ಹ್ಯಾಂಗ್‌ಝೌ(ಚೀನಾ) : ಏಷ್ಯನ್ ಗೇಮ್ಸ್ 2023 ರ ಒಂಬತ್ತನೇ ದಿನವಾದ ಇಂದು ಭಾರತ ಮೊದಲ ಪದಕ ಗೆದ್ದುಕೊಂಡಿದೆ. ಭಾರತೀಯ ರೋಲರ್ ಸ್ಕೇಟರ್‌ಗಳ ಪುರುಷ ಮತ್ತು ಮಹಿಳೆಯರ 3000 ಮೀಟರ್ ತಂಡ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
-
Our Speed Skating 3000m Relay teams radiating JOY 🇮🇳🤩
— SAI Media (@Media_SAI) October 2, 2023 " class="align-text-top noRightClick twitterSection" data="
Many congratulations! 👍🏻#Cheer4India#Hallabol#JeetegaBharat#BharatAtAG22 pic.twitter.com/HAIbuVtHbR
">Our Speed Skating 3000m Relay teams radiating JOY 🇮🇳🤩
— SAI Media (@Media_SAI) October 2, 2023
Many congratulations! 👍🏻#Cheer4India#Hallabol#JeetegaBharat#BharatAtAG22 pic.twitter.com/HAIbuVtHbROur Speed Skating 3000m Relay teams radiating JOY 🇮🇳🤩
— SAI Media (@Media_SAI) October 2, 2023
Many congratulations! 👍🏻#Cheer4India#Hallabol#JeetegaBharat#BharatAtAG22 pic.twitter.com/HAIbuVtHbR
ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್‌ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಮತ್ತು ಕಾರ್ತಿಕಾ ಜಗದೀಶ್ವರನ್ ಅವರ ಮಹಿಳಾ ತಂಡವು ಕಂಚಿನ ಪದಕ ಗಳಿಸಿತು. 4:34.861 ಸೆಕೆಂಡ್‌ಗಳೊಂದಿಗೆ ಆಟ ಪೂರ್ಣಗೊಳಿಸಿ ಭಾರತ ಇಂದಿನ ಖಾತೆ ತೆರೆಯಿತು. ಹಾಗೆಯೇ, ಚೈನೀಸ್ ತೈಪೆ (4:19.447) ಮತ್ತು ದಕ್ಷಿಣ ಕೊರಿಯಾ 4:21.146 ಸೆಕೆಂಡ್ನಲ್ಲಿ ಆಟ ಮುಕ್ತಾಯಗೊಳಿಸಿ ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದುಕೊಂಡಿತು.
ಇನ್ನು ಆರ್ಯನ್‌ಪಾಲ್ ಸಿಂಗ್ ಘುಮಾನ್, ಆನಂದಕುಮಾರ್ ವೆಲ್‌ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಅವರು ಪುರುಷರ ತಂಡ ರಿಲೇಯಲ್ಲಿ 4:10.128 ಸೆಕೆಂಡ್‌ಗಳೊಂದಿಗೆ ಎರಡನೇ ಕಂಚಿನ ಪದಕ ಗೆದ್ದರು. ಚೈನೀಸ್ ತೈಪೆ (4:05.692) ಮತ್ತು ದಕ್ಷಿಣ ಕೊರಿಯಾ (4:05.702) ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿತು. ಭಾರತೀಯ ರೋಲರ್ ಸ್ಕೇಟರ್‌ಗಳು ಗುವಾಂಗ್‌ಝೌ 2010 ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಉಚಿತ ಸ್ಕೇಟಿಂಗ್ ಮತ್ತು ಜೋಡಿ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.
-
Congratulations to Karthika Jagdeeswaran, @heeral_sadhu and @aarathyskating. Our exceptional women's speed skating relay team wins a remarkable Bronze Medal in the Women's Speed Skating 3000m Relay at the Asian Games.
— Narendra Modi (@narendramodi) October 2, 2023 " class="align-text-top noRightClick twitterSection" data="
Their unwavering determination and outstanding teamwork is… pic.twitter.com/Gc0d2cOBYl
">Congratulations to Karthika Jagdeeswaran, @heeral_sadhu and @aarathyskating. Our exceptional women's speed skating relay team wins a remarkable Bronze Medal in the Women's Speed Skating 3000m Relay at the Asian Games.
— Narendra Modi (@narendramodi) October 2, 2023
Their unwavering determination and outstanding teamwork is… pic.twitter.com/Gc0d2cOBYlCongratulations to Karthika Jagdeeswaran, @heeral_sadhu and @aarathyskating. Our exceptional women's speed skating relay team wins a remarkable Bronze Medal in the Women's Speed Skating 3000m Relay at the Asian Games.
— Narendra Modi (@narendramodi) October 2, 2023
Their unwavering determination and outstanding teamwork is… pic.twitter.com/Gc0d2cOBYl
ಇನ್ನೊಂದೆಡೆ, ಇಂದು ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಕಬಡ್ಡಿ ಪಂದ್ಯವನ್ನು ಆರಂಭಿಸಲಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರರು ಕೂಡ ಇಂದು ತಮ್ಮ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ. ಭಾರತ ಒಟ್ಟಾರೆ 55 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.
ನಿನ್ನೆ ಬರೋಬ್ಬರಿ 15 ಪದಕಗಳನ್ನು ಬಾಚಿಕೊಂಡಿದ್ದ ಭಾರತ, ಇಂದು ಮತ್ತೆರೆಡು ಪದಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏಷ್ಯಾಡ್ನಲ್ಲಿ ಒಂದೇ ದಿನ 15 ಪದಕಗಳನ್ನು ಪಡೆದುಕೊಂಡಿರುವುದು ದಾಖಲೆಯಾಗಿದೆ. 2010 ರಲ್ಲಿ ನಡೆದ ಗುವಾಂಗ್ಝೋ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಒಂದೇ ದಿನ 11 ಪದಕಗಳನ್ನು ಭಾರತದ ಕ್ರೀಡಾಪಟುಗಳು ಮುಡಿಗೇರಿಸಿಕೊಂಡಿದ್ದರು. ಇದು ಇದುವರೆಗಿನ ದಾಖಲೆ ಆಗಿತ್ತು. ಅದನ್ನೀಗ ಹ್ಯಾಂಗ್‌ಝೌ ನಲ್ಲಿ ಪುಡಿಗಟ್ಟಿದ್ದು, ಒಂದೇ ದಿನ 15 ಪದಕ ಪಡೆದು ಭಾರತದ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್: ಬ್ಯಾಡ್ಮಿಂಟನ್, 100 ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತ