ಬಾಗ್ದಾದ್(ಇರಾಕ್): ಇರಾಕ್‌ನ ಎರ್ಬಿಲ್‌ನಲ್ಲಿರುವ ಯುಎಸ್ ಕಾನ್ಸುಲೇಟ್ ಸಮೀಪ ಮಂಗಳವಾರ ಒಂದರ ಹಿಂದೊಂದರಂತೆ ಹಲವು ಬಾಂಬ್ ಸ್ಫೋಟಗಳು ಸಂಭವಿಸಿವೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಕುರ್ದಿಶ್ ಪ್ರದೇಶದಲ್ಲಿನ ಇಸ್ರೇಲಿ ಗುಪ್ತಚರ ಸಂಸ್ಥೆಯಾದ ಮೊಸಾದ್‌ನ ಪ್ರಧಾನ ಕಚೇರಿ ಮತ್ತು ಈ ಪ್ರದೇಶದ ಕೆಲವು ಭಾಗಗಳಲ್ಲಿರುವ ಇರಾನ್ ವಿರೋಧಿ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಹೇಳಿದೆ. ಅಮೆರಿಕದ ಸೇನಾ ಸಿಬ್ಬಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
8 ಸ್ಥಳಗಳ ಮೇಲೆ ದಾಳಿ: ಎರ್ಬಿಲ್ ವಿಮಾನ ನಿಲ್ದಾಣದ ಬಳಿ ರೆವಲ್ಯೂಷನರಿ ಗಾರ್ಡ್ ಅಮೆರಿಕದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಎಬಿಸಿ ನ್ಯೂಸ್ ಪ್ರಕಾರ, ಈ ದಾಳಿಯ ನಂತರ ಎರ್ಬಿಲ್ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ.
ಅಕ್ಟೋಬರ್ 7ರಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದ ನಡುವೆ ಈ ದಾಳಿ ನಡೆದಿದೆ. ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಹಮಾಸ್ ಬೆಂಬಲಿಸುವ ಇರಾನ್, ಗಾಜಾದಲ್ಲಿ ಇಸ್ರೇಲಿ ಅಪರಾಧಗಳನ್ನು ಯುಎಸ್ ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ. ಇನ್ನೊಂದೆಡೆ, ತನ್ನ ಅಭಿಯಾನದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮಾರ್ಚ್ 15ರೊಳಗೆ ಮಿಲಿಟರಿ ಹಿಂಪಡೆಯಿರಿ: ಭಾರತಕ್ಕೆ ಮಾಲ್ಡೀವ್ಸ್ ಕೋರಿಕೆ