ETV Bharat / international

ಮಾಸ್ಕೋ ಆಕ್ರಮಿತ ದಕ್ಷಿಣ ಉಕ್ರೇನ್‌ ನಗರಗಳಲ್ಲಿ 'ರಷ್ಯಾ ದಿನ' ಆಚರಣೆ - Ukraine celebrated Russia Day

ಮರಿಯುಪೋಲ್ ಸೇರಿದಂತೆ ಉಕ್ರೇನ್‌ನಿಂದ ರಷ್ಯಾ ಆಕ್ರಮಿಸಿಕೊಂಡ ಭಾಗಗಳಲ್ಲಿ ಭಾನುವಾರ ರಷ್ಯಾ ದಿನವನ್ನು ಆಚರಿಸಲಾಯಿತು. ಜೊತೆಗೆ ಒಂದು ನಗರದ ನಿವಾಸಿಗಳಿಗೆ ರಷ್ಯಾದ ಪಾಸ್‌ಪೋರ್ಟ್‌ಗಳನ್ನು ನೀಡಲು ಪ್ರಾರಂಭಿಸಲಾಗಿದೆ.

ರಷ್ಯಾ ದಿನ
ರಷ್ಯಾ ದಿನ
author img

By

Published : Jun 13, 2022, 7:13 AM IST

ಕೀವ್​​(ಉಕ್ರೇನ್​​): ಆಕ್ರಮಿತ ದಕ್ಷಿಣ ಉಕ್ರೇನ್‌ನಲ್ಲಿ ನೆಲೆಸಿರುವ ಮಾಸ್ಕೋ ಬೆಂಬಲಿತ ಅಧಿಕಾರಿಗಳು ಭಾನುವಾರ ರಷ್ಯಾ ದಿನವನ್ನು ಆಚರಿಸಿದರು. ವಶಪಡಿಸಿಕೊಂಡ ಭಾಗಗಳ ಮೇಲೆ ತನ್ನ ಆಡಳಿತವನ್ನು ಗಟ್ಟಿಗೊಳಿಸಲು ರಷ್ಯಾ ಪ್ರಯತ್ನಿಸುತ್ತಿದ್ದು, ಒಂದು ನಗರದ ನಿವಾಸಿಗಳಿಗೆ ರಷ್ಯಾದ ಪಾಸ್‌ಪೋರ್ಟ್‌ಗಳನ್ನು ನೀಡಲು ಪ್ರಾರಂಭಿಸಲಾಗಿದೆ.

ರಷ್ಯಾ ದಿನ ಆಚರಿಸಲು ಖೆರ್ಸನ್ ನಗರದ ಕೇಂದ್ರ ಕಚೇರಿಯೊಂದರಲ್ಲಿ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು. ಜೊತೆಗೆ ನೆರೆಯ ಜಪೋರಿಝಿಯಾ, ಮೆಲಿಟೊಪೋಲ್‌ ನಗರದಲ್ಲಿ ಸಹ ರಷ್ಯಾ ಧ್ವಜವನ್ನು ಹಾರಿಸುವ ಮೂಲಕ ಸಂಭ್ರಮಿಸಲಾಯಿತು. ಇದು ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾ ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದನ್ನು ಗುರುತಿಸುತ್ತದೆ ಎಂದು ರಷ್ಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಉಕ್ರೇನಿಯನ್ ಮಾಧ್ಯಮಗಳು ಸಹ ಈ ಕುರಿತು ವರದಿ ಮಾಡಿವೆ. 'ಧ್ವಂಸಗೊಂಡ ದಕ್ಷಿಣ ಬಂದರು ಮರಿಯುಪೋಲ್ ಸೇರಿದಂತೆ ಉಕ್ರೇನ್‌ನಿಂದ ರಷ್ಯಾ ಆಕ್ರಮಿಸಿಕೊಂಡ ಭಾಗಗಳಲ್ಲಿ ರಷ್ಯಾ ದಿನವನ್ನು ಆಚರಿಸಲಾಯಿತು. ಈ ವೇಳೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದು, ಹೆದ್ದಾರಿಯಲ್ಲಿ ರಷ್ಯಾದ ಧ್ವಜಗಳನ್ನು ಹಾರಿಸಲಾಯಿತು' ಎಂದು ತಿಳಿಸಿದೆ.

ಇನ್ನೊಂದೆಡೆ, ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಕಿಡಿಕಾರಿದೆ. ಆದಾಗ್ಯೂ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾನುವಾರ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಅರ್ಧಕ್ಕೆ ಓದು ನಿಲ್ಲಿಸಿದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಅಡ್ಮಿಷನ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.