ETV Bharat / international

ಹಮಾಸ್​ ರಕ್ತಚರಿತ್ರೆಗೆ ಅಂತ್ಯ ಹಾಡಲು ಇಸ್ರೇಲ್‌ ಪ್ರತಿಜ್ಞೆ; ಗಾಜಾ ತೊರೆದ 8 ಲಕ್ಷಕ್ಕೂ ಹೆಚ್ಚು ಜನ - Israel attempts to free hostages

Israel intensifies attack against Hamas: ಹಮಾಸ್ ವಿರುದ್ಧ ಇಸ್ರೇಲ್ ದಾಳಿ ತೀವ್ರಗೊಂಡಿದೆ. ಯುದ್ಧ ಆರಂಭವಾದ ಮೂರು ವಾರಗಳಲ್ಲಿ ಸುಮಾರು 8 ಲಕ್ಷ ಜನ ಗಾಜಾ ತೊರೆದಿದ್ದಾರೆ.

Israeli forces battle Hamas around Gaza City, as military says 800,000 have fled south

author img

By PTI

Published : Oct 31, 2023, 6:01 PM IST

ದೇರ್ ಅಲ್-ಬಲಾಹ್ (ಗಾಜಾ ಪಟ್ಟಿ) : ಉತ್ತರ ಗಾಜಾದಲ್ಲಿ ಮಂಗಳವಾರ ಇಸ್ರೇಲಿ ಪದಾತಿ ಪಡೆಗಳು ಹಮಾಸ್ ಉಗ್ರರು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರೆಸಿವೆ. ಇಡೀ ಗಾಜಾ ಪ್ರದೇಶವನ್ನು ಇಸ್ರೇಲಿ ಪಡೆಗಳು ಸುತ್ತುವರೆದಿದ್ದು, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವೈಮಾನಿಕ ದಾಳಿ ನಡೆಸುತ್ತಿವೆ. ಮೂರು ವಾರಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 8 ಲಕ್ಷ ಜನ ಗಾಜಾ ತೊರೆದಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಹಮಾಸ್ ವಶದಲ್ಲಿದ್ದ ಸೆರೆಯಾಳನ್ನು ಮೊದಲ ಬಾರಿಗೆ ಯಶಸ್ವಿಯಾಗಿ ರಕ್ಷಿಸಿದ ನಂತರ ಉತ್ತೇಜಿತರಾಗಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮದ ಮನವಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಕ್ಟೋಬರ್ 7ರಂದು ರಕ್ತಸಿಕ್ತ ಹಿಂಸಾಚಾರ ನಡೆಸಿದ ಹಮಾಸ್​ನ ಗಾಜಾ ಆಳುವ ಸಾಮರ್ಥ್ಯವನ್ನು ಮತ್ತು ಇಸ್ರೇಲ್ ಮೇಲೆ ಅದು ಮತ್ತೊಮ್ಮೆ ದಾಳಿ ನಡೆಸುವ ಶಕ್ತಿಯನ್ನು ನಿರ್ನಾಮ ಮಾಡುವುದಾಗಿ ಅವರು ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಸೆರೆಹಿಡಿದ ಅಂದಾಜು 240 ಸೆರೆಯಾಳುಗಳ ಪೈಕಿ ಒಬ್ಬರನ್ನು ವಿಶೇಷ ಪಡೆಗಳ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಮಿಲಿಟರಿ ಹೇಳಿದೆ. ನೆಲದ ಮೇಲೆ ನಡೆಸುವ ಯುದ್ಧವು ಒತ್ತೆಯಾಳುಗಳಿಗೆ ಅಪಾಯ ಮಾಡುವುದಿಲ್ಲ, ಬದಲಾಗಿ ಅವರನ್ನು ಬಿಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದ ನೆತನ್ಯಾಹು ಅವರ ಹೇಳಿಕೆಗೆ ಇದರಿಂದ ಬಲ ಬಂದಂತಾಗಿದೆ.

ಹಮಾಸ್ ಉಗ್ರರಿಂದ ಬಿಡಿಸಲಾದ 19 ವರ್ಷದ ಯುವತಿ ಓರಿ ಮೆಗಿದಿಶ್ ಆರೋಗ್ಯವಾಗಿದ್ದು, ಮರಳಿ ತಮ್ಮ ಕುಟುಂಬ ಸೇರಿಕೊಂಡಿದ್ದಾರೆ ಎಂದು ಮಿಲಿಟರಿ ಹೇಳಿದೆ. ಇದಕ್ಕೂ ಮುನ್ನ ಹಮಾಸ್ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ಸಾವಿರಾರು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಿದರೆ ತನ್ನ ಬಳಿ ಇರುವ ಎಲ್ಲ ಇಸ್ರೇಲ್ ನಾಗರಿಕರನ್ನು ಬಿಡುವುದಾಗಿ ಹಮಾಸ್ ಹೇಳಿದೆ. ಆದರೆ ಇಸ್ರೇಲ್ ಇದನ್ನು ತಳ್ಳಿ ಹಾಕಿದೆ.

ಸುಮಾರು 6,72,000 ಪ್ಯಾಲೆಸ್ಟೈನಿಯರು ಶಾಲೆಗಳು ಮತ್ತು ಇತರ ಸೌಲಭ್ಯಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ಆರ್​ಬ್ಲ್ಯೂಎ ಎಂದು ಕರೆಯಲ್ಪಡುವ ಪ್ಯಾಲೆಸ್ಟೈನ್ ನಿರಾಶ್ರಿತರ ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಈ ನಿರಾಶ್ರಿತ ಕೇಂದ್ರಗಳು ತಮ್ಮಲ್ಲಿ ಇರಿಸಿಕೊಳ್ಳಬಹುದಾದ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರಿಂದ ಕಿಕ್ಕಿರಿದು ತುಂಬಿವೆ. ಅಗತ್ಯ ವಸ್ತುಗಳ ಕೊರತೆ ತೀವ್ರವಾಗುತ್ತಿದ್ದು, ಕಳೆದ ವಾರಾಂತ್ಯದಲ್ಲಿ ಜನ ವಿಶ್ವಸಂಸ್ಥೆಯ ಗೋದಾಮುಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ಲೂಟಿ ಮಾಡಿದರು.

ಗಾಜಾದಲ್ಲಿ ಕಳೆದ ಕೆಲ ವಾರಗಳಿಂದ ಕೇಂದ್ರೀಕೃತ ವಿದ್ಯುತ್ ಸರಬರಾಜು ನಿಂತು ಹೋಗಿದೆ. ಆಸ್ಪತ್ರೆಗಳು ಮತ್ತು ಮನೆಗಳಲ್ಲಿನ ತುರ್ತು ಜನರೇಟರ್​ಗಳಿಗೆ ಅಗತ್ಯವಾದ ಇಂಧನದ ಪೂರೈಕೆಯನ್ನು ಕೂಡ ಇಸ್ರೇಲ್ ನಿರ್ಬಂಧಿಸಿದೆ.

ಈಗ ಯುದ್ಧವು ಮತ್ತಷ್ಟು ದಿಕ್ಕುಗಳಿಗೆ ವ್ಯಾಪಿಸುತ್ತಿದ್ದು, ಲೆಬನಾನ್ ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ಇಸ್ರೇಲ್ ಗಡಿಯುದ್ದಕ್ಕೂ ಪ್ರತಿದಿನ ಗುಂಡಿನ ದಾಳಿ ನಡೆಸುತ್ತಿದೆ. ಇಸ್ರೇಲ್ ಮತ್ತು ಯುಎಸ್ ಇರಾನ್ ಗೆ ಸಂಪರ್ಕ ಹೊಂದಿರುವ ಸಿರಿಯಾದಲ್ಲಿನ ಗುರಿಗಳ ಮೇಲೆ ದಾಳಿ ನಡೆಸುತ್ತಿವೆ. ಇರಾನ್ ಹಮಾಸ್, ಹಿಜ್ಬುಲ್ಲಾ ಮತ್ತು ಈ ಪ್ರದೇಶದಲ್ಲಿರುವ ಇತರ ಸಶಸ್ತ್ರ ಗುಂಪುಗಳನ್ನು ಬೆಂಬಲಿಸುತ್ತಿದೆ.

ಕಳೆದ ಕೆಲ ದಿನಗಳ ಅವಧಿಯಲ್ಲಿ ಈಜಿಪ್ಟ್​ನಿಂದ ಆಹಾರ ಮತ್ತು ಔಷಧಿಗಳನ್ನು ತುಂಬಿದ 150 ಕ್ಕೂ ಹೆಚ್ಚು ಟ್ರಕ್​ಗಳು ಗಾಜಾಗೆ ಪ್ರವೇಶಿಸಲು ಇಸ್ರೇಲ್ ಅನುಮತಿ ನೀಡಿದೆ. ಆದರೆ ವೇಗವಾಗಿ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ ಎಂದು ಪರಿಹಾರ ಕಾರ್ಯಕರ್ತರು ಹೇಳುತ್ತಾರೆ. ಗಾಜಾ ಪ್ರವೇಶಿಸುವ ಎಲ್ಲ ಪರಿಹಾರ ಸಾಮಗ್ರಿಗಳ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಇವು ಹಮಾಸ್​ನ ಪಾಲಾಗುವುದು ಕಂಡು ಬಂದರೆ ಅವುಗಳ ಪೂರೈಕೆ ನಿಲ್ಲಿಸಲಾಗುವುದು ಎಂದು ಇಸ್ರೇಲ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತೀಯ ಪ್ರವಾಸಿಗರಿಗೆ ಖುಷಿ ಸುದ್ದಿ; ಈ ದೇಶಕ್ಕೆ ಹೋಗಲು ನಿಮಗೆ ವೀಸಾ ಬೇಕಿಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.