ದೋಹಾ: 24 ವರ್ಷಗಳ ಹಿಂದೆ ಅಮೆರಿಕ ಮತ್ತು ಇರಾನ್ ದೇಶಗಳ ಮಧ್ಯೆ ನಡೆದಿದ್ದ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ಮುಖಾಮುಖಿಯು ರಾಜಕೀಯವಾಗಿ ಅತ್ಯಂತ ತೀವ್ರತೆಯಿಂದ ಕೂಡಿದ ಹಣಾಹಣಿಯಾಗಿತ್ತು. ಆದರೆ, ಈ ಬಾರಿ ರಾಜಕೀಯ ಆವೇಶ ಇನ್ನೂ ಜೋರಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ತೀರಾ ಹಳಸಿಹೋಗಿವೆ. ಈ ಮಧ್ಯೆ ಮಂಗಳವಾರ ಅಮೆರಿಕ ಮತ್ತು ಇರಾನ್ ಮಧ್ಯೆ ಮತ್ತೊಂದು ಫುಟ್ ಬಾಲ್ ಪಂದ್ಯ ನಡೆಯಲಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳು, ಅದರ ವಿಸ್ತರಿಸುತ್ತಿರುವ ಪರಮಾಣು ಕಾರ್ಯಕ್ರಮ ಮತ್ತು ಟೆಹ್ರಾನ್‌ಗೆ ಮತ್ತೆ ಸಂಬಂಧಿಸಿರುವ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ದಾಳಿಗಳು ಪಂದ್ಯವನ್ನು ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿರದೇ, ಇದಕ್ಕೆ ಭೌಗೋಳಿಕ ಮತ್ತು ರಾಜಕೀಯ ಆವೇಶ ನೀಡಿವೆ. ಫಲಿತಾಂಶ ಏನೇ ಇರಲಿ, ಮುಂಬರುವ ತಿಂಗಳುಗಳಲ್ಲಿ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಎರಡೂ ರಾಷ್ಟ್ರಗಳಿಗೆ ಅದರದ್ದೇ ನೆನಪುಗಳಿವೆ: ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳು ಯಾವಾಗಿನಿಂದ ಹದಗೆಟ್ಟವು ಎಂಬುದು ನೀವು ಯಾರನ್ನು ಈ ಪ್ರಶ್ನೆ ಕೇಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 1953ರಲ್ಲಿ ಶಾಹ ಮಹಮೂದ್ ರೇಜಾ ಅವರ ಆಡಳಿತವನ್ನು ಸುಭದ್ರಪಡಿಸಿದ ಸಿಐಎ ಬೆಂಬಲದಿಂದ ನಡೆದ ಕ್ಷಿಪ್ರಕ್ರಾಂತಿ ಇದಕ್ಕೆ ಕಾರಣ ಎಂದು ಇರಾನಿಯನ್ನರು ಹೇಳುತ್ತಾರೆ.
ಇರಾನ್ ಕ್ರಾಂತಿಯ ಸಮಯದಲ್ಲಿ 1979 ರಲ್ಲಿ ಯುಎಸ್ ರಾಯಭಾರ ಕಚೇರಿಯನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು 444 ದಿನಗಳ ಕಾಲ ತಮ್ಮ ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದು ಸಂಬಂಧ ಹದಗೆಡಲು ಕಾರಣ ಎಂದು ಅಮೆರಿಕನ್ನರು ನೆನಪಿಸಿಕೊಳ್ಳುತ್ತಾರೆ.
ಇರಾನ್ - ಅಮೆರಿಕ ಪರಸ್ಪರ ಎದುರಾಳಿ ಆಗಿರುವುದು ಇದು ಎರಡನೇ ಬಾರಿ: ಆದಾಗ್ಯೂ ಸಾಕರ್‌ನಲ್ಲಿ ಈ ಟೈಮ್‌ಲೈನ್ ಹೆಚ್ಚು ಸರಳವಾಗಿದೆ. ಏಕೆಂದರೆ ಇರಾನ್ ಮತ್ತು ಅಮೆರಿಕ ವಿಶ್ವಕಪ್‌ನಲ್ಲಿ ಪರಸ್ಪರ ಎದುರಾಗಿ ಆಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 1998 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಪಂದ್ಯಾವಳಿಯ ಸಮಯದಲ್ಲಿ ಇಸ್ಲಾಮಿಕ್ ಗಣರಾಜ್ಯದ ಸ್ಥಿತಿ ಸಂಪೂರ್ಣವಾಗಿ ಬೇರೆಯಾಗಿತ್ತು. ಆಗ ಲಿಯಾನ್‌ನಲ್ಲಿ ನಡೆದ ಪಂದ್ಯದಲ್ಲಿ ಇರಾನ್ 2-1 ಗೋಲುಗಳಿಂದ ಜಯಗಳಿಸಿತ್ತು. ಟೆಹ್ರಾನ್‌ನಲ್ಲಿ ಇರಾನಿಯನ್ನರು ಸಂಭ್ರಮಾಚರಣೆ ನಡೆಸುತ್ತಿದ್ದಂತೆ ಅಮೆರಿಕ ತಂಡ ಹತಾಶೆಯಿಂದ ತಲೆ ತಗ್ಗಿಸಿತ್ತು.
ಆ ಸಮಯದಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇರಾನ್ ತಂಡವನ್ನು ಹೊಗಳಿದ್ದರು. ಪ್ರಬಲ ಮತ್ತು ಸೊಕ್ಕಿನ ಎದುರಾಳಿಯು ಸೋಲಿನ ಕಹಿ ರುಚಿಯನ್ನು ಅನುಭವಿಸುತ್ತಾನೆ ಎಂದು ಹೇಳಿದ್ದರು.
ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಗೆ ಯತ್ನಿಸಿದ್ದ ಖತಾಮಿ: ಆದರೆ ಆಟದ ಮೈದಾನದಿಂದ ಹೊರಗೆ, ಇರಾನ್‌ನ ಆಗಿನ ಅಧ್ಯಕ್ಷ ಮೊಹಮ್ಮದ್ ಖತಾಮಿ ಪಾಶ್ಚಿಮಾತ್ಯ ದೇಶ ಮತ್ತು ಜಗತ್ತಿನೊಂದಿಗೆ ಸಂಬಂಧ ಸುಧಾರಿಸಲು ಪ್ರಯತ್ನಿಸಿದರು. ಇರಾನ್‌ನೊಳಗೆ ಖತಾಮಿ ಸುಧಾರಣಾವಾದಿ ನೀತಿಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದರು ಮತ್ತು ಅದರ ದೇವಪ್ರಭುತ್ವದ ಅಂಶಗಳನ್ನು ಉದಾರೀಕರಣಗೊಳಿಸಲು ಪ್ರಯತ್ನಿಸಿದರು.
ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ಆಡಳಿತವು ಖತಾಮಿಯ ಆಯ್ಕೆ ಸಂಬಂಧ ಸುಧಾರಣೆಯ ಅವಕಾಶ ಎಂದು ಆಶಿಸಿದ್ದರು. ಆಗ ಎರಡು ತಂಡಗಳು ಜಂಟಿ ಛಾಯಾಚಿತ್ರಕ್ಕೆ ಪೋಸ್ ನೀಡಿದ್ದವು ಮತ್ತು ಇರಾನ್ ಆಟಗಾರರು ತಮ್ಮ ಎದುರಾಳಿ ಅಮೆರಿಕನ್ ಆಟಗಾರರಿಗೆ ಬಿಳಿ ಹೂವುಗಳನ್ನು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನಿಯನ್ನರಿಗೆ ಯುಎಸ್ ಸಾಕರ್ ಫೆಡರೇಶನ್ ಪೆನ್ನಂಟ್ಸ್ಗಳನ್ನು ನೀಡಿತ್ತು. ಇಬ್ಬರೂ ಜರ್ಸಿಗಳನ್ನು ಕೂಡ ವಿನಿಮಯ ಮಾಡಿಕೊಂಡರು. ಆದರೆ, ಇರಾನಿಯನ್ನರು ಅವನ್ನು ಯಾವತ್ತೂ ಹಾಕಿಕೊಳ್ಳಲಿಲ್ಲ. ನಂತರ ಎರಡೂ ತಂಡಗಳು ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ಸೌಹಾರ್ದ ಪಂದ್ಯ ಆಡಿದ್ದವು.
24 ವರ್ಷಗಳ ಬಳಿಕ ಮುಖಾಮುಖಿ: ಅದಾಗಿ 24 ವರ್ಷಗಳ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಬಹುಶಃ ಹಿಂದೆಂದಿಗಿಂತಲೂ ಹೆಚ್ಚು ಉದ್ವಿಗ್ನವಾಗಿವೆ. 1988ರಲ್ಲಿ ಇರಾನ್-ಇರಾಕ್ ಯುದ್ಧದ ಕೊನೆಯಲ್ಲಿ ಸಾವಿರಾರು ರಾಜಕೀಯ ಕೈದಿಗಳ ಸಾಮೂಹಿಕ ಮರಣದಂಡನೆಯಲ್ಲಿ ಭಾಗವಹಿಸಿದ್ದ ಖಮೇನಿಯ ಬಂಟ ಇಬ್ರಾಹಿಂ ರೈಸಿ ಈಗ ಇರಾನ್ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಇರಾನ್ ಈಗ ಸಂಪೂರ್ಣವಾಗಿ ಮೂಲಭೂತವಾದಿ ರಾಷ್ಟ್ರವಾಗಿದ್ದು, ಧರ್ಮಾಧಾರಿತ ಆಡಳಿತ ನಡೆಸುತ್ತಿದೆ.
ಇದನ್ನು ಓದಿ: ಬ್ರಿಟನ್ - ಚೀನಾ ಸುವರ್ಣ ಯುಗ ಮುಗಿದ ಅಧ್ಯಾಯ: ಪಿಎಂ ಸುನಕ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರಿಂದ, ವಿಶ್ವದ ಶಕ್ತಿಯುತ ರಾಷ್ಟ್ರಗಳೊಂದಿಗೆ ಇರಾನ್‌ನ 2015 ರ ಪರಮಾಣು ಒಪ್ಪಂದ ಕುಸಿದು ಬಿದ್ದಿತ್ತು. ಆದರೆ, ಟೆಹ್ರಾನ್ ಈಗ ಯುರೇನಿಯಂ ಅನ್ನು ಶೇ 60 ರಷ್ಟು ಶುದ್ಧತೆಗೆ ಸಂಸ್ಕರಿಸುತ್ತಿದೆ. ಇದು ಶಸ್ತ್ರಾಸ್ತ್ರ - ದರ್ಜೆಯ ಮಟ್ಟದಿಂದ ಒಂದು ಸಣ್ಣ, ತಾಂತ್ರಿಕ ಕಡಿಮೆ ಹಂತವಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಇರಾನ್ ಈಗಾಗಲೇ ಕನಿಷ್ಠ ಒಂದು ಪರಮಾಣು ಬಾಂಬ್ ಅನ್ನು ನಿರ್ಮಿಸಲು ಬೇಕಾಗುವಷ್ಟು ಯುರೇನಿಯಂ ಅನ್ನು ಹೊಂದಿದೆ ಎಂದು ಪರಮಾಣು ತಜ್ಞರು ಎಚ್ಚರಿಸಿದ್ದಾರೆ.
ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ, ವೇಲ್ಸ್ ವಿರುದ್ಧ ಇರಾನ್‌ನ 2-0 ಗೆಲುವು ಮೂಲಭೂತವಾದಿಗಳಿಗೆ ಖುಷಿ ನೀಡಿದೆ. ಟೆಹ್ರಾನ್‌ನಲ್ಲಿ ಗಲಭೆ ಪೊಲೀಸರು ಬೀದಿಯಲ್ಲಿ ಇರಾನ್ ಧ್ವಜಗಳನ್ನು ಹಾರಿಸಿದರು. ಇದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಆದರೆ ಖಮೇನಿ ಅವರೇ ಈ ಗೆಲುವನ್ನು ಒಪ್ಪಿಕೊಂಡಿರುವುದು ದೇಶದಲ್ಲಿ ಸಂತಸ ಮೂಡಿಸಿದೆ.
ಇದನ್ನು ಓದಿ: ಉರುಗ್ವೆ ವಿರುದ್ಧ ಗೆದ್ದು ಬೀಗಿದ ಪೋರ್ಚುಗಲ್; ರೊನಾಲ್ಡೋ ತಂಡಕ್ಕೆ 2-0 ಅಂತರದ ಗೆಲುವು