ETV Bharat / international

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್​ ಹೇಳಿಕೆಗೆ ಇಸ್ರೇಲ್​ ಖಂಡನೆ.. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ - ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್

ಹಮಾಸ್ ದಾಳಿಗಳು ನಿರ್ವಾತದಲ್ಲಿ ನಡೆದಿಲ್ಲ ಎಂದು ವಿಶ್ವಸಂಸ್ಥೆ ಮಹಾ ಪ್ರದಾನ ಕಾರ್ಯದರ್ಶಿ ಭದ್ರತಾ ಮಂಡಳಿ ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ. ಆಂಟೋನಿಯೊ ಗುಟೆರೆಸ್ ಅವರ ಈ ಹೇಳಿಕೆ ಖಂಡಿಸಿರುವ ಇಸ್ರೇಲ್​, ಗುಟೆರಸ್​ "ತಕ್ಷಣ ರಾಜೀನಾಮೆ ನೀಡುವಂತೆ" ಕರೆ ನೀಡಿದೆ. ಇನ್ನು ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ಅವರು ವಿಶ್ವಸಂಸ್ಥೆ ಮುಖ್ಯಸ್ಥರನ್ನು ಇಂದು ನಿಗದಿತ ದ್ವಿಪಕ್ಷೀಯ ಮಾತುಕತೆ ವೇಳೆ ಭೇಟಿಯಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Etv Bharatವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್​ ಹೇಳಿಕೆಗೆ ಇಸ್ರೇಲ್​ ಖಂಡನೆ.. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ
Etv Bharವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್​ ಹೇಳಿಕೆಗೆ ಇಸ್ರೇಲ್​ ಖಂಡನೆ.. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯat
author img

By ETV Bharat Karnataka Team

Published : Oct 25, 2023, 8:00 AM IST

Updated : Oct 25, 2023, 8:19 AM IST

ನ್ಯೂಯಾರ್ಕ್(ವಿಶ್ವಸಂಸ್ಥೆ): ವಿಶ್ವಸಂಸ್ಥೆ ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕರೆ ನೀಡಿದ್ದಾರೆ. ನಿಗದಿತ ದ್ವಿಪಕ್ಷೀಯ ಮಾತುಕತೆಗಾಗಿ ಇಂದು ವಿಶ್ವಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುವುದಿಲ್ಲ ಎಂದು ಇಸ್ರೇಲ್​ ವಿದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ. ಎರ್ಡಾನ್ ಈ ಸಂಬಂದ ಸಾಮಾಜಿಕ ಮಾಧ್ಯಮ ಆ್ಯಪ್​ X ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಈ ವಿಷಯ ತಿಳಿಸಿದ್ದಾರೆ.

  • The @UN Secretary-General, who shows understanding for the campaign of mass murder of children, women, and the elderly, is not fit to lead the UN.

    I call on him to resign immediately.

    There is no justification or point in talking to those who show compassion for the most…

    — Ambassador Gilad Erdan גלעד ארדן (@giladerdan1) October 24, 2023 " class="align-text-top noRightClick twitterSection" data=" ">

ವಿಶ್ವಸಂಸ್ಥೆಯಲ್ಲಿ ಗುಟೆರಸ್​ ಮಾತು - ಯುದ್ಧದ ಬಗ್ಗೆ ಕಳವಳ: 'ಹಮಾಸ್ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ' ಭದ್ರತಾ ಮಂಡಳಿ ಉದ್ದೇಶಿಸಿ ಮಾತನಾಡಿದ ಗುಟೆರೆಸ್, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಭೀಕರವಾಗುತ್ತಾ ಸಾಗಿದೆ. ಗಾಜಾದಲ್ಲಿ ಯುದ್ಧವು ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಗಾಜಾಪಟ್ಟಿ ಸುರಳಿಯಾಕಾರದ ಗಂಡಾಂತರದಲ್ಲಿದೆ ಎಂದು ಎಚ್ಚರಿಸಿದ್ದಾರೆ. ಹಮಾಸ್‌ನ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ ಎಂದು ಗುರುತಿಸುವುದು ಸಹ ಇದೇ ವೇಳೆ ಮುಖ್ಯವಾಗಿದೆ ಎಂದು ಗುಟೆರೆಸ್ ಹೇಳಿದ್ದಾರೆ.

ಗಾಜಾದ ಜನರು ಹಿಂಸಾಚಾರದಿಂದ ಬಾಧಿತರಾಗುತ್ತಿದ್ದಾರೆ. ಅವರ ಆರ್ಥಿಕತೆ ಉಸಿರುಗಟ್ಟಿಸಲ್ಪಟ್ಟಿದೆ. ಅಲ್ಲಿಂದ ಜನರನ್ನು ಸ್ಥಳಾಂತರಗೊಳಿಸಿ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ಅವರ ಕಷ್ಟಗಳಿಗೆ ರಾಜಕೀಯ ಪರಿಹಾರ ಮತ್ತು ಭರವಸೆಗಳು ಕಣ್ಮರೆಯಾಗುತ್ತಿವೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪ್ಯಾಲೆಸ್ತೀನ್ ಜನರ ಕುಂದುಕೊರತೆಗಳೊಂದಿಗೆ ಹಮಾಸ್‌ನ ಭಯಾನಕ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆ ಭಯಾನಕ ದಾಳಿಗಳು ಪ್ಯಾಲೇಸ್ಟಿನಿಯನ್ ಜನರ ಸಾಮೂಹಿಕ ಶಿಕ್ಷೆಯನ್ನು ಸಮರ್ಥಿಸಲೂ ಆಗುತ್ತಿಲ್ಲ ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಗಳು ಹೇಳಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಭೆ ಉದ್ದೇಶಿಸಿ ಮಾತನಾಡಿದರು.

ಇಸ್ರೇಲ್​ ವಿರೋಧ: ಇದೇ ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಗುಟೆರಸ್ ನೀಡಿದ ಹೇಳಿಕೆಯನ್ನು ಇಸ್ರೇಲ್​ ರಾಯಭಾರಿ ತೀವ್ರವಾಗಿ ವಿರೋಧಿಸಿದ್ದಾರೆ. ಇದೇ ವೇಳೆ, ಇಸ್ರೇಲ್‌ ವಿಶ್ವಸಂಸ್ಥೆ ಮುಖ್ಯಸ್ಥರ ರಾಜೀನಾಮೆಯನ್ನು ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಹಮಾಸ್ ದಾಳಿಗಳು "ನಿರ್ವಾತದಲ್ಲಿ ಸಂಭವಿಸಿಲ್ಲ" ಎಂದು ಭದ್ರತಾ ಮಂಡಳಿಯಲ್ಲಿ ಗುಟೆರೆಸ್ ಅವರ ಹೇಳಿಕೆ ಸರಿಯಾದುದಲ್ಲ. ವಿಶ್ವಸಂಸ್ಥೆ ಮುಖ್ಯಸ್ಥರು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

’’ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಸಾಮೂಹಿಕ ಹತ್ಯೆಯ ಅಭಿಯಾನಕ್ಕೆ ಮುನ್ನುಡಿ ಬರೆದವರ ಬಗ್ಗೆ ಮೃದು ಧೋರಣೆ ಸರಿಯಲ್ಲ ಎಂದಿರುವ ಇಸ್ರೇಲ್​ ರಾಯಭಾರಿ, ವಿಶ್ವಸಂಸ್ಥೆಯನ್ನು ಮುನ್ನಡೆಸಲು ಯೋಗ್ಯರಲ್ಲ. ಕೂಡಲೇ ರಾಜೀನಾಮೆ ನೀಡುವಂತೆ ನಾನು ಗುಟೆರಸ್​ ಅವರಿಗೆ ಮನವಿ ಮಾಡುತ್ತೇನೆ. ಇಸ್ರೇಲ್ ನಾಗರಿಕರು ಮತ್ತು ಯಹೂದಿ ಜನರ ವಿರುದ್ಧ ನಡೆದ ಅತ್ಯಂತ ಭಯಾನಕ ದೌರ್ಜನ್ಯಗಳಿಗೆ ಸಹಾನುಭೂತಿ ತೋರಿಸುವವರೊಂದಿಗೆ ಮಾತನಾಡುವುದರಲ್ಲಿ ಯಾವುದೇ ಸಮರ್ಥನೆ ಅಥವಾ ಅರ್ಥವಿಲ್ಲ. ಸರಳವಾಗಿ ಯಾವುದೇ ಪದಗಳಿಲ್ಲ ಎಂದು ಇಸ್ರೇಲ್​ ರಾಯಭಾರಿ X ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇಸ್ರೇಲ್‌ಗೆ ವಿಶ್ವಸಂಸ್ಥೆ ಪ್ರತಿಕ್ರಿಯೆ: ಇಸ್ರೇಲಿ ವಿದೇಶಾಂಗ ಸಚಿವರ ಎಕ್ಸ್​ ಪೋಸ್ಟ್ ಗೆ ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ, ಗಾಜಾದಲ್ಲಿ ಹಮಾಸ್ ಒತ್ತೆಯಾಗಿಸಿಕೊಂಡಿರುವ ಕುಟುಂಬದ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಇಸ್ರೇಲಿ ಖಾಯಂ ಮಿಷನ್‌ನ ಪ್ರತಿನಿಧಿಯೊಂದಿಗೆ ನಮ್ಮ ತಂಡ ಇರುತ್ತದೆ ಎಂದು ಡುಜಾರಿಕ್​ ಹೇಳಿದ್ದಾರೆ.

  • #WATCH | At the UN Security Council on the Israel-Gaza conflict, Eli Cohen, Minister of Foreign Affairs of Israel says, "Saturday, October 7 is a wake up call for the entire free world. A wake up call against extremism and terror. On that day, over 1,500 terrorists of Hamas and… pic.twitter.com/BXZOU0a9Ud

    — ANI (@ANI) October 24, 2023 " class="align-text-top noRightClick twitterSection" data=" ">

ವಿಶ್ವಸಂಸ್ಥೆಯಲ್ಲಿ ಕೊಹೆನ್​ : ಈ ನಡುವೆ, ಇಸ್ರೇಲ್​ ವಿದೇಶಾಂಗ ಸಚಿವ ಕೊಹೆನ್​, ಹಮಾಸ್‌ನಿಂದ ಅಪಹರಣಕ್ಕೊಳಗಾದವರ ಕೊಲಾಜ್​ ಮಾಡಿದ ಪೋಟೊ ಹಿಡಿದು, ಅಲ್ಲಿನ ಪರಿಸ್ಥಿತಿಯನ್ನು ಭದ್ರತಾ ಮಂಡಳಿ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ’’ ಒತ್ತೆಯಾಳುಗಳ ಪರಿಸ್ಥಿತಿಯು "ಜೀವಂತ ದುಃಸ್ವಪ್ನ" ಎಂದು ಕಳವಳ ವ್ಯಕ್ತಪಡಿಸಿದ್ದು, ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯನ್ನು ನೆನಪು ಮಾಡಿಕೊಟ್ಟರು. ಈ ದಿನವು ಇತಿಹಾಸದಲ್ಲಿ "ಕ್ರೂರ ಹತ್ಯಾಕಾಂಡ" ಮತ್ತು ಉಗ್ರವಾದ ಮತ್ತು ಭಯೋತ್ಪಾದನೆ ವಿರುದ್ಧ "ಎಚ್ಚರಗೊಳಿಸುವ ಕರೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. "ಹಮಾಸ್ ಹೊಸ ನಾಜಿಗಳು ಎಂದು ಕರೆದಿರುವ ಇಸ್ರೇಲ್​, ಒತ್ತೆಯಾಳುಗಳನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಕರೆ ನೀಡಿದ್ದಾರೆ.

ಇದೇ ವೇಳೆ, ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಕರ್ತವ್ಯ ಹೊಂದಿದೆ ಎಂದು ಕೊಹೆನ್​ ಹೇಳಿದ್ದು, “ಇದು ಕೇವಲ ಇಸ್ರೇಲ್ ಯುದ್ಧವಲ್ಲ. ಇದು ಭಯೋತ್ಪಾದನೆ ಮುಕ್ತ ಪ್ರಪಂಚದ ಯುದ್ಧ." ಎಂದು ಘೋಷಿಸಿದ್ದಾರೆ.

ಇದನ್ನು ಓದಿ: ಹಮಾಸ್ ಉಗ್ರರು ವಿಶ್ವಕ್ಕೆ ಮಾರಕ; ಸಂಘರ್ಷಕ್ಕೆ ಎರಡು ರಾಷ್ಟ್ರ ರಚನೆಯೇ ಪರಿಹಾರ: ಇಂಗ್ಲೆಂಡ್​ ಪ್ರಧಾನಿ ರಿಷಿ ಸುನಕ್

Last Updated : Oct 25, 2023, 8:19 AM IST

For All Latest Updates

TAGGED:

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.