ETV Bharat / international

29 ಮ್ಯಾನ್ಮಾರ್ ಸೈನಿಕರನ್ನು ಮರಳಿ ಕಳುಹಿಸಿದ ಭಾರತ - 29 ಮ್ಯಾನ್ಮಾರ್ ಸೈನಿಕರನ್ನು ಮಿಜೋರಾಂನ ಚಂಫೈನಿಂದ

ಭಾರತದೊಳಗೆ ಬಂದಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ.

29 Myanmar soldiers repatriated to their country after 3 days

author img

By ETV Bharat Karnataka Team

Published : Nov 19, 2023, 7:48 PM IST

ಇಂಫಾಲ್/ಐಜ್ವಾಲ್ : ಗಡಿ ದಾಟಿ ಭಾರತದೊಳಗೆ ಬಂದಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಅಧಿಕಾರಿಗಳು ಭಾನುವಾರ ವಾಪಸ್ ಕಳುಹಿಸಿದ್ದಾರೆ. ಮ್ಯಾನ್ಮಾರ್​ನ ಚಿನ್ ರಾಜ್ಯದ ತುಯಿಬುಲ್​ನಲ್ಲಿರುವ ಶಿಬಿರವನ್ನು ನಾಗರಿಕ ಸಶಸ್ತ್ರ ಪಡೆಗಳು ವಶಪಡಿಸಿಕೊಂಡ ನಂತರ 29 ಮ್ಯಾನ್ಮಾರ್ ಸೈನಿಕರು ಗುರುವಾರ (ನವೆಂಬರ್ 16) ಮಿಜೋರಾಂನ ಚಂಫೈ ಜಿಲ್ಲೆಗೆ ನುಸುಳಿ ಬಂದಿದ್ದರು.

ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್​ಗಳು ಭಾನುವಾರ 29 ಮ್ಯಾನ್ಮಾರ್ ಸೈನಿಕರನ್ನು ಮಿಜೋರಾಂನ ಚಂಫೈನಿಂದ ಮಣಿಪುರದ ಮೋರೆಹ್ ಪಟ್ಟಣಕ್ಕೆ ಏರ್​ಲಿಫ್ಟ್​ ಮಾಡಿ ಅವರನ್ನು ಮ್ಯಾನ್ಮಾರ್​ನ ಮಿಲಿಟರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಬಯೋಮೆಟ್ರಿಕ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ, ಭಾರತೀಯ ಅಧಿಕಾರಿಗಳು ಎಲ್ಲಾ 29 ಸೈನಿಕರನ್ನು ನೆರೆಯ ದೇಶದ ತಮು (ಮೋರೆಹ್ ಗಡಿಯ ಎದುರು) ನಲ್ಲಿ ಮ್ಯಾನ್ಮಾರ್ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು" ಎಂದು ಅಧಿಕಾರಿಯೊಬ್ಬರು ಐಎಎನ್ಎಸ್​ಗೆ ತಿಳಿಸಿದ್ದಾರೆ. ಮಣಿಪುರ ರಾಜಧಾನಿ ಇಂಫಾಲ್​ನಿಂದ ದಕ್ಷಿಣಕ್ಕೆ 110 ಕಿ.ಮೀ ದೂರದಲ್ಲಿರುವ ಮೋರೆಹ್ ಪಟ್ಟಣವು ಭಾರತ-ಮ್ಯಾನ್ಮಾರ್ ಗಡಿಯುದ್ದಕ್ಕೂ ಅತಿದೊಡ್ಡ ಗಡಿ ವ್ಯಾಪಾರ ಕೇಂದ್ರವಾಗಿದೆ.

ನವೆಂಬರ್ 16 ರಂದು ಮೇಜರ್ ಮತ್ತು ಕ್ಯಾಪ್ಟನ್ ಸೇರಿದಂತೆ 29 ಮ್ಯಾನ್ಮಾರ್ ಸೈನಿಕರು ಮಿಜೋರಾಂನ ಚಂಫೈ ಜಿಲ್ಲೆಗೆ ಪಲಾಯನ ಮಾಡಿದ್ದರು ಎಂದು ಮಿಜೋರಾಂನ ಪೊಲೀಸ್ ಇನ್​ಸ್ಪೆಕ್ಟರ್ ಜನರಲ್ ಲಾಲ್ಬಿಯಾಕ್​ಥಂಗಾ ಖಿಯಾಂಗ್ಟೆ ತಿಳಿಸಿದ್ದಾರೆ. "ಮ್ಯಾನ್ಮಾರ್ ಸೇನಾ ಯೋಧರು ಗುರುವಾರ ಪೊಲೀಸರನ್ನು ಸಂಪರ್ಕಿಸಿದರು ಮತ್ತು ನಾವು ಅವರನ್ನು ಅಸ್ಸಾಂ ರೈಫಲ್ಸ್​ಗೆ ಹಸ್ತಾಂತರಿಸಿದ್ದೇವೆ. ಅವರು ಪ್ಯಾರಾ ಮಿಲಿಟರಿ ಪಡೆಯ ವಾಫೈ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಉಳಿದುಕೊಂಡಿದ್ದರು" ಎಂದು ಖಿಯಾಂಗ್ಟೆ ಐಎಎನ್ಎಸ್​ಗೆ ಮಾಹಿತಿ ನೀಡಿದರು.

ಚಿನ್ ರಾಷ್ಟ್ರೀಯ ಸಂಘಟನೆಯ (ಸಿಎನ್ಒ) ಸಶಸ್ತ್ರ ವಿಭಾಗವಾದ ಚಿನ್ ರಾಷ್ಟ್ರೀಯ ರಕ್ಷಣಾ ಪಡೆ (ಸಿಎನ್​ಡಿಎಫ್​) ಚಿನ್ ರಾಜ್ಯದ ತುಯಿಬುಲ್​ನಲ್ಲಿರುವ ಶಿಬಿರವನ್ನು ವಶಪಡಿಸಿಕೊಂಡ ನಂತರ 29 ಮ್ಯಾನ್ಮಾರ್ ಸೈನಿಕರು ಭಾರತೀಯ ಭೂಪ್ರದೇಶಕ್ಕೆ ಪಲಾಯನ ಮಾಡಿದ್ದರು.

ನವೆಂಬರ್ 13 ರಂದು ಕೂಡ ಮ್ಯಾನ್ಮಾರ್​ನ ಚಿನ್ ರಾಜ್ಯದ ಎರಡು ಮಿಲಿಟರಿ ನೆಲೆಗಳನ್ನು ಸಿಎನ್​ಡಿಎಫ್ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಅಧಿಕಾರಿಗಳು ಸೇರಿದಂತೆ ನಲವತ್ತೈದು ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪಲಾಯನ ಮಾಡಿದ್ದರು ಮತ್ತು ನಂತರ ಅವರನ್ನು ಐಎಎಫ್ ಹೆಲಿಕಾಪ್ಟರ್​ಗಳ ಮೂಲಕ ಮಣಿಪುರದ ಮೋರೆಹ್ ಪಟ್ಟಣಕ್ಕೆ ಸಾಗಿಸಿ, ಮರುದಿನ ಅವರನ್ನು ಮ್ಯಾನ್ಮಾರ್​ನ ಮಿಲಿಟರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ : ಪ್ಯಾಲೆಸ್ಟೈನ್ ಅಥಾರಿಟಿಗೆ ಅಧಿಕಾರ ಹಸ್ತಾಂತರಿಸಲ್ಲ; ಅಮೆರಿಕದ ಸಲಹೆ ತಿರಸ್ಕರಿಸಿದ ಇಸ್ರೇಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.