ETV Bharat / international

ಬ್ರೆಜಿಲ್​: ದಶಕಗಳ ನಂತರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಲುಲಾ ಡಾ ಸಿಲ್ವಾ - ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ

ಶೇ 98.8ರಷ್ಟು ರನ್‌ಆಫ್ ಮತದಾನದಲ್ಲಿ ಬೋಲ್ಸನಾರೊ ಶೇ 49.2 ಮತಗಳನ್ನು ಪಡೆದಿದ್ದು, ಶೇ 50.8 ಮತಗಳನ್ನು ಪಡೆದ ಡಾ ಸಿಲ್ವಾ ಗೆಲುವು ಸಾಧಿಸಿದ್ದಾರೆ. ಕೇವಲ 2 ಮಿಲಿಯನ್ ಮತಗಳ ಅಂತರದಲ್ಲಿ ಡಾ ಸಿಲ್ವಾ ವಿಜಯ ಸಾಧಿಸಿದ್ದಾರೆ.

Luiz Inacio Lula da Silva
ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ
author img

By

Published : Oct 31, 2022, 9:16 AM IST

Updated : Oct 31, 2022, 11:14 AM IST

ಸಾವೊ ಪಾಲೊ(ಬ್ರೆಜಿಲ್​) : ಎಡಪಂಥೀಯ ವರ್ಕರ್ಸ್ ಪಾರ್ಟಿಯ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಬ್ರೆಜಿಲ್​ನ ಹಾಲಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಸೋಲಿಸಿ ದೇಶದ ಮುಂದಿನ ಅಧ್ಯಕ್ಷರಾಗಿದ್ದಾರೆ ಎಂದು ಬ್ರೆಜಿಲ್‌ನ ಚುನಾವಣಾ ಪ್ರಾಧಿಕಾರ ಭಾನುವಾರ ತಿಳಿಸಿದೆ.

ಇಪ್ಪತ್ತು ವರ್ಷಗಳ ನಂತರ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳು ಬ್ರೆಜಿಲ್​ನಲ್ಲಿ ಅಧಿಕಾರದಲ್ಲಿದ್ದ ಬಲಪಂಥೀಯ ರಾಜಕೀಯ ಕೊನೆಗೊಂಡಿದೆ. ಶೇ 98.8ರಷ್ಟು ರನ್‌ಆಫ್ ಮತದಾನದಲ್ಲಿ ಬೋಲ್ಸನಾರೊ ಶೇ 49.2ರಷ್ಟು ಮತಗಳನ್ನು ಪಡೆದಿದ್ದು, ಶೇ 50.8ರಷ್ಟು ಮತಗಳನ್ನು ಪಡೆದು ಡಾ ಸಿಲ್ವಾ ಗೆಲುವು ಸಾಧಿಸಿದ್ದಾರೆ.

ಭ್ರಷ್ಟಾಚಾರದ ಹಗರಣದಲ್ಲಿ ಜೈಲು ಪಾಲಾಗಿದ್ದರಿಂದ ಡಾ ಸಿಲ್ವಾ ಅವರು 2018ರ ಚುನಾವಣೆಯಿಂದ ದೂರ ಉಳಿಯುವಂತಾಗಿತ್ತು. ಇದರಿಂದಾಗಿ ಸಂಪ್ರದಾಯವಾದಿ ಸಾಮಾಜಿಕ ಮೌಲ್ಯಗಳ ರಕ್ಷಕ ಬೋಲ್ಸನಾರೊ ಅಧಿಕಾರಕ್ಕೆ ಬಂದಿದ್ದರು. ಪ್ರಸ್ತುತ ಚುನಾವಣೆಯ ಗೆಲುವು 77ರ ಹರೆಯದ ಡಾ ಸಿಲ್ವಾ ಅವರಿಗೆ ಅದ್ಭುತ ಮುನ್ನಡೆಯಾಗಿದೆ.

ಸಾವೊ ಪಾಲೊದಲ್ಲಿನ ಹೋಟೆಲ್​ನಲ್ಲಿ ವಿಜಯ ಭಾಷಣ ಮಾಡಿದ ಡಾ ಸಿಲ್ವಾ, 'ಇಂದು ಬ್ರೆಎಜಿಲ್​ನ ಜನರು ವಿಜೇತರಾಗಿದ್ದಾರೆ. ಇದು ನನ್ನ ಅಥವಾ ವರ್ಕರ್ಸ್​ ಪಾರ್ಟಿಯ ವಿಜಯವಲ್ಲ ಅಥವಾ ಚುನಾವಣಾ ಪ್ರಚಾರದಲ್ಲಿ ಬೆಂಬಲಿಸಿದ ಪಕ್ಷಗಳದ್ದಲ್ಲ. ಇದು ರಾಜಕೀಯ ಪಕ್ಷಗಳು, ವೈಯಕ್ತಿಕ ಹಿತಾಸಕ್ತಿ ಮತ್ತು ಸಿದ್ಧಾಂತಗಳ ಮೇಲೆ ರೂಪುಗೊಂಡ ಪ್ರಜಾಸತ್ತಾತ್ಮಕ ಚಳವಳಿಯ ವಿಜಯವಾಗಿದೆ.

ಇದರಿಂದ ಪ್ರಜಾಪ್ರಭುತ್ವ ವಿಜಯ ಸಾಧಿಸಿದೆ ಎಂದು ಹೇಳಿದ್ದಾರೆ. ಡಾ ಸಿಲ್ವಾ ಅವರು ತಮ್ಮ ಎಡಪಂಥೀಯ ವರ್ಕರ್ಸ್ ಪಾರ್ಟಿಯನ್ನು ಮೀರಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಮೂರು ದಶಕಗಳ ನಂತರ ನಡೆದ ದೇಶದ ಅತ್ಯಂತ ಪೈಪೋಟಿಯ ಚುನಾವಣೆಯಾಗಿದೆ. ಕೇವಲ 2 ಮಿಲಿಯನ್ ಮತಗಳ ಅಂತರದಲ್ಲಿ ಡಾ ಸಿಲ್ವಾ ವಿಜಯ ಸಾಧಿಸಿದ್ದಾರೆ. ಡಾ ಸಿಲ್ವಾ ಅವರ ಪದಗ್ರಹಣ ಜನವರಿ 1 ರಂದು ನಡೆಯಲಿದೆ. ಅವರು ಕೊನೆಯದಾಗಿ 2003-2010 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮತ ಎಣಿಕೆಯ ಮೊದಲಾರ್ಧದಲ್ಲಿ ಬೋಲ್ಸನಾರೊ ಮುನ್ನಡೆ ಸಾಧಿಸಿದ್ದರು. ಆದರೆ, ಕೊನೆಯ ಹಂತಕದಲ್ಲಿ ಡಾ ಸಿಲ್ವಾ ವಿಜಯ ಭೇರಿ ಬಾರಿಸಿದ್ದಾರೆ.

ಇದನ್ನೂ ಓದಿ: ಕಿಂಗ್ ಚಾರ್ಲ್ಸ್ ಭೇಟಿ ನಂತರ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ

Last Updated : Oct 31, 2022, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.