ಖಾನ್ ಯೂನಿಸ್: ಹಮಾಸ್ ಉಗ್ರ ಸಂಘಟನೆ ನಿರ್ನಾಮಕ್ಕೆ ಶಪಥ ಮಾಡಿರುವ ಇಸ್ರೇಲ್ ಸೇನೆ ಸೋಮವಾರ ಗಾಜಾ ಪಟ್ಟಿಯಲ್ಲಿ ತೀವ್ರ ದಾಳಿ ನಡೆಸಿದ್ದು, ಹಮಾಸ್ ಉಗ್ರಗಾಮಿಗಳ ಸೆರೆಯಲ್ಲಿದ್ದ ಮಹಿಳಾ ಸೈನಿಕರೊಬ್ಬರನ್ನು ಸೆರೆಯಿಂದ ಬಿಡುಗಡೆ ಮಾಡಿಸಿದೆ. ಇದರ ಮಧ್ಯೆ ಗಾಯಗೊಂಡವರು ಹಾಗೂ ಸಾವಿರಾರು ಪ್ಯಾಲೆಸ್ಟೈನಿಯರು ಆಶ್ರಯ ಪಡೆದಿರುವ ಆಸ್ಪತ್ರೆಗಳ ಬಳಿಯೇ ವೈಮಾನಿಕ ದಾಳಿಗಳು ನಡೆದಾಗಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮದ ಕರೆಯನ್ನು ತಿರಸ್ಕರಿಸಿದ್ದಾರೆ.
ಕದನ ವಿರಾಮಕ್ಕೆ ಕರೆ ಕೊಡುವುದೆಂದರೆ ಅದು ಹಮಾಸ್ಗೆ ಇಸ್ರೇಲ್ ಶರಣಾಗಲು ಕರೆ ನೀಡಿದಂತೆಯೇ. ಅದು ನಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ. ಈಗಾಗಲೇ ಉತ್ತರ ಗಾಜಾದಲ್ಲಿ ಹಮಾಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದ್ದು, ಹಮಾಸ್ ಜೊತೆಗಿನ ಇಸ್ರೇಲ್ ಯುದ್ಧ 2ನೇ ಹಂತಕ್ಕೆ ತಲುಪಿದೆ.
-
IAF fighter jets struck Hezbollah terrorist infrastructure including weapons, posts and sites in Lebanon. pic.twitter.com/qDjo8tz7Qu
— Israel Defense Forces (@IDF) October 31, 2023 " class="align-text-top noRightClick twitterSection" data="
">IAF fighter jets struck Hezbollah terrorist infrastructure including weapons, posts and sites in Lebanon. pic.twitter.com/qDjo8tz7Qu
— Israel Defense Forces (@IDF) October 31, 2023IAF fighter jets struck Hezbollah terrorist infrastructure including weapons, posts and sites in Lebanon. pic.twitter.com/qDjo8tz7Qu
— Israel Defense Forces (@IDF) October 31, 2023
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ಕ್ರೂರ ದಾಳಿ ವೇಲೆ ಸರೆಹಿಡಿಯಾಗಿದ್ದ ಮಹಿಳಾ ಸೈನಿಕಳನ್ನು ಯುದ್ಧ ಪ್ರಾರಂಭವಾಗಿ ಒಂದು ವಾರಗಳ ನಂತರ ಇದು ಮೊದಲ ಬಾರಿಗೆ ರಕ್ಷಿಸಲಾಗಿದೆ ಎಂದು ಮಿಲಿಟರಿ ಹೇಳಿದೆ. ಯೋಧೆ ಒರಿ ಮೆಗಿದಿಶ್ ಆರೋಗ್ಯವಾಗಿದ್ದು, ತನ್ನ ಕುಟುಂಬವನ್ನು ಭೇಟಿಯಾಗಿದ್ದಾಳೆ. ಜೊತೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಆಕೆಯನ್ನು ಅವರ ಮನೆಗೆ ಆಹ್ವಾನಿಸಿದ್ದಾರೆ. ಸದ್ಯ ಯುದ್ಧದಲ್ಲಿ ಹಮಾಸ್ ಒತ್ತೆಯಾಳುಗಳಾಗಿರುವವರನ್ನು ಮುಕ್ತಗೊಳಿಸುವುದು ಭದ್ರತಾ ಪಡೆಗಳ ಮುಖ್ಯ ಗುರಿ ಎಂದು ತಿಳಿಸಿದೆ.
-
We have a moral obligation to do everything we can to bring the hostages home.
— Israel Defense Forces (@IDF) October 30, 2023 " class="align-text-top noRightClick twitterSection" data="
Watch as RAdm. Daniel Hagari expands on the subject. pic.twitter.com/wj9VGKMzuk
">We have a moral obligation to do everything we can to bring the hostages home.
— Israel Defense Forces (@IDF) October 30, 2023
Watch as RAdm. Daniel Hagari expands on the subject. pic.twitter.com/wj9VGKMzukWe have a moral obligation to do everything we can to bring the hostages home.
— Israel Defense Forces (@IDF) October 30, 2023
Watch as RAdm. Daniel Hagari expands on the subject. pic.twitter.com/wj9VGKMzuk
ಪ್ಯಾಲೆಸ್ಟೈನ್ ನಾಗರಿಕರು ಇಸ್ರೇಲ್ ವಾಯುದಾಳಿಯಿಂದ ತಪ್ಪಿಸಿಕೊಳ್ಳಲು ಗಾಜಾದ ಉತ್ತರ ಭಾಗಕ್ಕೆ ಬರಲು ಬಳಸುವ ಹೆದ್ದಾರಿಯನ್ನೇ ಇಸ್ರೇಲ್ ಸೇನೆಯ ಯುದ್ಧ ಟ್ಯಾಂಕ್ಗಳು ಹಾಗೂ ಬುಲ್ಡೋಜರ್ಗಳು ಬಂದ್ ಮಾಡಿವೆ. ಗಾಜಾದೊಳಗೆ ಯುದ್ಧ ಟ್ಯಾಂಕರ್, ಸೈನಿಕರನ್ನು ನುಗ್ಗಿಸಿರುವ ಇಸ್ರೇಲ್, ಸೀಮಿತ ದಾಳಿ ಬಗ್ಗೆ ಇಸ್ರೇಲ್ ಸೇನೆಯಿಂದಲೇ ವಿಡಿಯೋ ರಿಲೀಸ್ ಮಾಡಲಾಗಿದೆ.
-
She is home.
— Israel Defense Forces (@IDF) October 30, 2023 " class="align-text-top noRightClick twitterSection" data="
PVT Megidish was abducted by Hamas on October 7. Tonight, she was rescued during ground operations.
Ori is now home with her family. pic.twitter.com/SZsqpvPQux
">She is home.
— Israel Defense Forces (@IDF) October 30, 2023
PVT Megidish was abducted by Hamas on October 7. Tonight, she was rescued during ground operations.
Ori is now home with her family. pic.twitter.com/SZsqpvPQuxShe is home.
— Israel Defense Forces (@IDF) October 30, 2023
PVT Megidish was abducted by Hamas on October 7. Tonight, she was rescued during ground operations.
Ori is now home with her family. pic.twitter.com/SZsqpvPQux
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇದುವರೆಗೆ ಅದಷ್ಟೋ ಸಾವಿರ ಸಂಖ್ಯೆಯ ಇಸ್ರೇಲ್ ನಾಗರಿಕರು ಹಾಗೂ ಪ್ಯಾಲೆಸ್ಟೈನಿಯರನ್ನು ಬಲಿ ತೆಗೆದುಕೊಂಡಿದೆ. ಇದುವರೆಗೆ ಕನಿಷ್ಠ 8,300 ಪ್ಯಾಲೆಸ್ಟೈನಿಯರು, ಅದರಲ್ಲಿ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು, 1400ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ ಹಮಾಸ್ನ ಉಗ್ರಗಾಮಿ ಗುಂಪುಗಳು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸುಮಾರು 240 ಮಂದಿಯನ್ನು ತನ್ನ ಒತ್ತೆಯಾಳಾಗಿರಿಸಿಕೊಂಡಿದೆ. ಹಮಾಸ್ ಅನ್ನು ನಿರ್ನಾಮ ಮಾಡುವುದರ ಜೊತೆಗೆ ಈ ಒತ್ತೆಯಾಳುಗಳನ್ನು ಕಾಪಾಡುವುದು ಕೂಡ ಇಸ್ರೇಲ್ ಸೇನೆಯ ಮುಂದಿರುವ ಗುರಿಯಾಗಿದೆ.
ಇದನ್ನೂ ಓದಿ : "ಗಾಜಾದಲ್ಲಿ ನಾಗರಿಕರ ಸಾವು -ನೋವು ಕಡಿಮೆ ಮಾಡಲು ಇಸ್ರೇಲ್ ನಿಸ್ಸಂಶಯವಾಗಿ ಪ್ರಯತ್ನಿಸುತ್ತಿದೆ": ಅಮೆರಿಕ