ಐರ್ಲೆಂಡ್: ತನ್ನ ಹೆಂಡತಿಯ ಜೊತೆ ಸಂಭೋಗ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯೊಬ್ಬ ನೆನಪಿನ ಶಕ್ತಿಯನ್ನೇ ಕಳೆದುಕೊಂಡ ವಿಲಕ್ಷಣ ಘಟನೆ ಐರ್ಲೆಂಡ್ನಲ್ಲಿ ನಡೆದಿದೆ. ಇದರಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ಬಳಿಕ ಮತ್ತೆ ಮೆಮೋರಿಯನ್ನು ವಾಪಸ್ ಪಡೆದಿದ್ದಾರೆ.
ಐರ್ಲೆಂಡ್ನ ಮೆಡಿಕಲ್ ಜರ್ನಲ್‌ನಲ್ಲಿ ಈ ಸುದ್ದಿ ಬಿತ್ತರವಾಗಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಸಮಯ ಕಳೆದ ಬಳಿಕ ಮರೆಗುಳಿತನಕ್ಕೆ ತುತ್ತಾಗಿದ್ದಾನೆ. ಹಿಂದಿನ ದಿನ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಮರೆತಿದ್ದೇನೆ ಎಂದು ನೊಂದುಕೊಂಡು ಸುಖಾಸುಮ್ಮನೆ ಕಣ್ಣೀರಿಟ್ಟಿದ್ದಾನೆ.
ಹಿಂದಿನ ದಿನದ ರಾತ್ರಿ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬಸ್ಥರೊಂದಿಗೆ ಭರ್ಜರಿಯಾಗಿಯೇ ಆಚರಿಸಿದ್ದ. ಬೆಳಗಾಗುವುದರೊಳಗೆ ಆತ ಎಲ್ಲವನ್ನು ಮರೆತಿದ್ದ. ಇಷ್ಟೇ ಅಲ್ಲದೇ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ಈ ಬಗ್ಗೆ ಪದೇ ಪದೆ ಪ್ರಶ್ನೆಗಳನ್ನು ಕೇಳಿ ದುಖಿಃತನಾಗುತ್ತಿದ್ದನಂತೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಆತ ದೈವವಶಾತ್ ಮತ್ತೆ ಜ್ಞಾಪಕ ಶಕ್ತಿಯನ್ನು ಮರಳಿ ಪಡೆದಿದ್ದಾನೆ.
ವೈದ್ಯರು ಏನಂತಾರೆ?: ವೈದ್ಯರ ಪ್ರಕಾರ ಇದು 50 ರಿಂದ 70 ವರ್ಷ ವಯಸ್ಸಿನ ಗಂಡಸರಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ. ಕೆಲವು ಗಂಟೆಗಳ ಬಳಿಕ ಅವರು ಮತ್ತೆ ಸ್ಮರಣೆಯನ್ನು ಮರಳಿ ಪಡೆಯಲಿದ್ದಾರೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಟ್ರಾನ್ಸೀಂಟ್ ಗ್ಲೋಬಲ್ ಅಮ್ನೇಸಿಯ(ಟಿಜಿಎ) ಎಂದು ಕರೆಯುತ್ತಾರೆ.
ಎಪಿಲೆಪ್ಸಿ ಅಥವಾ ಸ್ಟ್ರೋಕ್‌ನಂತಹ ಘಟನೆಗಳಿಂದ ನರಗಳು ದುರ್ಬಲವಾಗಿ ಹಠಾತ್ ಆಗಿ ನೆನಪು ಕಳೆದುಕೊಳ್ಳುತ್ತಾರೆ. ಈ ವೇಳೆ ವ್ಯಕ್ತಿ ಹತ್ತೇ ನಿಮಿಷದಲ್ಲಿ ಸ್ಮರಣೆಯನ್ನು ಕಳೆದುಕೊಳ್ಳಲೂಬಹುದು. ಕೆಲವೊಮ್ಮೆ ಇದರಿಂದ ವರ್ಷದ ಹಿಂದೆ ಏನಾಯಿತು ಎಂಬುದೂ ನೆನಪಿರುವುದಿಲ್ಲ. ಈ ರೋಗ ಬಾಧಿತ ಜನರು ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಮರಣೆಯನ್ನು ಮರಳಿ ಕೂಡ ಪಡೆಯುತ್ತಾರೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಓದಿ: ವಂಚನೆ ಬಯಲು.. ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಿನಲ್ಲಿ ಪಾವತಿಯಾಗ್ತಿತ್ತು ಡಯಾಲಿಸಿಸ್ ಮಾಡಿದ ಬಿಲ್!