ETV Bharat / international

ಚೀನಾದಲ್ಲಿ ಮತ್ತೆ ಲಾಕ್​ಡೌನ್: ಸರ್ಕಾರದ ವಿರುದ್ಧ ಬೀದಿಗಿಳಿದ ಜನತೆ - ದೀರ್ಘಾವಧಿಯ ಕೋವಿಡ್ ಲಾಕ್​ಡೌನ್​

ಚೀನಾದ ಅತ್ಯಂತ ಕಟ್ಟುನಿಟ್ಟಾದ 'ಶೂನ್ಯ-ಕೋವಿಡ್ ನೀತಿ'ಯು ಸಾರ್ವಜನಿಕರಲ್ಲಿ ವಿಪರೀತ ಕೋಪಕ್ಕೆ ಕಾರಣವಾಗುತ್ತಿದೆ.

ಚೀನಾದಲ್ಲಿ ಮತ್ತೆ ಲಾಕ್​ಡೌನ್: ಸರ್ಕಾರದ ವಿರುದ್ಧ ಬೀದಿಗಿಳಿದ ಜನತೆ
lockdown-again-in-china-people-took-to-the-streets-against-the-government
author img

By

Published : Nov 27, 2022, 12:52 PM IST

ಬೀಜಿಂಗ್ (ಚೀನಾ): ಎರಡು ದಿನಗಳ ಹಿಂದೆ ಅಪಾರ್ಟ್‌ಮೆಂಟ್ ಬ್ಲಾಕ್‌ ಒಂದರಲ್ಲಿ ಬೆಂಕಿ ಹೊತ್ತಿಕೊಂಡು 10 ಜನ ಸಾವನ್ನಪ್ಪಿದ ನಂತರ ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಶನಿವಾರ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಮನೆಗೆ ಬೆಂಕಿ ಬಿದ್ದರೂ ಜನ ಮನೆಯಿಂದ ಹೊರಗೆ ಬಂದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೂಡ ಅವಕಾಶ ನೀಡಿಲ್ಲ ಎಂದು ಆಕ್ರೋಶಗೊಂಡ ಜನತೆ ಭಾರಿ ಪ್ರತಿಭಟನೆಗಿಳಿದಿದ್ದಾರೆ.

ಗುರುವಾರ ರಾತ್ರಿ ಪ್ರಾದೇಶಿಕ ರಾಜಧಾನಿ ಉರುಮ್ಕಿಯಲ್ಲಿ ವಸತಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದು ಹತ್ತು ಜನರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಕಟ್ಟುನಿಟ್ಟಾದ ಕೋವಿಡ್​ ನಿರ್ಬಂಧಗಳ ಕಾರಣದಿಂದಲೇ ಜನರ ರಕ್ಷಣಾ ಕಾರ್ಯಾಚರಣೆ ಸಮರ್ಪಕವಾಗಿ ನಡೆಯಲಿಲ್ಲ ಎಂಬ ಸಂದೇಶಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ನಂತರ ಜನ ಆಕ್ರೋಶಗೊಂಡಿದ್ದಾರೆ. ಚೀನಾದ ಅತ್ಯಂತ ಕಟ್ಟುನಿಟ್ಟಾದ 'ಶೂನ್ಯ-ಕೋವಿಡ್ ನೀತಿ'ಯು ಸಾರ್ವಜನಿಕರಲ್ಲಿ ವಿಪರೀತ ಕೋಪಕ್ಕೆ ಕಾರಣವಾಗುತ್ತಿದೆ. ದೀರ್ಘಾವಧಿಯ ಕೋವಿಡ್ ಲಾಕ್​ಡೌನ್​ಗಳಿಂದ ಜನರ ರಕ್ಷಣೆಗೆ ಅಡ್ಡಿಯಾಗುತ್ತಿದೆ ಎಂಬ ಸಂದೇಶಗಳು ಚೀನಾ ಮತ್ತು ವಿದೇಶಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದು ಗಮನಾರ್ಹ.

ಉರುಮ್ಕಿಯ ಜನ ಕೋವಿಡ್ ಲಾಕ್​ಡೌನ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಈ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಬೀದಿಗಿಳಿದ ಜನ ಲಾಕ್​ಡೌನ್ ಕೊನೆಗೊಳಿಸಿ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 800 ಕೋಟಿ ತಲುಪಿದ ವಿಶ್ವದ ಜನಸಂಖ್ಯೆ: ಚೀನಾ ಹಿಂದಿಕ್ಕಲು ಭಾರತಕ್ಕೆ ಬೇಕು ಒಂದೇ ಒಂದು ವರ್ಷ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.