ಲಂಡನ್: ನಾವು ಮತ್ತೊಮ್ಮೆ ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಿರ್ಧರಿಸಿದ್ದೇವೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದರು. ಇಲ್ಲಿನ 10 ಡೌನಿಂಗ್ ಸ್ಟ್ರೀಟ್‌ನ ಗಾರ್ಡನ್ಸ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಂನ ಯುಕೆ - ಇಂಡಿಯಾ ವೀಕ್ 2023 ರ ಸಂದರ್ಭದಲ್ಲಿ ವಿಶೇಷ ಸ್ವಾಗತ ಆಯೋಜಿಸಿದ್ದ ವೇಳೆ ಈ ಮಾತನ್ನು ಹೇಳಿದರು.
ಈ ಸಮಾರಂಭದಲ್ಲಿ, ರಿಷಿ ಸುನಕ್ ಅವರು ಮೇರಿ ಕೋಮ್, ಶಂಕರ್ ಮಹಾದೇವನ್, ಜಾಕಿರ್ ಹುಸೇನ್ ಮತ್ತು ಸೋನಮ್ ಕಪೂರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳನ್ನು ಭೇಟಿಯಾದರು. ಪಿಎಂ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
-
Business. Innovation. Culture. And of course... cricket🏏
— UK Prime Minister (@10DowningStreet) June 28, 2023 " class="align-text-top noRightClick twitterSection" data="
The UK and India share so much.
Tonight, in #UKIndiaWeek, Prime Minister @RishiSunak welcomed business leaders to Downing Street, celebrating their work in bringing our nations even closer together 🇬🇧🤝🇮🇳 pic.twitter.com/gcQQcPb3Wu
">Business. Innovation. Culture. And of course... cricket🏏
— UK Prime Minister (@10DowningStreet) June 28, 2023
The UK and India share so much.
Tonight, in #UKIndiaWeek, Prime Minister @RishiSunak welcomed business leaders to Downing Street, celebrating their work in bringing our nations even closer together 🇬🇧🤝🇮🇳 pic.twitter.com/gcQQcPb3WuBusiness. Innovation. Culture. And of course... cricket🏏
— UK Prime Minister (@10DowningStreet) June 28, 2023
The UK and India share so much.
Tonight, in #UKIndiaWeek, Prime Minister @RishiSunak welcomed business leaders to Downing Street, celebrating their work in bringing our nations even closer together 🇬🇧🤝🇮🇳 pic.twitter.com/gcQQcPb3Wu
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2030 ರ ಮಾರ್ಗಸೂಚಿಯಲ್ಲಿ ನಾವು ಒಟ್ಟಿಗೆ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ನಮ್ಮ ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗುವ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದವನ್ನು ನಾವು ಮಾಡಲು ಬಯಸುತ್ತಿದ್ದೇವೆ. ಇಲ್ಲಿ ಭಾರತ ಮತ್ತು ದೇಶೀಯವಾಗಿ ವ್ಯಾಪಾರಗಳು ಮತ್ತು ಗ್ರಾಹಕರಿಗೆ ಪ್ರಚಂಡ ಅವಕಾಶಗಳನ್ನು ತರುತ್ತೇವೆ ಎಂದು ಸುನಕ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಪತ್ನಿ ಅಕ್ಷತಾ ಮೂರ್ತಿ ಮತ್ತು ಅತ್ತೆ ಸುಧಾ ಮೂರ್ತಿ ಭಾಗಿಯಾಗಿದ್ದರು. ಇದು ಕೇವಲ ಇಂಗ್ಲೆಂಡ್ - ಇಂಡಿಯಾ ವೀಕ್ ಅಲ್ಲ, ಯುಕೆಯಲ್ಲಿ ಭಾರತದ ಬೇಸಿಗೆ ಆರಂಭ ಎಂದು ಹೇಳಿದರು.
ಶುಕ್ರವಾರದವರೆಗೆ ನಡೆಯುವ ಇಂಡಿಯಾ ಗ್ಲೋಬಲ್ ಫೋರಮ್‌ನ (ಐಜಿಎಫ್) ಐದನೇ ವಾರ್ಷಿಕ ಯುಕೆ-ಇಂಡಿಯಾ ವೀಕ್, ದ್ವಿಪಕ್ಷೀಯ ಸಂಬಂಧದೊಳಗೆ ಗಮನಹರಿಸಬೇಕಾದ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚಿಸಲು ಮಂತ್ರಿಗಳು, ವ್ಯಾಪಾರ ಮುಖಂಡರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುತ್ತದೆ.
ಐಜಿಎಫ್ ಸಂಸ್ಥಾಪಕ ಮನೋಜ್ ಲಾಡ್ವಾ ಮಾತನಾಡಿ, ನಾವೆಲ್ಲರೂ ವೈವಿಧ್ಯಮಯ ಹಿನ್ನೆಲೆ, ಅನುಭವಗಳು ಮತ್ತು ದೂರದ ಪ್ರದೇಶಗಳಿಂದ ಇಲ್ಲಿಗೆ ಬಂದಿದ್ದೇವೆ. ಆದರೂ ನಮ್ಮನ್ನು ಒಂದುಗೂಡಿಸುವುದು ನಮ್ಮ ಉತ್ಸಾಹ ಆಗಿದೆ. ಯುಕೆ ಮತ್ತು ಭಾರತದ ನಡುವಿನ ಗೆಲುವಿನ ಪಾಲುದಾರಿಕೆ ಹೆಚ್ಚಿಸಲು ಕೊಡುಗೆ ನೀಡಿ ಎಂದು ಹೇಳಿದರು.
ಓದಿ: AI safety: AI ನಿಂದ ಅಪಾಯ: ವರ್ಷಾಂತ್ಯಕ್ಕೆ ಜಾಗತಿಕ ಎಐ ಸುರಕ್ಷತಾ ಶೃಂಗಸಭೆ
ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ: ಇತ್ತಿಚೇಗೆ ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಬಹಳ ಅದ್ಧೂರಿಯಿಂದ ಲಂಡನ್ನ ವೆಸ್ಟ್ಮಿನ್ಸ್ಟರ್ನ ಅಬ್ಬೆಯಲ್ಲಿ ನಡೆಯಿತು. ಪಟ್ಟಾಭಿಷೇಕದ ಸಂದರ್ಭ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಬೈಬಲ್ ಪಠಣ ಮಾಡಿದ್ದರು. ರಿಷಿ ಸುನಕ್ ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನಿಯಾಗಿದ್ದಾರೆ. ಹಿಂದೂ ಸಂಪ್ರದಾಯವನ್ನು ಪಾಲಿಸುವ ಅವರು ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಬೈಬಲ್ ಪಠಣ ಮಾಡುವ ಮೂಲಕ ಬಹುತ್ವದ ನಂಬಿಕೆಯನ್ನು ಸಾರಿದ್ದರು.
ಪಟ್ಟಾಭಿಷೇಕ ಮುನ್ನ ಮೋದಿ ಭೇಟಿ: ಹಿರೋಷಿಮಾದಲ್ಲಿ ಯುನೈಟೆಡ್ ಕಿಂಗ್‌ಡಂ (ಯುಕೆ) ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಆಲಿಂಗನ ಮಾಡಿಕೊಂಡ ದೃಶ್ಯ ಗಮನ ಸೆಳೆಯಿತು. "ಬ್ರಿಟಿಷ್ ಪ್ರಧಾನಿ ಸುನಕ್ ಅವರೊಂದಿಗಿನ ಚರ್ಚೆ ಅತ್ಯಂತ ಫಲಪ್ರದವಾಗಿತ್ತು. ವ್ಯಾಪಾರ, ನಾವೀನ್ಯತೆ, ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ನಾವು ಮಾತನಾಡಿದೆವು" ಎಂದು ಆ ಸಮಯದಲ್ಲಿ ಮೋದಿ ಹೇಳಿದ್ದರು.