ETV Bharat / international

ಭಾರತ ಹೊರಗಿನ ಅತಿದೊಡ್ಡ ಅಂಬೇಡ್ಕರ್ ಪ್ರತಿಮೆ ಅ.14ರಂದು ಅಮೆರಿಕದಲ್ಲಿ ಅನಾವರಣ - ಖ್ಯಾತ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್

ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆ ಅಮೆರಿಕದ ಮೇರಿಲ್ಯಾಂಡ್​ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

Largest Ambedkar statue outside India to be unveiled in US on Oct 14

author img

By ETV Bharat Karnataka Team

Published : Oct 4, 2023, 5:37 PM IST

ನ್ಯೂಯಾರ್ಕ್ (ಅಮೆರಿಕ) : ಭಾರತದ ಹೊರಗಿನ ಅತಿ ದೊಡ್ಡದಾದ 19 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯು ಅಕ್ಟೋಬರ್ 14ರಂದು ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಅನಾವರಣಗೊಳ್ಳಲಿದೆ. ಶ್ವೇತಭವನದಿಂದ ಕೇವಲ 21 ಮೈಲಿ ದೂರದಲ್ಲಿರುವ ಅಕೋಕೀಕ್ ನಗರದಲ್ಲಿ 13 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಈ ಪ್ರತಿಮೆ ಇತ್ತೀಚೆಗೆ ಹೈದರಾಬಾದ್​ನಲ್ಲಿ ಅನಾವರಣಗೊಂಡ ವಿಶ್ವದ ಅತಿದೊಡ್ಡ 125 ಅಡಿ ಅಂಬೇಡ್ಕರ್ ಪ್ರತಿಮೆಯ ಪ್ರತಿರೂಪವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅಂಬೇಡ್ಕರ್ ಇಂಟರ್​ ನ್ಯಾಷನಲ್ ಸೆಂಟರ್ (ಎಐಸಿ) ಪ್ರಕಾರ, ಇದು ಭಾರತದ ಹೊರಗೆ ಸ್ಥಾಪನೆಯಾಗುತ್ತಿರುವ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆಯಾಗಿದೆ. ಅಲ್ಲದೆ ಯುಸ್​ನಲ್ಲಿ ಸಂಘಟನೆ ಸ್ಥಾಪಿಸುತ್ತಿರುವ ಮೊದಲ ಅಂಬೇಡ್ಕರ್ ಸ್ಮಾರಕ ಯೋಜನೆಯ ಭಾಗವಾಗಿದೆ. "ಸಮಾನತೆ, ಮಾನವ ಹಕ್ಕುಗಳು ಮತ್ತು ಸಬಲೀಕರಣಕ್ಕೆ ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ನಾವು ಗೌರವಿಸುತ್ತೇವೆ" ಎಂದು ಎಐಸಿ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 23 ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ಕರೆಯಲ್ಪಡುವ ಭೀಮರಾವ್ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಭಾರತದ ಮಧ್ಯಪ್ರದೇಶದ ಮೋವ್​ನಲ್ಲಿ ಜನಿಸಿದರು. ಅವರು ಲಂಡನ್ ವಿಶ್ವವಿದ್ಯಾಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯ ಆಫ್ ಲಂಡನ್ ಎರಡರಿಂದಲೂ ಡಾಕ್ಟರೇಟ್ ಗಳಿಸಿದ ವಿದ್ಯಾರ್ಥಿಯಾಗಿದ್ದರು. ಕಾನೂನು, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿನ ಸಂಶೋಧನೆಗಾಗಿ ವಿದ್ವಾಂಸರಾಗಿ ಖ್ಯಾತಿಯನ್ನು ಗಳಿಸಿದರು.

ಅಹ್ಮದಾಬಾದ್​ನಲ್ಲಿ ಸ್ಥಾಪನೆಯಾಗಿರುವ ಸರ್ದಾರ್ ಪಟೇಲ್ ಅವರ ಅತಿದೊಡ್ಡ ಪ್ರತಿಮೆಯನ್ನು ನಿರ್ಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಕಳೆದ ಅರವತ್ತು ವರ್ಷಗಳಲ್ಲಿ ಸುತಾರ್ 90 ಕ್ಕೂ ಹೆಚ್ಚು ಸ್ಮಾರಕ ಶಿಲ್ಪಗಳನ್ನು ತಯಾರಿಸಿದ್ದಾರೆ. ಭಾರತ, ಯುಎಸ್, ಫ್ರಾನ್ಸ್, ಅರ್ಜೆಂಟೀನಾ, ಇಟಲಿ, ರಷ್ಯಾ ಮತ್ತು ಮಲೇಷ್ಯಾಗಳಲ್ಲಿ ಸುತಾರ್​ ನಿರ್ಮಿಸಿದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಕೂಡ ರಾಮ್ ಸುತಾರ್ ಅವರೇ ನಿರ್ಮಾಣ ಮಾಡಿದ್ದಾರೆ. ರಾಮ್ ವಂಜಿ ಸುತಾರ್ ಅವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ 2016 ರಲ್ಲಿ ಪದ್ಮಭೂಷಣ ಮತ್ತು 1999 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಸುತಾರ್ ಅಕ್ಟೋಬರ್ 2018 ರಲ್ಲಿ ಟ್ಯಾಗೋರ್ ಪ್ರಶಸ್ತಿಯನ್ನು ಪಡೆದರು.

ಇದನ್ನೂ ಓದಿ: ಭಾರತೀಯ ಮೂಲದ ಯುವಕರ ಸ್ಟಾರ್ಟಪ್​ನಲ್ಲಿ ಚಾಟ್​ ಜಿಪಿಟಿಯ ಸ್ಯಾಮ್ ಆಲ್ಟಮನ್ ಹೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.