ETV Bharat / international

ಭಾರತ ಹೊಗಳಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ - ಅಪರಿಚಿತರು ಖಾನ್​ ಮೇಲೆ ಗುಂಡಿನ ದಾಳಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಬಲಗಾಲಿಗೆ ಗುಂಡು ತಾಕಿ ಗಾಯಗೊಂಡಿದ್ದಾರೆ.

imran-khan-container-rally-firing-attack
ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ
author img

By

Published : Nov 3, 2022, 5:25 PM IST

Updated : Nov 3, 2022, 7:04 PM IST

ಲಾಹೋರ್​(ಪಾಕಿಸ್ತಾನ): ಭ್ರಷ್ಟಾಚಾರ, ಅಸಮರ್ಥ ಆಡಳಿತದಿಂದಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಇಮ್ರಾನ್​ ಖಾನ್​ ಮತ್ತು ಅವರ ಆಪ್ತ ಸಹಾಯಕ ಗಾಯಗೊಂಡಿದ್ದಾರೆ. ಬಳಿಕ ಖಾನ್​ರನ್ನು ಅಜ್ಞಾತಸ್ಥಳಕ್ಕೆ ಕರೆದೊಯ್ಯಲಾಗಿದೆ.

ಈಗಿನ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿ, ಭಾರತವನ್ನು ಹೊಗಳುತ್ತಿದ್ದ ಇಮ್ರಾನ್​ ಖಾನ್​ ಚುನಾವಣೆಯ ಸಿದ್ಧತೆಯ ಭಾಗವಾಗಿ ಲಾಹೋರ್​ನಿಂದ 100 ಕಿಮೀ ದೂರದಲ್ಲಿರುವ ವಜೀರಾಬಾದ್​ನಲ್ಲಿ ಇಂದು ತೆರೆದ ವಾಹನದಲ್ಲಿ ರ‍್ಯಾಲಿ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಖಾನ್​ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ದಾಳಿಕೋರನ ಬಂಧನ: ಗುಂಡಿನ ದಾಳಿಯಲ್ಲಿ ಇಮ್ರಾನ್​ ಖಾನ್​ ಬಲಗಾಲಿಗೆ ಪೆಟ್ಟಾಗಿದೆ. ದಾಳಿ ಬಳಿಕ ಖಾನ್​ರನ್ನು ಪೊಲೀಸರು ಬುಲೆಟ್​ ಪ್ರೂಫ್​ ಜಾಕೆಟ್​ ಸಮೇತ ಇನ್ನೊಂದು ವಾಹನದಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ಭಿತ್ತರಿಸಿವೆ.

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ

ದಾಳಿ ಬಳಿಕ ಇಮ್ರಾನ್​ ಖಾನ್​ರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮೊದಲು ದಾಳಿಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ವರದಿಯಾಗಿತ್ತು. ಬಳಿಕ ಇಮ್ರಾನ್​ ಖಾನ್​ ಮತ್ತು ಅವರ ಆಪ್ತ ಸಹಾಯಕ ಕೂಡ ಗಾಯಗೊಂಡಿರುವುದು ಗೊತ್ತಾಗಿದೆ.

ಪ್ರಚಾರ ಕಾರ್ಯದಲ್ಲಿ ತೊಡಗಿರುವ ಇಮ್ರಾನ್​ ಖಾನ್​ ಕಳೆದ ಶುಕ್ರವಾರದಿಂದ ಲಾಹೋರ್​ನಿಂದ ಇಸ್ಲಾಮಾಬಾದ್​ಗೆ ರ್ಯಾಲಿ ಆರಂಭಿಸಿದ್ದಾರೆ. ಇಂದು ಪಂಜಾಬ್‌ನ ವಜೀರಾಬಾದ್‌ನ ಅಲ್ಲಾವಾಲಾ ಚೌಕ್ ರ‍್ಯಾಲಿ ಬರುತ್ತಿದ್ದಾಗ ಬಂದೂಕುದಾರಿ ವ್ಯಕ್ತಿಯೊಬ್ಬ ಇಮ್ರಾನ್​ ಖಾನ್ ಇದ್ದ ವಾಹನವನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾನೆ.

ಓದಿ: ದಕ್ಷಿಣ ಕೊರಿಯಾ ಜಲಗಡಿಗೆ ಬಿದ್ದ ಉತ್ತರ ಕೊರಿಯಾ ಕ್ಷಿಪಣಿ.. ರಾಷ್ಟ್ರಗಳ ಮಧ್ಯೆ ಯುದ್ಧಭೀತಿ

Last Updated : Nov 3, 2022, 7:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.