ETV Bharat / international

ತೈಲ ಸಂಸ್ಕರಣ ಸ್ಥಳದಲ್ಲಿ ಭಾರಿ ಸ್ಫೋಟ, 18 ಶೇಖರಣಾ ಘಟಕಗಳು ಬೆಂಕಿಗಾಹುತಿ - ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಸ್ಫೋಟ

ಇರಾನ್‌ನ ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಸ್ಫೋಟದ ತೀವ್ರತೆ ಹೆಚ್ಚಾಗ್ತಿದ್ದು, ರಕ್ಷಣಾ ತಂಡಗಳು ಸ್ಥಳದಿಂದ ಹೊರಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Massive explosion rocks  hydrocarbon refinery  special economic zone  hydrocarbon refinery in Birjand  ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಬೆಂಕಿ  ಸ್ಫೋಟದ ತೀವ್ರತೆ  ರಕ್ಷಣಾ ತಂಡ  ಪೂರ್ವ ಇರಾನ್‌ನ ಬಿರ್ಜಾಂಡ್  ಬಿರ್ಜಾಂಡ್ ವಿಶೇಷ ಆರ್ಥಿಕ ವಲಯ  ತೈಲ ಸಂಸ್ಕರಣಾ ಘಟಕ  ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಸ್ಫೋಟ  ಶೇಖರಣಾ ಘಟಕಗಳು ಬೆಂಕಿಗೆ ಆಹುತಿ
ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಸ್ಫೋಟ
author img

By ANI

Published : Dec 11, 2023, 10:29 AM IST

ಟೆಹ್ರಾನ್(ಇರಾನ್)​: ಪೂರ್ವ ಇರಾನ್‌ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈಗ ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟದಿಂದಾಗಿ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಸ್ಥಳದಿಂದ ದೂರ ಸರಿದಿವೆ.

ಇರಾನ್‌ನ ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಿದ ಗವರ್ನರ್ ಅಲಿ ಫಜೆಲಿ, ಬಿರ್ಜಾಂಡ್ ಆರ್ಥಿಕ ವಿಶೇಷ ವಲಯದಲ್ಲಿರುವ ರಿಫೈನರಿಯ ಎಲ್ಲಾ 18 ಘಟಕಗಳಿಗೆ ಬೆಂಕಿ ವ್ಯಾಪಿಸಿದೆ ಮತ್ತು ಅಗ್ನಿಯ ಕೆನ್ನಾಲಿಗೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಮೂರು ಶೇಖರಣಾ ಘಟಕಗಳಲ್ಲಿ ಸ್ಫೋಟ ಸಂಭವಿಸಿದ್ದು, ಉಳಿದ ಎಲ್ಲಾ ಶೇಖರಣಾ ಘಟಕಗಳಿಗೆ ಬೆಂಕಿ ವ್ಯಾಪಿಸಿದೆ. ಇರಾನ್‌ನ ವಿದೇಶಾಂಗ ಸಚಿವ ಅಹ್ಮದ್ ವಹಿದಿ ಮಾತನಾಡಿ, ಅವರು ದಕ್ಷಿಣ ಖೊರಾಸಾನ್ ಪ್ರಾಂತ್ಯದ ಗವರ್ನರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಸ್ಫೋಟಗೊಂಡಿರುವ ಸಂಸ್ಕರಣಾ ಘಟಕದ ಪರಿಸ್ಥಿತಿಯ ಬಗ್ಗೆ ವರದಿ ಕೇಳಿದರು. ತುರ್ತು ಸೇವೆಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಂಡಿರುವ ಬಿಕ್ಕಟ್ಟು ನಿರ್ವಹಣೆಯ ಪ್ರಯತ್ನಗಳ ಕುರಿತು ರಾಜ್ಯಪಾಲರು ವಾಹಿದಿ ಅವರಿಗೆ ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಇರಾನ್ ಸ್ಥಾವರಗಳಲ್ಲಿ ಸ್ಫೋಟಗಳು ಮತ್ತು ಬೆಂಕಿ ಹಚ್ಚುವಿಕೆಯ ನಿರಂತರ ವರದಿಗಳು ಕೇಳಿ ಬರುತ್ತಿವೆ ಎಂಬುದು ಗಮನಾರ್ಹ. ಅಕ್ಟೋಬರ್‌ನಲ್ಲಿಯೇ ಟೆಹ್ರಾನ್‌ನ ಹೊರವಲಯದಲ್ಲಿರುವ ಪರಂಡ್ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಸ್ಫೋಟಕ್ಕೆ ನೌಕರರ ನಿರ್ಲಕ್ಷ್ಯವೇ ಕಾರಣ ಎಂದು ಪ್ರದೇಶದ ಗವರ್ನರ್ ಆರೋಪಿಸಿದ್ದರು.

ಓದಿ: ಕದನವಿರಾಮ ನಿರ್ಣಯಕ್ಕೆ ವೀಟೋ; ಯುಎಸ್ ಕ್ರಮಕ್ಕೆ ವಿಶ್ವದ ರಾಷ್ಟ್ರಗಳ ಖಂಡನೆ

ಪ್ರತ್ಯೇಕ ಘಟನೆ- ಇರಾಕ್​ ವಿವಿಯಲ್ಲಿ ಅಗ್ನಿ ಅವಘಡ; ಇತ್ತೀಚೆಗೆ ಇರಾಕ್‌ನ ವಿಶ್ವವಿದ್ಯಾನಿಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಜನರು ಸಾವನ್ನಪ್ಪಿದ್ದರು. ಇರ್ಬಿಲ್ ನಗರದ ಸೊರಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಈ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದರು. ಬೆಂಕಿ ಹೊತ್ತಿಕೊಂಡಿದ್ದ ಸಮಯದಲ್ಲಿ ರಕ್ಷಣಾ ತಂಡಗಳು ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಿದ್ದರು. ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಒಟ್ಟಿಗೆ ಇರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ಗಾಯಗೊಂಡಿದ್ದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.