ETV Bharat / international

ಒಂದು ಬಾರಿ ಕಚ್ಚಿದರೆ ಹೊರ ಬರುವ ವಿಷದಿಂದ 100 ಜನರ ಸಾವು..! ಇದು ಜಗತ್ತಿನ ವಿಷಕಾರಿ ಹಾವು - ಇನ್​ಲ್ಯಾಂಡ್ ತೈಪಾನ್

ಇನ್​ಲ್ಯಾಂಡ್ ತೈಪಾನ್ ಅತ್ಯಂತ ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ 1 ನೇ ಸ್ಥಾನದಲ್ಲಿದೆ. ಹಾವಿನ ವಿಷವನ್ನು LD50 ವಿಷಕಾರಿ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಇದು ಹಾನಿಯನ್ನುಂಟುಮಾಡುವ ವಿಷದ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.

ಜಗತ್ತಿನ ಅತ್ಯಂತ ಮಾರಣಾಂತಿಕ ಹಾವು ಇನ್​ಲ್ಯಾಂಡ್ ತೈಪಾನ್
Inland Taipan is the deadliest snake in the world
author img

By

Published : Dec 13, 2022, 3:40 PM IST

ಹೈದರಾಬಾದ್: ಜನ ಅತಿ ಹೆಚ್ಚು ಭಯಪಡುವ ಸರೀಸೃಪವೆಂದರೆ ಅದು ಹಾವು. ಆದರೆ ಭೂಮಿಯ ಮೇಲಿರುವ 600 ವಿಷಕಾರಿ ಹಾವುಗಳ ಪೈಕಿ ಕೇವಲ 200 ಮಾತ್ರ ಮಾನವರಿಗೆ ಮಾರಣಾಂತಿಕವಾಗಿವೆ. ಇಂಥ ಅತ್ಯಂತ ವಿಷಪೂರಿತ ಹಾವುಗಳ ಪೈಕಿ ಇನ್​ಲ್ಯಾಂಡ್ ತೈಪಾನ್ ಕೂಡ ಒಂದು.

ಫೀಯರ್ಸ್​ ಸ್ನೇಕ್ ಎಂದೂ ಕರೆಯಲ್ಪಡುವ ಈ ಹಾವು ಮುಖ್ಯವಾಗಿ ಆಸ್ಟ್ರೇಲಿಯಾದಲ್ಲಿ ಜಾಸ್ತಿ ಕಂಡುಬರುತ್ತದೆ. ಈ ಹಾವುಗಳು ಸಾಮಾನ್ಯವಾಗಿ ಮಧ್ಯಮದಿಂದ ದೊಡ್ಡ ಗಾತ್ರದ್ದಾಗಿದ್ದು, ಚೌಕಾಕಾರದ ತಲೆಯನ್ನು ಹೊಂದಿರುತ್ತವೆ. ಆಸ್ಟ್ರೇಲಿಯಾ ಮ್ಯೂಸಿಯಂ ಪ್ರಕಾರ ಈ ಹಾವುಗಳು ದಿನದ ಆರಂಭದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಮರಳಿ ಗೂಡಿಗೆ ಹೋಗುವ ಮುನ್ನ ಇವು ನೆಲದ ಬಿರುಕುಗಳಲ್ಲಿ ಹೋಗುವುದು ಕಂಡು ಬರುತ್ತದೆ.

ಈ ಹಾವಿನ ವಿಷದ ಬಗ್ಗೆ ಹೇಳುವುದಾದರೆ, ಇನ್​ಲ್ಯಾಂಡ್ ತೈಪಾನ್ ಅತ್ಯಂತ ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ 1 ನೇ ಸ್ಥಾನದಲ್ಲಿದೆ. ಹಾವಿನ ವಿಷವನ್ನು LD50 ವಿಷಕಾರಿ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಇದು ಹಾನಿಯನ್ನುಂಟುಮಾಡುವ ವಿಷದ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.

ಸ್ಕೂಲ್ ಆಫ್ ಕೆಮಿಸ್ಟ್ರಿ, ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಪ್ರಕಾರ, ಇನ್​ಲ್ಯಾಂಡ್​ ತೈಪಾನ್ ಕಚ್ಚುವಿಕೆಯು 110 ಮಿಗ್ರಾಂ ವಿಷವನ್ನು ಹೊಂದಿರುತ್ತದೆ. ನಿಖರವಾಗಿ ಹೇಳಬೇಕೆಂದರೆ, ಒಂದು ಬಾರಿ ಕಚ್ಚುವಿಕೆಯಲ್ಲಿ ಹೊರಬರುವ ವಿಷದ ಪ್ರಮಾಣವು 100 ಕ್ಕೂ ಹೆಚ್ಚು ಜನರನ್ನು ಅಥವಾ 2,50,000 ಇಲಿಗಳನ್ನು ಕೊಲ್ಲಲು ಸಾಕಾಗುತ್ತದೆ.

ಏತನ್ಮಧ್ಯೆ, ಈ ಹಾವು ಆಸ್ಟ್ರೇಲಿಯಾದ ಹೊರಗಿನ ಪ್ರದೇಶಗಳಲ್ಲಿ ಕಾಣಿಸುವುದಿಲ್ಲ. ಇದು ಸಾಮಾನ್ಯವಾಗಿ ಕಾಡಿನಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ: ಮಗುವಿಗೆ ಹಾಲು ಕುಡಿಸುವ ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವು ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.