ. ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪೀನ್ಸ್​ ನಂತರದ ಸ್ಥಾನಗಳಲ್ಲಿವೆ.

2022ರಲ್ಲಿ ಸರ್ಟಿಫಿಕೇಟ್ ಆಫ್ ಸ್ಪಾನ್ಸರ್​ಶಿಪ್ ಯೋಜನೆಯಡಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ ಶೇ 33ರಷ್ಟು ಉದ್ಯೋಗಿಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದೆ. ಜಿಂಬಾಬ್ವೆ ಮತ್ತು ನೈಜೀರಿಯಾ ನಂತರದ ಸ್ಥಾನಗಳಲ್ಲಿವೆ. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ 2017 ರಿಂದ 2021 ಮತ್ತು 2022 ರಲ್ಲಿ ಆರೋಗ್ಯ ಮತ್ತು ಆರೈಕೆ ವಲಯದಲ್ಲಿ ಕೌಶಲ್ಯಪೂರ್ಣ ಕೆಲಸದ ವೀಸಾಗಳ ಮೇಲೆ ಯುರೋಪಿಯನ್​ ಒಕ್ಕೂಟಕ್ಕೆ ಸೇರದ ನಾಗರಿಕರ ನೇಮಕಾತಿಯಲ್ಲಿ ತೀವ್ರ ಹೆಚ್ಚಳವಾಗಿದೆ.

2022 ರ ಕೊನೆಯಲ್ಲಿ ಮತ್ತು 2023 ರ ಆರಂಭದಲ್ಲಿ ಯುಕೆಯ ಆರೋಗ್ಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳು ಜುಲೈನಿಂದ ಸೆಪ್ಟೆಂಬರ್ 2022 ರಲ್ಲಿ 2,17,000 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ONS) ಅಂದಾಜಿಸಿದೆ. ಇದನ್ನು ಅನುಸರಿಸಿ ಯುಕೆ ವಲಸೆ ವ್ಯವಸ್ಥೆಯು ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಅಭೂತಪೂರ್ವ ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನು ಕರೆಸಿಕೊಂಡಿದೆ. ಮಾರ್ಚ್‌ವರೆಗಿನ ವರ್ಷದಲ್ಲಿ, 57,700 ಕೇರ್ ವರ್ಕರ್‌ಗಳು ನುರಿತ ಕೆಲಸದ ವೀಸಾಗಳನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಆರೋಗ್ಯ ವಲಯಕ್ಕೆ ಸುಮಾರು 58,000 ವೀಸಾಗಳನ್ನು ಯುಕೆ ನೀಡಿದೆ. ಇದರಿಂದ ಯುಕೆ ಸಾಗರೋತ್ತರ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚು ಅವಲಂಬಿತವಾಗುವ ಅಪಾಯವಿದೆ ಎಂದು ಉದ್ಯೋಗ ಗುಂಪು ReWAGE ನಿಯೋಜಿಸಿದ ಅಧ್ಯಯನ ಎಚ್ಚರಿಸಿದೆ. 2022 ರಲ್ಲಿ ಯುಕೆಗೆ ಒಟ್ಟಾರೆ 6,06,000 ಜನ ವಲಸೆ ಬಂದಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಕಳೆದ ವರ್ಷದ ಗರಿಷ್ಠವಾದ 4,88,000 ಕ್ಕೆ ಹೋಲಿಸಿದರೆ ಇದು 24 ರಷ್ಟು ಹೆಚ್ಚಳವಾಗಿದೆ.

ಆರೋಗ್ಯ ಮತ್ತು ಆರೈಕೆ ವಲಯದ ಉದ್ಯೋಗ ನೀಡುವ ಕಂಪನಿಗಳು ಅಂತಾರಾಷ್ಟ್ರೀಯ ನೇಮಕಾತಿಯಿಂದ ಸಾಕಷ್ಟು ಪ್ರಯೋಜನ ಪಡೆದಿವೆ. ಆದರೆ ಸಾಗರೋತ್ತರ ನೇಮಕಾತಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಅಪಾಯಗಳನ್ನು ತರುತ್ತದೆ ಎಂದು ವಲಸೆ ವೀಕ್ಷಣಾಲಯದ ನಿರ್ದೇಶಕರಾದ ಡಾ ಮೆಡೆಲೀನ್ ಸಂಪ್ಶನ್ ಹೇಳಿದ್ದಾರೆ. ಹೆಚ್ಚಿನ ವೇತನಕ್ಕಾಗಿ ಆಗ್ರಹಿಸಿ ಜುಲೈ 20 ಮತ್ತು 21 ರಂದು ಬ್ರಿಟನ್‌ನಲ್ಲಿ ವೈದ್ಯರು ಮುಷ್ಕರ ನಡೆಸಲಿರುವುದು ಗಮನಾರ್ಹ.

ಇದನ್ನೂ ಓದಿ : Social Media: ಇನ್​​ಫ್ಲುಯೆನ್ಸರ್​ಗಳಿಗೆ ಭಾರಿ ಬೇಡಿಕೆ; 2028ರ ವೇಳೆಗೆ 3.5 ಬಿಲಿಯನ್ ಡಾಲರ್ ವಹಿವಾಟು ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.