ವಿಶ್ವಸಂಸ್ಥೆ: ಪ್ಯಾಲೆಸ್ಟೈನ್ನಲ್ಲಿ ಇಸ್ರೇಲ್ ವಸಾಹತುಗಳನ್ನು ಹಿಂತೆಗೆದುಕೊಳ್ಳುವ ವಿಶ್ವಸಂಸ್ಥೆಯ ಕರಡು ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. 145 ಕ್ಕೂ ಹೆಚ್ಚು ರಾಷ್ಟ್ರಗಳು ವಿಶ್ವಸಂಸ್ಥೆಯ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿವೆ ಎಂದು ತಿಳಿದು ಬಂದಿದೆ.
ಕಳೆದ 37 ದಿನಗಳಿಂದ ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದೆ. ಈ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಪ್ರಸ್ತಾಪವು ಪ್ಯಾಲೆಸ್ಟೈನ್ನಲ್ಲಿ ಇಸ್ರೇಲಿ ವಸಾಹತುಗಳಿಗೆ ವಿರುದ್ಧವಾಗಿದೆ. ಕೆನಡಾ, ಹಂಗೇರಿ, ಇಸ್ರೇಲ್, ಮಾರ್ಷಲ್ ಐಲ್ಯಾಂಡ್ಸ್, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ, ನೌರು, ಯುನೈಟೆಡ್ ಸ್ಟೇಟ್ಸ್ ಈ ಪ್ರಸ್ತಾಪದ ವಿರುದ್ಧ ಮತ ಚಲಾಯಿಸಿದವು. 18 ದೇಶಗಳ ಪ್ರತಿನಿಧಿಗಳು ಮತದಾನಕ್ಕೆ ಗೈರು ಹಾಜರಾಗಿದ್ದರು. ಪ್ರಸ್ತಾವನೆಯನ್ನು ಬೆಂಬಲಿಸಿ 145 ದೇಶಗಳು ಮತ ಚಲಾಯಿಸಿವೆ
"ಪೂರ್ವ ಜೆರುಸಲೆಮ್ ಮತ್ತು ಸಿರಿಯನ್ ಗೋಲನ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶದಲ್ಲಿ ಇಸ್ರೇಲಿ ವಸಾಹತುಗಳು" ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಅಗಾಧ ಬಹುಮತದಿಂದ ಅಂಗೀಕರಿಸಲಾಯಿತು. ಈ ಕರಡು ಪ್ರಸ್ತಾವನೆಯನ್ನು ನವೆಂಬರ್ 9 ರಂದು ಅಂಗೀಕರಿಸಲಾಗಿದೆ. ಈ ವೇಳೆ ಪೂರ್ವ ಜೆರುಸಲೆಮ್, ಆಕ್ರಮಿತ ಸಿರಿಯನ್ ಗೋಲನ್ ಮತ್ತು ಪ್ಯಾಲೆಸ್ಟೀನ್ ಪ್ರಾಂತ್ಯಗಳಲ್ಲಿನ ಸಮಸ್ಯೆಯನ್ನು ಪರಿಹರಿಸಲು ಇಸ್ರೇಲ್ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಖಂಡಿಸಲಾಯಿತು. ಜೊತೆಗೆ, ಈ ನಿರ್ಣಯವು ಗಾಜಾ ಪ್ರದೇಶದಲ್ಲಿ ಎಲ್ಲಾ ಇಸ್ರೇಲಿ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ, ಭಾರತ ಗಣರಾಜ್ಯವು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ವಸಾಹತುಗಾರರ ಮೂಲಕ ಇಸ್ರೇಲ್ ಪ್ಯಾಲೆಸ್ತೀನ್ ಅನ್ನು ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ. ಇಸ್ರೇಲ್‌ನ ವರ್ಣಭೇದ ನೀತಿ ಈಗಲೇ ಕೊನೆಗೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ಇಸ್ರೇಲ್, ಪ್ಯಾಲೆಸ್ತೈನ್ನಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹ : ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ