ಮಡಗಾಸ್ಕರ್ : ಏ.22ರಂದು ವಿಶ್ವದಾದ್ಯಂತ 'ಭೂ ದಿನ'ವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರವನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ. ಮಾಲಿನ್ಯ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ನಿನ್ನೆ ಎಲ್ಲೆಡೆ ವಿಶ್ವ ಭೂ ದಿನವನ್ನು ಆಚರಿಸಲಾಯಿತು.
ಮಡಗಾಸ್ಕರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭೂ ದಿನವನ್ನು ಆಚರಿಸಿತು. 200ಕ್ಕೂ ಹೆಚ್ಚು ಸ್ಥಳೀಯ ಮರಗಳ ಸಸಿಗಳನ್ನು ನೆಡುವ ಅಭಿಯಾನವನ್ನು ಆಯೋಜಿಸಿತ್ತು. ಮಡಗಾಸ್ಕರ್‌ನ ಸ್ಥಳೀಯ ಜಾತಿಯ ಮರಗಳಾದ ಬಾವೋಬಾಬ್ ಮತ್ತು ರವಿನಾಲ (traveller's palm)ಗಳನ್ನು ನೆಡಲಾಯಿತು. ಈ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಇದನ್ನೂ ಓದಿ: ಬೈಡನ್ ಪಕ್ಷದ ಸಂಸದೆ ಪಿಒಕೆ ಪ್ರವಾಸ.. ಇದಕ್ಕೂ ತಮ್ಗೂ ಸಂಬಂಧವಿಲ್ಲ ಎಂದ ಅಮೆರಿಕ!