ETV Bharat / international

ಭಾರತದೆಡೆ ಪಾಕ್ ದೃಷ್ಟಿಕೋನ ಬದಲಾಗಲಿ: ಪಾಕಿಸ್ತಾನ ಮಾಧ್ಯಮಗಳ ಹಿತವಚನ! - ಭಾರತದೊಂದಿಗೆ ಪಾಕಿಸ್ತಾನವು ಸೌಹಾರ್ದಯುತ ಸಂಬಂಧ

ವಿಶ್ವಮಟ್ಟದಲ್ಲಿ ಭಾರತದ ಏಳಿಗೆಯನ್ನು ಕಂಡ ಪಾಕಿಸ್ತಾನದಲ್ಲಿ ನಡುಕ ಆರಂಭವಾಗಿದೆ. ಭಾರತದೊಂದಿಗೆ ಪಾಕಿಸ್ತಾನವು ಸೌಹಾರ್ದಯುತ ಸಂಬಂಧಗಳನ್ನು ಹೊಂದಬೇಕೆಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿಕೊಳ್ಳುತ್ತಿವೆ.

ಭಾರತದೆಡೆ ಪಾಕ್ ದೃಷ್ಟಿಕೋನ ಬದಲಾಗಲಿ: ಪಾಕಿಸ್ತಾನ ಮಾಧ್ಯಮಗಳ ಹಿತವಚನ!
india-is-relevant-to-world-pakistan-should-recalibrate-its-india-policy-pakistan-media
author img

By

Published : Jan 15, 2023, 7:20 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಅತ್ಯಂತ ವೇಗವಾಗಿ ಹಾಗೂ ಬಲಿಷ್ಠವಾಗಿ ಬೆಳೆಯುತ್ತಿರುವುದನ್ನು ನೋಡಿದ ಪಾಕಿಸ್ತಾನ ಗಾಬರಿಗೊಂಡಂತಿದೆ. ಭಾರತವು ಗಾತ್ರದಲ್ಲಿ ಮಾತ್ರ ದೊಡ್ಡದಾಗಿರದೆ ಆ ರಾಷ್ಟ್ರ ತನ್ನ ಹೆಜ್ಜೆಗುರುತಿನಿಂದ ಈಗ ಜಾಗತಿಕವಾಗಿ ಅತ್ಯಂತ ಪ್ರಸ್ತುತವಾಗಿ ಸ್ಥಾನಮಾನ ಪಡೆಯುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕ ಮಾಧ್ಯಮ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಹಾಡಿ ಹೊಗಳಿದೆ. ರಾಜಕೀಯ, ಭದ್ರತೆ ಮತ್ತು ರಕ್ಷಣಾ ವಿಶ್ಲೇಷಕರಾದ ಶಹಜಾದ್ ಚೌಧರಿ ಅವರು ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನಲ್ಲಿ ಅಭಿಪ್ರಾಯವನ್ನು ಬರೆದಿದ್ದಾರೆ. ನಾನು ಹೆನ್ರಿ ಕಿಸ್ಸಿಂಜರ್ ಆಗಿದ್ದರೆ ನಾನು ಭಾರತದ ಕುರಿತು ಒಂದು ಗ್ರಂಥವನ್ನು ಬರೆಯುತ್ತಿದ್ದೆ. ಭಾರತದ ಭವಿಷ್ಯವು ಅದ್ಭುತವಾಗಿ ಬದಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಏಷ್ಯಾದಲ್ಲಿ ಮತ್ತು ವಿಶಾಲವಾದ ಜಾಗತಿಕ ವೇದಿಕೆಯಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಕಳೆದ ವರ್ಷ ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2037 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಆದರೆ ಪಾಕಿಸ್ತಾನದ ಆರ್ಥಿಕತೆಯು ಜಾಗತಿಕ ಸಮುದಾಯದಿಂದ ಹಣಕಾಸಿನ ನೆರವಿನ ಮೇಲೆ ನಿಂತಿರುವುದು ಗಮನಾರ್ಹ. ಕಳೆದ ವರ್ಷ 1,739 ಜನರನ್ನು ಬಲಿತೆಗೆದುಕೊಂಡ ಮತ್ತು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದ ವಿನಾಶಕಾರಿ ಪ್ರವಾಹದ ನಂತರ ದೇಶದಲ್ಲಿ ಸ್ಥಿರತೆಗಾಗಿ ಹೋರಾಡುತ್ತಿರುವ, ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಮುದಾಯವು 8 ಶತಕೋಟಿ ಯುಎಸ್​ ಡಾಲರ್​ ನೆರವು ನೀಡಿರುವುದು ಆ ದೇಶಕ್ಕೆ ತಕ್ಷಣಕ್ಕೆ ಸಿಕ್ಕ ದೊಡ್ಡ ಪರಿಹಾರವಾಗಿದೆ.

ಇದಲ್ಲದೆ, ಭಾರತವು 600 ಶತಕೋಟಿ ಯುಎಸ್​ ಡಾಲರ್​ಗಳಿಗಿಂತ ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದ್ದು, ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಚೌಧರಿ ಶ್ಲಾಘಿಸಿದ್ದಾರೆ. ಆದರೆ ಪಾಕಿಸ್ತಾನವು ಪ್ರಸ್ತುತ 4.5 ಶತಕೋಟಿ ಯುಎಸ್​ ಡಾಲರ್​​ನಷ್ಟು ವಿದೇಶಿ ವಿನಿಮಯವನ್ನು ಮಾತ್ರ ಹೊಂದಿದೆ. ಪಾಕಿಸ್ತಾನವು 1971 ರಿಂದ ಈಚೆಗೆ ಅತ್ಯಂತ ಗಂಭೀರವಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಾನೇ ಮಾಡಿದ ತಪ್ಪುಗಳಿಂದ ದೇಶದ ರಾಜಕೀಯ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನಕ್ಕೆ ಯಾವುದೇ ಗೌರವವೂ ಈಗ ಉಳಿದಿಲ್ಲ.

ಯುಎಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದೊಂದಿಗೆ ಭಾರತವನ್ನು ಹೋಲಿಸಿರುವ ಚೌಧರಿ, ಜಿಡಿಪಿಯಲ್ಲಿ ಭಾರತದ ಬೆಳವಣಿಗೆಯ ದರವು ಚೀನಾದ ನಂತರ ಕಳೆದ ಮೂರು ದಶಕಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಥಿಕತೆಗೆ ಹೊಂದಿಕೆಯಾಗುತ್ತದೆ ಎಂದಿದ್ದಾರೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು 1992 ರಲ್ಲಿ 9.2 ರಷ್ಟಿದ್ದುದು, 2004 ರ ಹೊತ್ತಿಗೆ 100 ಶತಕೋಟಿ ಯುಎಸ್​​ಡಾಲರ್​ಗೆ ತಲುಪಿದೆ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಭಾರತವು 2014 ರಲ್ಲಿ 252 ಶತಕೋಟಿ USD ಗೆ ತನ್ನ ಸಂಗ್ರಹಗಳನ್ನು ಹೆಚ್ಚಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಇದು 600 ಶತಕೋಟಿಗೆ ಏರಿದೆ ಮತ್ತು ಜಿಡಿಪಿ ಮೂರು ಟ್ರಿಲಿಯನ್ ಯುಎಸ್​ ಡಾಲರ್​ಗಿಂತಲೂ ಹೆಚ್ಚು ಗಾತ್ರವನ್ನು ಹೊಂದಿದೆ. ಇದು ಭಾರತವನ್ನು ಎಲ್ಲಾ ಹೂಡಿಕೆದಾರರಿಗೆ ಆದ್ಯತೆಯ ತಾಣವನ್ನಾಗಿ ಮಾಡುವ ಅಪ್ರತಿಮ ಪ್ರಗತಿಯಾಗಿದೆ. ಹೀಗಾಗಿ ಭಾರತದೆಡೆ ಪಾಕ್ ದೃಷ್ಟಿಕೋನ ಬದಲಾಗಲಿ ಎಂದು ಚೌಧರಿ ಬರೆದಿದ್ದಾರೆ.

ಇದನ್ನೂ ಓದಿ: ಮಹಿಳೆಯರ ವಿರುದ್ಧ ತಾಲಿಬಾನ್​ ನೀತಿಗೆ ಖಂಡನೆ: ಏಕದಿನ ಕ್ರಿಕೆಟ್​ ಸರಣಿಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.