ETV Bharat / international

ದಂಪತಿ ನಡುವೆ ಜಗಳ: ಪರಸ್ಪರ ಗುಂಡು ಹಾರಿಸಿಕೊಂಡ ಗಂಡ - ಹೆಂಡತಿ

ಪಾಕಿಸ್ತಾನದ ಪೇಶಾವರದಲ್ಲಿ ದಂಪತಿ ಜಗಳವಾಡಿಕೊಂಡು ತಮ್ಮ ಮಗನ ಮುಂದೆಯೇ ಪರಸ್ಪರ ಗುಂಡು ಹಾರಿಸಿಕೊಂಡಿರುವ ಘಟನೆ ನಡೆದಿದೆ.

husband wife shoot each other dead
ದಂಪತಿಗಳ ನಡುವೆ ಜಗಳ:ಪರಸ್ಪರ ಗುಂಡು ಹಾರಿಸಿಕೊಂಡ ಗಂಡ-ಹೆಂಡತಿ
author img

By

Published : Mar 4, 2023, 9:53 PM IST

ಕರಾಚಿ(ಪಾಕಿಸ್ತಾನ): ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಈ ದಿನಗಳಲ್ಲಿ ಅಪರಾಧ, ಕಿರುಕುಳ ಮತ್ತು ಮೋಸದಂತಹ ಆಘಾತಕಾರಿ ಘಟನೆಗಳಿಂದ ಈ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ ಇಂತಹ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

25 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ: ಪಾಕಿಸ್ತಾನ ಈ ಘಟನೆಯು ಅಂತಹ ಪ್ರಕರಣಗಳಿಗೆ ಸೇರ್ಪಡೆಯಾಗಿದೆ. ಆದರೂ ಇದು ಅಪರೂಪದ ಮತ್ತು ಆಘಾತಕಾರಿ ಕ್ಲೈಮ್ಯಾಕ್ಸ್​​ ಅನ್ನು ಹೊಂದಿದೆ. ಪೇಶಾವರದಲ್ಲಿ ಈ ಘಟನೆ ನಡೆದಿದ್ದು, ಕಳೆದ 25 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ತಮ್ಮ ಮಗನ ಮುಂದೆ ಜಗಳವಾಡಿಕೊಂಡು ನಂತರ ಒಬ್ಬರನೊಬ್ಬರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಾಂತೀಯ ರಾಜಧಾನಿಯ ಶಹಾಬ್ ಖೇಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪತಿ ಬಕ್ಷೀಶ್, ತನ್ನ ಪತ್ನಿ ಮಿಸ್ಮಾ ಜೊತೆ ವಾಗ್ವಾದ ನಡೆದಿದೆ. ನಂತರ ಜಗಳ ತಾರಕಕ್ಕೇರಿ ಪತಿ, ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಮಿಸ್ಮಾ ಹೇಗೋ ಮತ್ತೊಂದು ಕೋಣೆಗೆ ಓಡಿ ಹೋಗಿ ಅಲ್ಲಿಂದ ಮತ್ತೊಂದು ಬಂದೂಕನ್ನು ತೆಗೆದುಕೊಂಡು ಬಂದು ಪ್ರತೀಕಾರವಾಗಿ ತನ್ನ ಗಂಡನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:2018ರಲ್ಲಿ ಗುಹೆಯಿಂದ ಪಾರಾಗಿದ್ದ ಫುಟ್ಬಾಲ್ ಆಟಗಾರ ಅನುಮಾನಾಸ್ಪದ ಸಾವು: ಲೈವ್​ನಲ್ಲಿ ಮಗನ ಅಂತ್ಯಕ್ರಿಯೆ ವೀಕ್ಷಿಸಿದ ಪೋಷಕರು

ಮಗನೇ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿರಬಹುದು ಎಂದು ಶಂಕೆ: ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಲಾಶ್ನಿಕೋವ್, ಪಿಸ್ತೂಲ್ ಮತ್ತು ಖಾಲಿ ಶೆಲ್​ಗಳನ್ನು ಮನೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಇಬ್ಬರ ಮರಣೋತ್ತರ ವರದಿಗಳಿಗಾಗಿ ಕಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. "ಕ್ರಾಸ್ ಫೈರಿಂಗ್" ನಿಂದ ಸಾವುಗಳು ಸಂಭವಿಸಿವೆ ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಿಸ್ಮಾಳನ್ನು ಕೊಲ್ಲುವುದನ್ನು ನೋಡಿದ ನಂತರ ಸೇಡು ತೀರಿಸಿಕೊಳ್ಳಲು ಮಗನೇ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಹೊರತಾಗಿ, ಘಟನೆಯಲ್ಲಿ ಬಳಸಿದ ಶಸ್ತ್ರಾಸ್ತ್ರಗಳ ವಿಧಿವಿಜ್ಞಾನ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಈ ಹಿಂದೆ ಮಸೀದಿ ಬಳಿ ಸಂಭವಿಸಿದ ಸ್ಫೋಟ: ಪೇಶಾವರಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ವಿಶೇಷವಾಗಿ ದರೋಡೆ ಮತ್ತು ಮೊಬೈಲ್ ಫೋನ್ ಸ್ನ್ಯಾಚಿಂಗ್ ಘಟನೆಗಳ ಹೆಚ್ಚಳವಾಗಿವೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವುದರೊಂದಿಗೆ ಪಾಕಿಸ್ತಾನವನ್ನು ಬಾಧಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಈ ರೀತಿಯ ಘಟನೆಗಳು ಜನರನ್ನು ಬೆಚ್ಚಿ ಬೀಳಿಸಿದೆ. ಜನವರಿಯಲ್ಲಿ ಪೇಶಾವರದ ಮಸೀದಿಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ:ಮಾ.10ಕ್ಕೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್.. ಮತ್ತೆರಡು ದಿನ ಸಿಬಿಐ ವಶಕ್ಕೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.