ETV Bharat / international

ಜಪಾನ್​ ಭೂಕಂಪ: ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಸುನಾಮಿ ಆತಂಕ ದೂರ

ಜಪಾನ್‌ನಲ್ಲಿ 7.6ರ ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ದೊಡ್ಡ ಮಟ್ಟದ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಸದ್ಯ ಸುನಾಮಿ ಭೀತಿ ಇಲ್ಲ, ದೊಡ್ಡ ಅಲೆಗಳು ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Japan lowers tsunami warning after earthquakes

author img

By ETV Bharat Karnataka Team

Published : Jan 2, 2024, 11:25 AM IST

ಟೋಕಿಯೊ(ಜಪಾನ್​): ಹೊಸ ವರ್ಷ 2024ರ ಮೊದಲ ದಿನ ಮಧ್ಯ ಜಪಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿ 24 ಜನ ಸಾವನ್ನಪ್ಪಿದ್ದಾರೆ. ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಲ್ಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಸಂಭವಿಸಿದ ಭೂಕಂಪದಿಂದ ಸುನಾಮಿ ಉಂಟಾಗುವ ಭೀತಿ ಇತ್ತು. ಆದರೆ, ಸುನಾಮಿ ಉಂಟಾಗುವುದಿಲ್ಲ, ದೊಡ್ಡ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಜನರು ಕೊಂಚ ನಿರಾಳರಾಗಿದ್ದಾರೆ. ಸುನಾಮಿ ಭೀತಿ ಇಲ್ಲವಾದರೂ ದೊಡ್ಡ ಅಲೆಗಳು ಬರುವ ಸಾಧ್ಯತೆ ಇರುವುದರಿಂದ ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.

Japan lowers tsunami warning after earthquakes
ಭೂಕಂಪದ ನಂತರದ ರಸ್ತೆಗಳ ಚಿತ್ರಣ

ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಇದನ್ನು ಅಧಿಕೃತವಾಗಿ 2024 ನೋಟೋ ಪೆನಿನ್ಸುಲಾ ಭೂಕಂಪ ಎಂದು ಹೆಸರಿಸಿದೆ. ಸೋಮವಾರದಿಂದ ಕನಿಷ್ಠ 155 ಭೂಕಂಪಗಳಾಗಿವೆ. ಇಶಿಕಾವಾ ಪ್ರಾಂತ್ಯದ ನೋಟೋ ಪೆನಿನ್ಸುಲಾದಲ್ಲಿ ಸಂಜೆ 4:10ರ (ಸ್ಥಳೀಯ ಕಾಲಮಾನ) ಸುಮಾರಿಗೆ 10 ಕಿಲೋಮೀಟರ್ (6 ಮೈಲುಗಳು) ಆಳದ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.

ನೋಟೋ ಪೆನಿನ್ಸುಲಾ ಭೂಕಂಪಕ್ಕೆ ಕುಸಿದ ಕಟ್ಟಡ

ಸೋಮವಾರ ಸಂಜೆ ಮಧ್ಯ ಜಪಾನಿನ ನಗರ ವಾಜಿಮಾದಲ್ಲಿ ಭೂಕಂಪದ ನಂತರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. 100ಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಪರಮಾಣು ನಿಯಂತ್ರಣ ಪ್ರಾಧಿಕಾರದ ಪ್ರಕಾರ, ಇಶಿಕಾವಾ ಪ್ರಿಫೆಕ್ಚರ್‌ನಲ್ಲಿರುವ ಶಿಕಾ ಪರಮಾಣು ವಿದ್ಯುತ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ.

ಸಾರ್ವಜನಿಕ ಸೇವೆ ವ್ಯತ್ಯಯ: ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತವಾಗಿದೆ. ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಬುಲೆಟ್ ರೈಲುಗಳನ್ನು ಸ್ಥಗಿತಗೊಳಿಸಲಾಯಿತು. ಸಂಜೆ ಹೊತ್ತಿಗೆ ರೈಲು ಸೇವೆ ಆರಂಭಿಸಲಾಗಿದೆ. ಹೆದ್ದಾರಿಗಳನ್ನು ಮುಚ್ಚಲಾಗಿತ್ತು. ಕೆಲವು ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದವು. ಪ್ರದೇಶದಲ್ಲಿ ಕೆಲವು ಸೆಲ್ ಫೋನ್ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ.

japan-lowers
ಭೂಕಂಪದಿಂದ ಕುಸಿದ ಮನೆಯ ಒಳಾಂಗಣದ ಚಿತ್ರಣ

ಮುಂದಿನ ವಾರವೂ ಭೂಕಂಪ ಎಚ್ಚರಿಕೆ: ಮುಂದಿನ ವಾರದಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಭೂಕಂಪಗಳು ಸಂಭವಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಭೂಕುಸಿತಗಳು ಮತ್ತು ಮನೆಗಳು ಕುಸಿಯುವ ಅಪಾಯದೊಂದಿಗೆ ಪ್ರದೇಶದಲ್ಲಿ ಹೆಚ್ಚು ಪ್ರಬಲ ಭೂಕಂಪಗಳು ನಡೆದಿವೆ.

ಎಕ್ಸ್​ ಆ್ಯಪ್​ ಖಾತೆಯಲ್ಲಿ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, "ಭೂಕಂಪ ಮತ್ತು ಸುನಾಮಿಗೆ ಸಂಬಂಧಿಸಿದಂತೆ ಸಂಪರ್ಕಿಸಲು ರಾಯಭಾರ ಕಚೇರಿ ತುರ್ತು ನಿಯಂತ್ರಣ ಕೊಠಡಿ ಸ್ಥಾಪಿಸಿದೆ. ಯಾವುದೇ ಸಹಾಯಕ್ಕಾಗಿ ಇದನ್ನು ಸಂಪರ್ಕಿಸಬಹುದು" ಎಂದು ತಿಳಿಸಿದೆ.

japan-lowers
ಭೂಕಂಪದ ನಂತರ ಪುಸ್ತಕ ಮಳಿಗೆ

ಉತ್ತರ ಕೊರಿಯಾ ಮತ್ತು ರಷ್ಯಾದ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ ಸರ್ಕಾರವು ಭೂಕಂಪಗಳು ಮತ್ತು ಸುನಾಮಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ವಿಶೇಷ ತುರ್ತು ಕೇಂದ್ರವನ್ನು ಸ್ಥಾಪಿಸಿದೆ.

"ನಮ್ಮ ಆಡಳಿತವು ಜಪಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿನ ಜನರಿಗೆ ಯಾವುದೇ ಅಗತ್ಯ ನೆರವು ನೀಡಲು ಸಿದ್ಧವಾಗಿದ್ದೇವೆ" ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಜಪಾನ್​ನಲ್ಲಿ ಭಾರೀ ಭೂಕಂಪ; ಸುನಾಮಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.