ETV Bharat / international

ನಡುಕ ನಿಲ್ಲಿಸದ ಟರ್ಕಿ: ಮತ್ತೆ 5.6 ತೀವ್ರತೆಯ ಕಂಪನ; ಧರೆಗುರುಳಿದ ಕಟ್ಟಡಗಳು

ಟರ್ಕಿಯಲ್ಲಿ ವಿನಾಶಕಾರಿ ಭೂಕಂಪನದ ಬಳಿಕ ಮತ್ತೆ ಇಂದು ಭೂಮಿ ನಡುಗಿದೆ. ಮಲಾತ್ಯ ಪ್ರಾಂತ್ಯದಲ್ಲಿ 5.6 ತೀವ್ರತೆಯ ಕಂಪನ ಉಂಟಾಗಿ, ಹಲವಾರು ಕಟ್ಟಡಗಳು ಧರೆಗುರುಳಿವೆ.

ನಡುಕ ನಿಲ್ಲಿಸದ ಟರ್ಕಿ
ನಡುಕ ನಿಲ್ಲಿಸದ ಟರ್ಕಿ
author img

By

Published : Feb 27, 2023, 6:55 PM IST

ಅಂಕಾರಾ: 7.8 ತೀವ್ರತೆಯ ಎರಡು ಭೂಕಂಪನಗಳು ಟರ್ಕಿಯ 11 ಪ್ರಾಂತ್ಯಗಳನ್ನು ಭೀಕರವಾಗಿ ನಾಶ ಮಾಡಿವೆ. ಇಷ್ಟಾದರೂ ದೇಶದಲ್ಲಿ ಕಂಪನ ಮಾತ್ರ ನಿಂತಿಲ್ಲ. ಹಾನಿಗೀಡಾದ ಮಲಾತ್ಯ ಪ್ರಾಂತ್ಯದಲ್ಲಿ ಇಂದು ಮತ್ತೆ 5.6 ತೀವ್ರತೆಯಲ್ಲಿ ಭೂಮಿ ನಡುಗಿದೆ. ಇದರಿಂದ ಹಲವಾರು ಕಟ್ಟಡಗಳು ಧರಾಶಾಯಿಯಾಗಿವೆ. ಸಾವು ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ.

ಫೆಬ್ರವರಿ 6 ರಂದು ಟರ್ಕಿ, ಸಿರಿಯಾದ ಗಡಿಯಲ್ಲಿ ಭೀಕರ ಭೂಕಂಪನ ಉಂಟಾಗಿ 50 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. 12 ಸಾವಿರಕ್ಕೂ ಅಧಿಕ ಕಟ್ಟಡಗಳು ಧರೆಗುರುಳಿವೆ. ಈ ಭೀಕರತೆಯ ಬಳಿಕವೂ ಭೂಮಿ ನಡುಕ ಮಾತ್ರ ನಿಲ್ಲಿಸಿಲ್ಲ. ಇಲ್ಲಿಯವರೆಗೂ ಸುಮಾರು 10 ಸಾವಿರಕ್ಕೂ ಅಧಿಕ ಲಘು ಕಂಪನಗಳು ಉಂಟಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿನ ಭೂಕಂಪವು ಮಲಾತ್ಯ ಪ್ರಾಂತ್ಯದ ಯೆಸಿಲ್ಯುರ್ಟ್ ಪಟ್ಟಣದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿತ್ತು. ರಿಕ್ಟರ್​ ಮಾಪನದಲ್ಲಿ ಇದರ ತೀವ್ರತೆ 5.8 ಇತ್ತು ಎಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಯೆಸಿಲ್ಯುರ್ಟ್ ಪಟ್ಟಣದಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ಅಲ್ಲಿನ ಮೇಯರ್​​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ವಿನಾಶಕಾರಿ ಭೂಕಂಪನ: ಫೆಬ್ರವರಿ 6 ರಂದು ದಕ್ಷಿಣ ಟರ್ಕಿಯ 11 ಪ್ರಾಂತ್ಯಗಳು ಮತ್ತು ಉತ್ತರ ಸಿರಿಯಾದ ಹಲವು ಭಾಗಗಳಲ್ಲಿ 7.8 ತೀವ್ರತೆಯ ಭೂಕಂಪದ ಉಂಟಾಗಿತ್ತು. ಇದರಿಂದ 50 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 44 ಸಾವಿರಕ್ಕೂ ಅಧಿಕ ಜನರು ಟರ್ಕಿಯೊಂದರಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಸಿರಿಯಾದಲ್ಲಿ 6 ಸಾವಿರಕ್ಕೂ ಹೆಚ್ಚು ಸಾವಾಗಿದೆ. ಇನ್ನು ಟರ್ಕಿಯಲ್ಲಿ 1.73 ಲಕ್ಷ ಕಟ್ಟಡಗಳು ಭಾಗಶಃ ಮತ್ತು ಸಂಪೂರ್ಣ ಹಾನಿಗೀಡಾಗಿವೆ.

ಟರ್ಕಿ ಭೂಪ್ರದೇಶವೇ ದೋಷಪೂರಿತ: ಟರ್ಕಿಯಲ್ಲಿ ನಿರಂತರವಾಗಿ ಭೂಕಂಪನಗಳು ಉಂಟಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ದೋಷಪೂರಿತ ಭೂಪ್ರದೇಶ. ಟರ್ಕಿಯು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್‌ನಲ್ಲಿದೆ. ಇದು ದೋಷಪೂರಿತ ಪದರವಾಗಿದ್ದು, ಇಲ್ಲಿ ಸತತವಾಗಿ ಕಂಪನ ಉಂಟಾಗುತ್ತಿರುತ್ತದೆ. ಭೂಮಿಯ ಶಿಲಾ ಪದರವು ಟೆಕ್ಟೋನಿಕ್ ಪ್ಲೇಟ್‌ಗಳು ಎಂದು ಕರೆಯಲ್ಪಡುವ ಸುಮಾರು 15 ಪ್ರಮುಖ ಚಪ್ಪಡಿಗಳಿಂದ ಕೂಡಿರುತ್ತದೆ. ಈ ಪ್ಲೇಟ್​ಗಳ ನಡುವೆ ತಿಕ್ಕಾಟ ಸಹಜ. ಶಿಲಾ ಪದರಗಳ ಘರ್ಷಣೆಯಿಂದ ಮುರಿತ ಉಂಟಾಗಿ ಹಠಾತ್​ ಚಲನೆಯಿಂದ ಭೂಕಂಪನ ಉಂಟಾಗುತ್ತದೆ ಎಂದು ಬ್ರಿಟಿಷ್ ಪುರಾತತ್ವ ಸಮೀಕ್ಷೆ ಹೇಳಿದೆ.

ಟರ್ಕಿಯು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್‌ನಲ್ಲಿದ್ದು, ಇದು ಯುರೇಷಿಯನ್ ಮತ್ತು ಆಫ್ರಿಕನ್ ಪ್ಲೇಟ್‌ಗಳ ನಡುವೆ ಬೆಸೆದಿದೆ. ದೇಶದ ಉತ್ತರ ಭಾಗದಲ್ಲಿ ಮೈನರ್ ಅರೇಬಿಯನ್ ಪದರಗಳ ಚಲನೆಯನ್ನು ನಿರ್ಬಂಧಿಸಿದೆ. ದೋಷಪೂರಿತ ಪದರವಾದ ಉತ್ತರ ಅನಾಟೋಲಿಯನ್ ರೇಖೆಯು ಯುರೇಷಿಯನ್ ಮತ್ತು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮ ಬಿಂದುವಾಗಿದೆ. ಇದು "ವಿನಾಶಕಾರಿ" ಪದರ ಎಂದೇ ಹೇಳಲಾಗುತ್ತದೆ.

ಅನಾಟೋಲಿಯನ್ ಪದರವು ದಕ್ಷಿಣ ಇಸ್ತಾನ್‌ಬುಲ್‌ನಿಂದ ಈಶಾನ್ಯ ಟರ್ಕಿಯವರೆಗೆ ವ್ಯಾಪಿಸಿದೆ. ಇದು ಈ ಹಿಂದೆಯೂ ದುರಂತ ಭೂಕಂಪಗಳನ್ನು ಉಂಟುಮಾಡಿದೆ. 1999 ರಲ್ಲಾದ ಎರಡು 7.4 ಮತ್ತು 7.0 ತೀವ್ರತೆಯ ಭೂಕಂಪಗಳಲ್ಲಿ ಸುಮಾರು 18,000 ಜನರು ಸಾವನ್ನಪ್ಪಿ, 45,000 ಕ್ಕೂ ಹೆಚ್ಚು ಜನರು ಗಾಯಗೊಂಡರು. 2011 ರಲ್ಲಿ ಮತ್ತೊಂದು 7.1 ತೀವ್ರತೆಯ ಕಂಪನದಲ್ಲಿ 500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.

2020 ರಲ್ಲಿ 33 ಸಾವಿರ ಕಂಪನ: ಟರ್ಕಿಯ ಸುಮಾರು 95% ಭೂಪ್ರದೇಶವು ಭೂಕಂಪನ ಉಂಟಾಗುವ ಶಿಲಾಪದರದ ಮೇಲಿದೆ. ದೇಶದ ಮೂರನೇ ಒಂದು ಭಾಗ ಹೆಚ್ಚಿನ ಅಪಾಯದಲ್ಲಿದೆ. ಇದಲ್ಲದೇ, ಇಸ್ತಾನ್‌ಬುಲ್, ಇಜ್ಮಿರ್ ಕೂಡ ಇದೇ ಆತಂಕ ಎದುರಿಸುತ್ತಿದೆ. ಟರ್ಕಿಯಲ್ಲಿ 2020 ರಲ್ಲಿ ಸುಮಾರು 33,000 ಭೂಕಂಪಗಳು ಉಂಟಾಗಿವೆ. ಇವುಗಳಲ್ಲಿ 332 ಭೂಕಂಪಗಳು 4.0 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ದಾಖಲಾಗಿವೆ.

ಇದನ್ನೂ ಓದಿ: ಟರ್ಕಿ, ಸಿರಿಯಾಗೆ "ಸೋಮವಾರ" ಶಾಪ: ಮತ್ತೊಂದು ಭೂಕಂಪನದಿಂದ ತತ್ತರಿಸಿದ ದೇಶಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.